Site icon Vistara News

Independence Day | ಕೆಂಪು ಕೋಟೆ ಭಾಷಣದಲ್ಲಿ ಕಾಮನ್ವೆಲ್ತ್‌ ಸಾಧಕರನ್ನು ಹೊಗಳಿದ ಪ್ರಧಾನಿ ಮೋದಿ

Narendra Modi

ನವದೆಹಲಿ: ಅದು ಒಲಿಂಪಿಕ್ಸ್‌ ಇರಲಿ, ಕಾಮನ್ವೆಲ್ತ್‌ ಗೇಮ್ಸ್‌ (Commonwealth Games) ಇರಲಿ. ಇಲ್ಲವೆ, ಭಾರತೀಯ ಕ್ರಿಕೆಟ್‌ ತಂಡವು ಮಹತ್ವದ ಸರಣಿ, ವಿಶ್ವಕಪ್‌ನಲ್ಲಿ ಗೆಲುವು ಸಾಧಿಸಲಿ. ಹಾಗೆಲ್ಲ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸುತ್ತಾರೆ. ಅವರನ್ನು ಭೇಟಿಯಾಗಿ, ಆತಿಥ್ಯ ಆಯೋಜಿಸಿ ಹುರಿದುಂಬಿಸುತ್ತಾರೆ. ಇತ್ತೀಚೆಗಷ್ಟೇ ಕಾಮನ್ವೆಲ್ತ್‌ ಗೇಮ್ಸ್‌ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ ಬೆನ್ನಲ್ಲೇ ಸ್ವಾತಂತ್ರ್ಯ ದಿನದ (Independence Day) ಭಾಷಣದಲ್ಲಿ ಮೋದಿ ಅವರು ಕ್ರೀಡಾಪಟುಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ರೀಡಾಕೂಟಗಳಲ್ಲಿ ಭಾರತದ ಕ್ರೀಡಾಪಟುಗಳು ಅಪ್ರತಿಮ ಪ್ರದರ್ಶನ ತೋರುತ್ತಿದ್ದಾರೆ. ಇದು ಭಾರತವು ಪ್ರತಿಭಾವಂತರ ಬೀಡಾಗಿದೆ ಎಂಬುದಕ್ಕೆ ನಿದರ್ಶನವಾಗಿದೆ. ಹಾಗೆಯೇ, ದೇಶದ ನಾಗರಿಕರು ಸಹ ಕ್ರೀಡಾಪಟುಗಳಿಗೆ ಬೆಂಬಲ, ಸಹಕಾರ, ಪ್ರೋತ್ಸಾಹ ನೀಡಬೇಕು. ಆಗ, ಅವರು ಮತ್ತಷ್ಟು ಸಾಧನೆ ತೋರಲು, ದೇಶಕ್ಕೆ ಹೆಮ್ಮೆ ತರಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಇತ್ತೇಚೆಗೆ ನಡೆದ ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ೨೨ ಚಿನ್ನ ಸೇರಿ ೬೧ ಪದಕ ಗೆದಿದ್ದರು. ಭಾರತವು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಪದಕ ಗೆದ್ದ ಕ್ರೀಡಾಪಟುಗಳಿಗೆ ಮೋದಿ ಅಭಿನಂದಿಸಿದ್ದರು. ಇದರ ಬೆನ್ನಲ್ಲೇ ಅವರು ಮತ್ತೆ ಕ್ರೀಡಾಪಟುಗಳ ಸಾಧನೆಯನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ | CWG- 2022 | ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ಸಾಧನೆಗಳೇನು?

Exit mobile version