Site icon Vistara News

National Sports Awards: ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಮೊಹಮ್ಮದ್​ ಶಮಿ

Mohammed Shami receive Arjuna Award today

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ ಅವರು ದೇಶದ 2ನೇ ಅತ್ಯುನ್ನತ ಕ್ರೀಡಾ ಗೌರವ(National Sports Awards) ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ಇದೇ ವೇಳೆ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್‌ ಆಟಗಾರರಾದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಕರ್ನಾಟಕ ಮೂಲದ ಚಿರಾಗ್‌ ಶೆಟ್ಟಿ ಜೋಡಿಗೆ ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿಯಾದ ಮೇಜರ್‌ ಧ್ಯಾನ್‌ಚಂದ್‌ ಖೇಲ್‌ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾತ್ವಿಕ್‌-ಚಿರಾಗ್‌ ಏಷ್ಯಾಡ್‌ನ‌ಲ್ಲಿ ಚಿನ್ನದ ಪದಕ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆಗೈದಿದ್ದಾರೆ. ಮೊಹಮ್ಮದ್‌ ಶಮಿ ಕಳೆದ ವಿಶ್ವಕಪ್‌ನಲ್ಲಿ ಅತ್ಯುತ್ತಮ ಬೌಲರ್ ಆಗಿ ಮಿಂಚಿದ್ದರು. ಆಡಿದ 7 ಪಂದ್ಯಗಳಿಂದ 24 ವಿಕೆಟ್‌ ಉರುಳಿಸಿ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ ಎನಿಸಿಕೊಂಡಿದ್ದರು. ಆರಂಭದಲ್ಲಿ ಶಮಿ ಅವರ ಹೆಸರು ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವದ ಪಟ್ಟಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಬಿಸಿಸಿಐ ವಿಶೇಷ ಮನವಿ ಸಲ್ಲಿಸಿ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು. ಶಮಿ ಈ ಬಾರಿ ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಕ್ರಿಕೆಟಿಗರಾಗಿದ್ದರು.

ಇದನ್ನೂ ಓದಿ IPL 2024: ಹಾರ್ದಿಕ್ ಪಾಂಡ್ಯ ಅತಿರೇಕದ ವರ್ತನೆ ಸರಿ ಎನಿಸಿರಲಿಲ್ಲ ಎಂದ ಶಮಿ

ಪ್ರಶಸ್ತಿ ಪಡೆಯುವುದು ನನ್ನ ಕನಸಾಗಿತ್ತು; ಶಮಿ


‘ಈ ಪ್ರಶಸ್ತಿ ಪಡೆಯುವುದೇ ಪ್ರತಿಯೊಬ್ಬ ಭಾರತೀಯ ಆಟಗಾರರ ಜೀವನದ ಕನಸಾಗಿರುತ್ತದೆ. ನಾನು ಕೂಡ ಪ್ರಶಸ್ತಿ ಪಡೆಯಬೇಕೆಂಬ ಕನಸು ಕಂಡಿದ್ದೆ. ಇದೀಗ ನನಗೂ ಪ್ರಶಸ್ತಿ ಸಿಕ್ಕಿರುವುದು ಸಂತಸ ನೀಡಿದೆ’ ಎಂದು ಶಮಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಎಎನ್ಐಗೆ ತಿಳಿಸಿದ್ದಾರೆ.


ಪ್ರಶಸ್ತಿ ಸ್ವೀಕರಿಸಿದ ಕ್ರೀಡಾಪಟುಗಳು


ಮೇಜರ್‌ ಧ್ಯಾನ್‌ಚಂದ್‌ ಖೇಲ್‌ರತ್ನ: ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ.

ಅರ್ಜುನ ಪ್ರಶಸ್ತಿ

ಮೊಹಮ್ಮದ್​ ಶಮಿ(ಕ್ರಿಕೆಟ್​), ಪಾರುಲ್‌ ಚೌಧರಿ (ಆ್ಯತ್ಲೆಟಿಕ್ಸ್‌), ಮೊಹಮ್ಮದ್‌ ಹುಸ್ಸಮುದ್ದೀನ್‌ (ಬಾಕ್ಸಿಂಗ್‌), ಆರ್‌. ವೈಶಾಲಿ (ಚೆಸ್‌), ಅನುಷ್‌ ಅಗರ್ವಾಲ್‌ (ಈಕ್ವೆಸ್ಟ್ರಿಯನ್‌), ದಿವ್ಯಾಕೃತಿ ಸಿಂಗ್‌ (ಈಕ್ವೆಸ್ಟ್ರಿಯನ್‌ ಡ್ರೆಸ್ಸೇಜ್‌), ದೀಕ್ಷಾ ಡಾಗರ್‌ (ಗಾಲ್ಫ್), ಓಜಸ್‌ ಪ್ರವೀಣ್‌ ದೇವತಾಲೆ (ಆರ್ಚರಿ), ಅದಿತಿ ಗೋಪಿಚಂದ್‌ ಸ್ವಾಮಿ (ಆರ್ಚರಿ), ಮುರಳಿ ಶ್ರೀಶಂಕರ್‌ (ಆರ್ಚರಿ), ಕೃಷ್ಣ ಬಹಾದೂರ್‌ ಪಾಠಕ್‌ (ಹಾಕಿ), ಸುಶೀಲಾ ಚಾನು (ಹಾಕಿ), ಪವನ್‌ ಕುಮಾರ್‌ (ಕಬಡ್ಡಿ), ರೀತು ನೇಗಿ (ಕಬಡ್ಡಿ), ನಸ್ರಿàನ್‌ (ಖೋ ಖೋ), ಪಿಂಕಿ (ಲಾನ್‌ ಬೌಲ್ಸ್‌), ಐಶ್ವರಿ ಪ್ರತಾಪ್‌ ಸಿಂಗ್‌ ತೋಮರ್‌ (ಶೂಟಿಂಗ್‌), ಇಶಾ ಸಿಂಗ್‌ (ಶೂಟಿಂಗ್‌), ಹರೀಂದರ್‌ ಪಾಲ್‌ ಸಿಂಗ್‌ ಸಂಧು (ಸ್ಕ್ವಾಶ್‌), ಐಹಿಕಾ ಮುಖರ್ಜಿ (ಟಿಟಿ), ಸುನೀಲ್‌ ಕುಮಾರ್‌ (ಕುಸ್ತಿ), ಅಂತಿಮ್‌ ಪಂಘಲ್‌ (ಕುಸ್ತಿ), ಎನ್‌. ರೋಶಿಬಿನಾ ದೇವಿ (ವುಶು), ಶೀತಲ್‌ ದೇವಿ (ಆರ್ಚರಿ), ಅಜಯ್‌ ಕುಮಾರ್‌ ರೆಡ್ಡಿ (ಅಂಧ ಕ್ರಿಕೆಟ್‌), ಪ್ರಾಚಿ ಯಾದವ್‌ (ಪ್ಯಾರಾ ಕನೋಯಿಂಗ್‌).

Exit mobile version