ದುಬೈ: ಬುಧವಾರದಿಂದ ಆರಂಭಗೊಳ್ಳಲಿರುವ ಏಷ್ಯಾಕಪ್(Asia cup 2023) ಕ್ರಿಕೆಟ್ ಟೂರ್ನಿಗೆ ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ಭಾನುವಾರ ತಂಡವನ್ನು(asia cup 2023 afghanistan squad) ಪ್ರಕಟಿಸಿತ್ತು. ಆದರೆ ಈ ತಂಡಕ್ಕೆ ಐಪಿಎಲ್ ವೇಳೆ ವಿರಾಟ್ ಕೊಹ್ಲಿ ಜತೆಗೆ ಜಗಳವಾಡಿದ್ದ ನವೀನ್ ಉಲ್ ಹಕ್ ಆಯ್ಕೆಯಾಗಿಲ್ಲ. ತಂಡಕ್ಕೆ ಆಯ್ಕೆಯಾಗದ ಕುರಿತು ನವೀನ್ ಉಲ್ ಹಕ್(Naveen-ul-Haq) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೊವೊಂದನ್ನು ಹಾಕಿ ಹತಾಶೆಯನ್ನು ಹೊರಹಾಕಿದ್ದಾರೆ.
ಕಪ್ಪು ಬಣ್ಣದ ಜಾಕೆಟ್ ಹಾಕಿರುವ ಫೋಟೊವನ್ನು ಹಂಚಿಕೊಂಡು “ನಿಮ್ಮ ಕಣ್ಣುಗಳು ಕತ್ತಲೆಗೆ ಎಷ್ಟೇ ಚೆನ್ನಾಗಿ ಹೊಂದಿಕೊಂಡರೂ, ನೀವು ಅದನ್ನು ಎಂದಿಗೂ ಬೆಳಕು ಎಂದು ಭಾವಿಸಲು ಸಾಧ್ಯವಿಲ್ಲ” ಎಂದು ಬರೆದುಕೊಂಡು ಅಫಘಾನಿಸ್ತಾನ ಕ್ರಿಕೆಟ್ ಮಂಡಳಿಯ ವಿರುದ್ಧ ಪರೋಕ್ಷವಾಗಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ Asia Cup 2023: ಏಷ್ಯಾಕಪ್ಗೆ ಅಫಘಾನಿಸ್ತಾನ ತಂಡ ಪ್ರಕಟ; ಕೊಹ್ಲಿ ಕೆಣಕಿದ ನವೀನ್ ಉಲ್ ಹಕ್ಗೆ ಕೊಕ್
ಐಪಿಎಲ್ ವೇಳೆ ಕೊಹ್ಲಿ ಜತೆ ಕಿರಿಕ್
ಮೇ 1ರಂದು ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(virat kohli) ಮತ್ತು ನವೀನ್ ಉಲ್-ಹಕ್ ಮಧ್ಯೆ ಮೈದಾನದಲ್ಲಿಯೇ ಕಿರಿಕ್ ಆಗಿತ್ತು. ಬಳಿಕ ಪಂದ್ಯ ಮುಗಿದ ಬಳಿಕ ಗಂಭೀರ್ ಅವರು ಇದೇ ವಿಚಾರವಾಗಿ ಕೊಹ್ಲಿ ಜತೆ ವಾಗ್ವಾದ ನಡೆಸಿದ್ದರು. ಈ ಘಟನೆ ನಡೆದ ಬಳಿಕ ನವೀನ್ ಅವರು ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ ಸೋತ ಬಳಿಕ ಮಾವಿನ ಹಣ್ಣಿನ ಫೋಟೊ ಹಾಕಿ ಪರೋಕ್ಷವಾಗಿ ಟ್ರೋಲ್ ಮಾಡಿದ್ದರು. ಇಲ್ಲಿಂದ ಆರಂಭಗೊಂಡ ಈ ಸಮರವನ್ನು ಮುಂದೆ ವಿರಾಟ್ ಅಭಿಮಾನಿಗಳು ಮುಂದುವರಿಸಿದ್ದರು.
ಟ್ವಿಟರ್ನಲ್ಲಿ ಕಾಲೆಳೆದ ವಿರಾಟ್ ಅಭಿಮಾನಿಗಳು
ಏಷ್ಯಾಕಪ್ನಲ್ಲಿ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಮುಖಾಮುಖಿ ಆಗುವುದನ್ನು ಕೊಹ್ಲಿ(naveen ul haq and virat kohli) ಅಭಿಮಾನಿಗಳು ಬಾರಿ ನಿರೀಕ್ಷೆ ಮಾಡಿದ್ದರು. ಆದರೆ ಅವರು ನವೀನ್ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲರಾದರು. ಆದರೂ ನವೀನ್ ಅವರನ್ನು ಕೊಹ್ಲಿ ಅಭಿಮಾನಿಗಳು ಕಾಲೆಳೆದಿದ್ದಾರೆ. ಬಿಮಗೆ ಅವಕಾಶ ನೀಡದೇ ಇರುವುದು ಒಳ್ಳೆಯ ವಿಚಾರ ಏಕೆಂದರೆ ಮತ್ತೆ ನೀವು ಕೊಹ್ಲಿಯ ಬ್ಯಾಟ್ನಿಂದ ಬೌಂಡಿ ಮತ್ತು ಸಿಕ್ಸರ್ ಬಾರಿಸುವುದನ್ನು ನೋಡಲು ಬೇಸರವಾಗುತ್ತದೆ. ತಂಡಕ್ಕೆ ಆಯ್ಕೆಯಾಗದ ಕುರಿತು ನೀವು ಸಂತಸ ಪಡಬೇಕು ಹೀಗೆ ಹಲವು ಕಮೆಂಟ್ ಮೂಲಕ ನವೀನ್ ಅವರನ್ನು ಟ್ರೋಲ್ ಮಾಡಿದ್ದಾರೆ.
ಅಫಘಾನಿಸ್ತಾ ತಂಡ
ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್, ರಹಮತ್ ಶಾ, ನಜಿಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ, ಇಕ್ರಮ್ ಅಲಿಖಿಲ್, ರಶೀದ್ ಖಾನ್, ಗುಲ್ಬದಿನ್ ನೈಬ್, ಕರೀಮ್ ಜನತ್, ಅಬ್ದುಲ್ ರಹಮಾನ್, ಶರಫುದ್ದೀನ್ ಅಶ್ರಫ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್, ಮೊಹಮ್ಮದ್ ಸಲೀಮ್ ಸಫಿ, ಫಜಲ್ಹಕ್ ಫಾರೂಕಿ.