ಮುಂಬಯಿ: ನ್ಯಾಟ್ ಸೀವರ್ ಬ್ರಂಟ್ (72*) ಬಾರಿಸಿದ ಸ್ಫೋಟಕ ಅರ್ಧ ಶತಕದ ನೆರವು ಪಡೆದ ಮುಂಬಯಿ ತಂಡ ಮಹಿಳೆಯರ ಪ್ರೀಮಿಯರ್ ಲೀಗ್ನ ಪ್ಲೇಆಫ್ ಪಂದ್ಯದಲ್ಲಿ 182 ರನ್ಗಳ ಬೃಹತ್ ಮೊತ್ತ ಪೇರಿಸಿದೆ. ಈ ಮೂಲಕ ಎದುರಾಳಿ ಯುಪಿ ವಾರಿಯರ್ಸ್ ಬಳಗ 183 ರನ್ಗಳ ಬೃಹತ್ ಗೆಲುವಿನ ಗುರಿಯನ್ನು ಪಡೆದುಕೊಂಡಿದೆ.
ಮುಂಬಯಿಯ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಯಪಿ ವಾರಿಯರ್ಸ್ ಬಳಗ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್ ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದರೂ, ಕೊನೇ ಹಂತದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಬಾರಿಸಿತು.
ಇನಿಂಗ್ಸ್ ಆರಂಭಿಸಿದ ಯಸ್ತಿಕ ಭಾಟಿಯಾ (21) ಹಾಗೂ ಹೇಲಿ ಮ್ಯಾಥ್ಯೂಸ್ (26) ಮೊದಲ ವಿಕೆಟ್ಗೆ 31 ರನ್ ಬಾರಿಸಿದರು. ಆದರೆ, ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ನ್ಯಾಟ್ ಸೀವರ್ 38 ಎಸೆತಗಳಲ್ಲಿ 9 ಫೋರ್ ಹಾಗೂ 2 ಸಿಕ್ಸರ್ಗಳ ನೆರವಿನಿಂದ 72 ರನ್ ಬಾರಿಸಿದರು.
ಇದನ್ನೂ ಓದಿ : WPL 2023 : ಯುಪಿ ವಾರಿಯರ್ಸ್ ಕ್ಯಾಂಪ್ನಲ್ಲಿ ಪತ್ನಿಯ ಬರ್ತ್ಡೇ ಆಚರಿಸಿಕೊಂಡ ಆಸ್ಟ್ರೇಲಿಯಾ ವೇಗಿ ಸ್ಟಾರ್ಕ್!
ನಾಯಕಿ ಹರ್ಮನ್ಪ್ರೀತ್ ಕೌರ್ 14 ರನ್ಗಳಿಗೆ ವಿಕೆಟ್ ಒಪ್ಪಿಸಿದರೆ ಕೊನೆಯಲ್ಲಿ ಅಮೇಲಿಯಾ ಕೆರ್ 19 ಎಸೆತಗಳಿಗೆ 29 ರನ್ ಬಾರಿಸಿದರು. ಪೂಜಾ ವಸ್ತ್ರಾಕರ್ 4 ಎಸೆತಗಳಿಗೆ 11 ರನ್ ಕೊಡುಗೆ ಕೊಟ್ಟರು. ಯುಪಿ ಪರ ಬೌಲಿಂಗ್ನಲ್ಲಿ ಸೋಫಿ ಎಕ್ಲೆಸ್ಟೋನ್ 39 ರನ್ಗಳಿಗೆ ಎರಡು ವಿಕೆಟ್ ಉರುಳಿಸಿದರು.