ಮುಂಬಯಿ: ಹಾರ್ದಿಕ್ ಪಾಂಡ್ಯ(Hardik Pandya) ಮತ್ತು ನತಾಶಾ ಸ್ಟಾನ್‌ಕೋವಿಕ್(Nataša Stanković) ಅವರ ವಿವಾಹ ಮುರಿದು ಬಿದ್ದಿದೆಯೇ?, ಈ ಜೋಡಿ ವಿಚ್ಛೇದನಕ್ಕೆ ಪಡೆಯಲಿದೆಯೇ? ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳ ಹಿಂದೆ ಭಾರಿ ಚರ್ಚೆಯಾಗುತ್ತಿತ್ತು. ಇದರ ಮಧ್ಯ ಈ ಜೋಡಿಯ ಸಾಮಾಜಿಕ ಜಾಲತಾಣಗಳ ಒಂದೊಂದು ಪೋಸ್ಟ್ಗಳು ಕೂಡ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ, ಇದೀಗ ಈ ಜೋಡಿಯ ಮಧ್ಯೆ ಯಾವುದೇ ಬಿರುಕು ಮೂಡಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ವಿಚ್ಛೇದನದ ಸುದ್ದಿಯ ನಡುವೆ, ನತಾಶಾ ಮೊದಲ ಬಾರಿಗೆ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದರು. ಬಾಲಿವುಡ್ ಉದಯೋನ್ಮುಖ ನಟಿ ದಿಶಾ ಪಟಾನಿ ಅವರ ಬಾಯ್ಫ್ರೆಂಡ್ ಎಂದು ಹೇಳಿಕೊಳ್ಳಲಾಗುತ್ತಿರುವ ವ್ಯಕ್ತಿಯ ಜತೆ ಕಾಣಿಸಿಕೊಂಡಿದ್ದರು. ಈ ವೇಳೆ ನತಾಶಗೆ ಪಾಪರಾಜಿಗಳು ಪಾಂಡ್ಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನತಾಶ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದರು.
ಇದಾಗ ಬಳಿಕ ನತಾಶಾ ಸ್ಟಾನ್‌ಕೋವಿಕ್ ಅವರು ಯೇಸುವಿನ ಚಿತ್ರವನ್ನು ಹಂಚಿಕೊಂಡಿದ್ದರು. ಯೇಸು ತನ್ನ ಜಾಡನ್ನು ಹಿಂಬಾಲಿಸಿದಾಗ ಕುರಿಮರಿ ಮುಂದಾಳತ್ವ ವಹಿಸುತ್ತಿರುವ ಫೋಟೊ ಇದಾಗಿತ್ತು. ಈ ಫೋಟೊವನ್ನು ಕಂಡಾಗ ಈ ಜೋಡಿ ಶೀಘ್ರದಲ್ಲೇ ದೂರವಾಗುವುದು ಖಚಿತ ಎನ್ನುವಂತಿತ್ತು. ಅಲ್ಲದೆ ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ. 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು ಎಂದು ವರದಿಯಾಗಿತ್ತು. ಈ ಎಲ್ಲ ಅನುಮಾನಗಳಿಗೆ ಇದೀಗ ತೆರೆಬಿದ್ದಂತಿದೆ. ಹೌದು, ನತಾಶಾ ಅವರು ಪಾಂಡ್ಯ ಜತೆಗಿನ ಮದುವೆಯ ಹಲವು ಸುಂದರ ಫೋಟೊಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ನಮ್ಮ ಮಧ್ಯೆ ಯಾವುದೇ ಮನಸ್ತಾಪವಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ಪ್ರಚಾರಕ್ಕಾಗಿ ಮಾಡಿದ್ದೇ?
ಕೆಲ ಮೂಲಗಳ ಪ್ರಕಾರ ವಿಚ್ಚೇದನದ ಸುದ್ದಿ ಪಿಆರ್ ತಂಡ ಮಾಡಿದ ಪಬ್ಲಿಕ್ ಸ್ಟಂಟ್ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ನತಾಶ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪಾಂಡ್ಯ ಜತೆಗಿನ ಫೋಟೊಗಳನ್ನು ಡಿಲೀಟ್ ಮಾಡಿ ಈಗ ಹಳೆಯ ಫೋಟೋಗಳನ್ನು ರೀಸ್ಟೋರ್ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಹಾರ್ದಿಕ್ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್ ರೀತಿಯಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನವೇ ನತಾಶಾ ಅವರು ಗರ್ಭಿಣಿ ಆಗಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್ ಸಂಪ್ರದಾಯದಂತೆ ಹಾರ್ದಿಕ್ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್-ಅಥಿಯಾ, ರಾಕಿಣಗ್ ಸ್ಟಾರ್ ಯಶ್ ಸೇರಿ ಹಲವು ಗಣ್ಯರೂ ಭಾಗಿಯಾಗಿದ್ದರು. ಪುನರ್ ವಿವಾಹವಾಗಿದ್ದ ಫೋಟೊವನ್ನೇ ಈಗ ನತಾಶ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವುದು.