ಕಾಬುಲ್: ಅಕ್ಟೋಬರ್ 5ರಿಂದ ನವೆಂಬರ್ 19ರ ತನಕ ಭಾರತದಲ್ಲಿ ನಡೆಯಲಿರುವ ಪ್ರತಿಷ್ಠಿತ ಐಸಿಸಿ ಏಕದಿನ ವಿಶ್ವಕಪ್ಗೆ(ICC World Cup 2023) ಅಫಘಾನಿಸ್ತಾನ ತಂಡ(Afghanistan world cup squad) ಪ್ರಕಟಗೊಂಡಿದೆ. ಐಪಿಎಲ್ ವೇಳೆ ವಿರಾಟ್ ಕೊಹ್ಲಿಯನ್ನು(virat kohli) ಕೆಣಕ್ಕಿದ್ದ ನವೀನ್ ಉಲ್ ಹಕ್(Naveen-ul-Haq)ಗೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೊಮ್ಮೆ ಉಭಯ ಆಟಗಾರರು ಎದುರಾಗುವುದನ್ನು ಕಾಣಲು ಅಭಿಮಾನಿಗಳು ಕಾತರಗೊಂಡಿದ್ದಾರೆ.
ಕೊಹ್ಲಿ ಅಭಿಮಾನಿಗಳಿಗೆ ಹಬ್ಬ
ಏಷ್ಯಾಕಪ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಮುಖಾಮುಖಿ ಆಗುವುದನ್ನು ಕೊಹ್ಲಿ(naveen ul haq and virat kohli) ಅಭಿಮಾನಿಗಳು ಬಾರಿ ನಿರೀಕ್ಷೆ ಮಾಡಿದ್ದರು. ಆದರೆ ಅವರು ನವೀನ್ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿಯ ಅಭಿಮಾನಿಗಳು ಬೇಸರಗೊಂಡಿದ್ದರು. ನವೀನ್ಗೆ ಕೊಹ್ಲಿ ಸರಿಯಾಗಿ ದಂಡಿಸಬೇಕು, ಆ ಬಳಿಕ ಅವರನ್ನು ಟ್ರೋಲ್ ಮಾಡಬೇಕು ಎಂದು ಕೊಹ್ಲಿ ಅಭಿಮಾನಿಗಳು ಕಾದು ಕುಳಿತ್ತಿದ್ದರು. ಆದರೆ ಅವರು ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ವಿಶ್ವಕಪ್ನಲ್ಲಿ ಅವರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಕೊಹ್ಲಿ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಐಪಿಎಲ್ನಲ್ಲಿ ತೋರಿದ ವರ್ತನೆಗೆ ಬಡ್ಡಿ ಸಮೇತ ಕಿಂಗ್ ಕೊಹ್ಲಿ ಬ್ಯಾಟ್ ಮೂಲಕ ಉತ್ತರ ನೀಡಲಿದ್ದಾರೆ ಎಂದು ಕೊಹ್ಲಿ ಅಭಿಮಾನಿಗಳು ಟ್ವಿಟರ್ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಗುಲ್ಬದಿನ್ ನೈಬ್ಗೆ ಕೊಕ್
15 ಸದಸ್ಯರ ತಂಡವನ್ನು ಬುಧವಾರ ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಿಸಿತು. ತಂಡವನ್ನು ಹಶ್ಮತುಲ್ಲಾ ಶಾಹಿದಿ ಮುನ್ನಡೆಸಲಿದ್ದಾರೆ. ಅಚ್ಚರಿ ಎಂದರೆ ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಹಿರಿಯ ಆಲ್‌ರೌಂಡರ್ ಗುಲ್ಬದಿನ್ ನೈಬ್ ಅವರನ್ನು ತಂಡದಿಂದ ಬಿಡಲಾಗಿದೆ. ಸ್ಟಾರ್ ಆಟಗಾರರಾಗಿ ರಶೀದ್ ಖಾನ್, ಮೊಹಮ್ಮದ್ ನಬಿ, ರಹಮಾನುಲ್ಲಾ ಗುರ್ಬಾಜ್ ಕಾಣಿಸಿಕೊಂಡಿದ್ದಾರೆ. ಅಫಘಾನಿಸ್ತಾನ ತನ್ನ ವಿಶ್ವಕಪ್ ಅಭಿಯಾನವನ್ನು ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ಪ್ರಾರಂಭಿಸಲಿದೆ. ಈ ಪಂದ್ಯ ಅಕ್ಟೋಬರ್ 7ರಂದು ನಡೆಯಲಿದೆ.
ಇದನ್ನೂ ಓದಿ ICC World Cup 2023: ವಿಶ್ವಕಪ್ಗೆ ಕೇನ್ ವಿಲಿಯಮ್ಸನ್ ಫಿಟ್; ನಿಟ್ಟುಸಿರು ಬಿಟ್ಟ ಕಿವೀಸ್
ಎರಡು ವರ್ಷಗಳ ಬಳಿಕ ಅವಕಾಶ
ನವೀನ್ ಉಲ್ ಹಕ್ ಅವರು ಎರಡು ವರ್ಷಗಳ ಅಫಘಾನಿಸ್ತಾನ ತಂಡದಲ್ಲಿ ಅವಕಾಶ ಪಡೆದರು. 2021ರಲ್ಲಿ ಕೊನೆಯ ಬಾರಿಗೆ ಅಫ್ಘಾನ್ ಪರ ಅವರು ಏಕದಿನ ಕ್ರಿಕೆಟ್ ಪಂದ್ಯ ಆಡಿದ್ದರು. ಈ ಬಾರಿಯ ಐಪಿಎಲ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಕಾರಣ ಅವರಿಗೆ ಮತ್ತೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಭಾರತದ ಪಿಚ್ನಲ್ಲಿ ಅವರು ಹಿಡಿತ ಸಾಧಿಸಿರುವುದೇ ತಂಡದಲ್ಲಿ ಸ್ಥಾನ ಪಡೆಯಲು ಪ್ರಮುಖ ಕಾರಣ.
ಅಫಘಾನಿಸ್ತಾನ ತಂಡ
ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರಹಮತ್ ಶಾ, ನಜಿಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಫಜಲ್ಹಕ್ ಫಾರೂಕಿ. ಅಬ್ದುಲ್ ರಹಮಾನ್, ನವೀನ್ ಉಲ್ ಹಕ್.
World Cup Bound AfghanAtalan Squad 🚨
— Afghanistan Cricket Board (@ACBofficials) September 13, 2023
Presenting before you the AfghanAtalan squad for the ICC Cricket World Cup 2023 in India. 🤩#AfghanAtalan | #CWC23 | #WarzaMaidanGata pic.twitter.com/r0SGg3KV8v
ಐಪಿಎಲ್ ವೇಳೆ ಕೊಹ್ಲಿ ಜತೆ ಕಿರಿಕ್
ಮೇ 1ರಂದು ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(virat kohli) ಮತ್ತು ನವೀನ್ ಉಲ್-ಹಕ್ ಮಧ್ಯೆ ಮೈದಾನದಲ್ಲಿಯೇ ಕಿರಿಕ್ ಆಗಿತ್ತು. ಬಳಿಕ ಪಂದ್ಯ ಮುಗಿದ ಬಳಿಕ ಗಂಭೀರ್ ಅವರು ಇದೇ ವಿಚಾರವಾಗಿ ಕೊಹ್ಲಿ ಜತೆ ವಾಗ್ವಾದ ನಡೆಸಿದ್ದರು. ಈ ಘಟನೆ ನಡೆದ ಬಳಿಕ ನವೀನ್ ಅವರು ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ ಸೋತ ಬಳಿಕ ಮಾವಿನ ಹಣ್ಣಿನ ಫೋಟೊ ಹಾಕಿ ಪರೋಕ್ಷವಾಗಿ ಟ್ರೋಲ್ ಮಾಡಿದ್ದರು. ಇಲ್ಲಿಂದ ಆರಂಭಗೊಂಡ ಈ ಸಮರವನ್ನು ಮುಂದೆ ವಿರಾಟ್ ಅಭಿಮಾನಿಗಳು ಮುಂದುವರಿಸಿದ್ದರು.