Site icon Vistara News

IPL 2024 : ಮುಂಬೈ ಇಂಡಿಯನ್ಸ್​ ತಂಡ ಸೇರಿಕೊಂಡ ವೆಸ್ಟ್​ ಇಂಡೀಸ್​ ಬೌಲರ್​

Romario Shepherd

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ( IPL 2024) ಟ್ರೇಡಿಂಗ್ ವಿಂಡೋ ತೆರೆದಿದೆ. ಅಂತೆಯೇ ಆಲ್​ರೌಂಡರ್ ರೊಮಾರಿಯೊ ಶೆಫರ್ಡ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಮುಂಬೈ ಇಂಡಿಯನ್ಸ್ (ಎಂಐ) ಫ್ರಾಂಚೈಸಿ. ಈ ಬಗ್ಗೆ ಅದು ಮಾಹಿತಿ ಬಹಿರಂಗ ಮಾಡಿದೆ. ಗಯಾನಾ ಮೂಲದ 28 ವರ್ಷದ ರೊಮಾರಿಯೊ ಶೆಫರ್ಡ್ ವೆಸ್ಟ್ ಇಂಡೀಸ್ ಪರ 25 ಏಕದಿನ ಮತ್ತು 31 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 51 ವಿಕೆಟ್ ಮತ್ತು 584 ರನ್ ಗಳಿಸಿದ್ದಾರೆ. ಐಪಿಎಲ್​ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಗಳ ಭಾಗವಾಗಿದ್ದ ಅವರು ಕೇವಲ 4 ಪಂದ್ಯಗಳನ್ನು ಆಡಿದ್ದಾರೆ. 58 ರನ್ ಮತ್ತು 3 ವಿಕೆಟ್ ಪಡೆದಿದ್ದಾರೆ.

ಶೆಫರ್ಡ್ ಐಪಿಎಲ್ 2023 ರಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದ್ದರು. ಎಲ್ಎಸ್ಜಿ ಪರ ಹೆಚ್ಚು ಅವಕಾಶ ಪಡೆದಿರಲಿಲ್ಲ. ಈಗ ಅವರು ಐಪಿಎಲ್ 2024 ಪಂದ್ಯಾವಳಿಗಾಗಿ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಟಾಟಾ ಐಪಿಎಲ್ 2024 ಕ್ಕೆ ಮುಂಚಿತವಾಗಿ ನಡೆಯುತ್ತಿರುವ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೇಡಿಂಗ್ ವಿಂಡೋದಲ್ಲಿ ರೊಮಾರಿಯೊ ಶೆಫರ್ಡ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ನಿಂದ ಮುಂಬೈ ಇಂಡಿಯನ್ಸ್ (ಎಂಐ) ಗೆ ಮಾರಾಟ ಮಾಡಲಾಗಿದೆ. ಎಲ್ಎಸ್ಜಿ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿ 4 ಐಪಿಎಲ್ ಪಂದ್ಯಗಳನ್ನು ಆಡಿರುವ ಶೆಫರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ತನ್ನ ಪ್ರಸ್ತುತ ಶುಲ್ಕವಾದ 50 ಲಕ್ಷ ರೂ.ಗೆ ಖರೀದಿಸಿದೆ” ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

“ಎಲ್ಎಸ್​ಜಿಯೊಂದಿಗಿನ ಯಶಸ್ವಿ ವ್ಯಾಪಾರದ ನಂತರ ನಾವು ವೆಸ್ಟ್ ಇಂಡೀಸ್ ಆಲ್ರೌಂಡರ್ ರೊಮಾರಿಯೊ ಶೆಫರ್ಡ್ ಅವರ ಸೇವೆಗಳನ್ನು ಪಡೆದುಕೊಂಡಿದ್ದೇವೆ” ಎಂದು ಮುಂಬೈ ಇಂಡಿಯನ್ಸ್ ಎಕ್ಸ್ ನಲ್ಲಿ ಘೋಷಿಸಿದೆ.

ಟ್ರೇಡ್ ವಿಂಡೋ ತೆರೆದಿದೆ ಮತ್ತು ಎಲ್ಲಾ ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ನವೆಂಬರ್ 15 ರೊಳಗೆ ಐಪಿಎಲ್ಗೆ ಸಲ್ಲಿಸಬೇಕು. ಐಪಿಎಲ್ 2024 ರ ಹರಾಜು ಡಿಸೆಂಬರ್ 19 ರಂದು ನಡೆಯಲಿದೆ ಎಂದು ವರದಿಯಾಗಿದೆ.

Exit mobile version