Site icon Vistara News

IPL 2023 : ಮುಂಬಯಿ ಇಂಡಿಯನ್ಸ್​ ಗೆಲುವಿಗೆ 215 ರನ್​ಗಳ ಕಠಿಣ​ ಸವಾಲೊಡ್ಡಿದ ಪಂಜಾಬ್ ಕಿಂಗ್ಸ್​

#image_title

ಮೊಹಾಲಿ: ಲಿಯಾಮ್​ ಲಿವಿಂಗ್​ ಸ್ಟನ್​ (82) ಹಾಗೂ ಜಿತೇಶ್​ ಶರ್ಮಾ (49) ಜೋಡಿಯ ವಿಸ್ಫೋಟಕ ಬ್ಯಾಟಿಂಗ್ ನೆರವು ಪಡೆದ ಪಂಜಾಬ್ ಕಿಂಗ್ಸ್​ ತಂಡ ಐಪಿಎಲ್ 16ನೇ ಆವೃತ್ತಿಯ 46ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ಮೊದಲು ಬ್ಯಾಟ್​ ಮಾಡಿ 214 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಈ ಮೂಲಕ ಪ್ರವಾಸಿ ಮುಂಬಯಿ ಇಂಡಿಯನ್ಸ್ ತಂಡಕ್ಕೆ 215 ರನ್​ಗಳನ್ನು ಪೇರಿಸಿ ಗೆಲ್ಲುವ ಸವಾಲು ಎದುರಾಗಿದೆ.

ಪಂಜಾಬ್​ ಕ್ರಿಕೆಟ್​​ ಅಸೋಸಿಯೇಷನ್​ ಗ್ರೌಂಡ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬಯಿ ಇಂಡಿಯನ್ಸ್ ತಂಡದ ನಾಯಕ ರೋಹಿತ್​ ಶರ್ಮಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಪಂಜಾಬ್​ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 214 ರನ್​ ಬಾರಿಸಿತು.

ಇದನ್ನೂ ಓದಿ : IPL 2023 : ಕೆಕೆಆರ್​ ವಿರುದ್ಧ ಸೋಲಿನ ಸಿಟ್ಟಿಗೆ ವಿರಾಟ್​ ಕೊಹ್ಲಿ ಬೈದಿದ್ದು ಯಾರಿಗೆ?

ಮೊದಲು ಬ್ಯಾಟ್​ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಪ್ರಭ್​ ಸಿಮ್ರಾನ್​ ಸಿಂಗ್​ 9 ರನ್​ಗಳಿಗೆ ಔಟಾಗುವ ಮೂಲಕ ಹಿನ್ನಡೆ ಉಂಟಾಯಿತು. ಆದರೆ, ಮತ್ತೊಂದು ಬದಿಯಲ್ಲಿ ಶಿಖರ್​ ಧವನ್​ 20 ಎಸೆತಗಳಲ್ಲಿ 30 ರನ್​ ಬಾರಿಸಿ ಆಧಾರವಾದರು. ಮ್ಯಾಥ್ಯೂ ಶಾರ್ಟ್ಸ್ ಸ್ವಲ್ಪ ಮಟ್ಟಿಗೆ ಅವರಿಗೆ ನೆರವಾದರು. 62 ರನ್​ಗಳಿಗೆ ಪಂಜಾಬ್ ತಂಡದ ಎರಡನೇ ವಿಕೆಟ್​ ಉರುಳಿದರೆ 95 ರನ್​ಗಳಿಗೆ ಮೂರನೇ ವಿಕೆಟ್​ ಪತನಗೊಂಡಿತು. ಅಷ್ಡರಲ್ಲಿ 1.2 ಓವರ್​ಗಳು ಮುಕ್ತಾಯಗೊಂಡಿದ್ದವು.

ಅಬ್ಬರಿಸಿ ಲಿಯಾಮ್​

ನಾಲ್ಕನೇ ವಿಕೆಟ್​ಗೆ ಜತೆಯಾದ ಲಿಯಾಮ್​ ಲಿವಿಂಗ್​ಸ್ಟನ್​ ಹಾಗೂ ಜಿತೇಶ್ ಶರ್ಮಾ ಅಬ್ಬರದ ಬ್ಯಾಟಿಂಗ್ ನಡೆಸಿದರು. ಅದರಲ್ಲಿ ಲಿಯಾಮ್​ 7 ಫೋರ್ ಹಾಗೂ 4 ಸಿಕ್ಸರ್​ಗಳ ಸಮೇತ 42 ಎಸೆತಗಳಲ್ಲಿ 82 ರನ್ ಬಾರಿಸಿದರು. 32 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ್ ಅವರು ನಂತರದ 10 ಎಸೆತಗಳಲ್ಲಿ 32 ರನ್​ ಬಾರಿಸಿದರು. ಮತ್ತೊಂದು ತುದಿಯಲ್ಲಿ ಅಷ್ಟೇ ಆಕ್ರಮಣಶೀಲತೆಯಿಂದ ಆಡಿದ ಜಿತೇಶ್ ಶರ್ಮಾ 5 ಫೋರ್​, 2 ಸಿಕ್ಸರ್​ಗಳ ಸಮೇತ 49 ರನ್ ಬಾರಿಸಿದರು. ಆದರೆ, ಅವರು ಒಂದು ರನ್​ಗಳ ಕೊರತೆಯಿಂದ ಅರ್ಧ ಶತಕದಿಂದ ವಂಚಿತರಾದರು.

ಮುಂಬಯಿ ಪರ ಪಿಯೂಷ್​ ಚಾವ್ಲಾ 29 ರನ್ ನೀಡಿ ಎರಡು ವಿಕೆಟ್​ ಪಡೆದರು. ಅರ್ಶದ್ ಖಾನ್ 1 ವಿಕೆಟ್ ತಮ್ಮದಾಗಿಸಿಕೊಂಡರು.

Exit mobile version