Site icon Vistara News

Virat kohli : ವಿರಾಟ್ ಕೊಹ್ಲಿಯನ್ನು ಮೂರ್ಖ ಎಂದು ಕರೆದ ನವಿನ್​ ಉಲ್​ ಹಕ್!

Navin ul Haq

ನವ ದೆಹಲಿ: ಅಫ್ಘಾನಿಸ್ತಾನ ರಾಷ್ಟ್ರೀಯ ತಂಡದ ಆಟಗಾರ ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ವೇಗಿ ನವೀನ್-ಉಲ್-ಹಕ್ 2023 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​​ಸಿಬಿ) ವಿರುದ್ಧದ ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿ (Virat kohli) ಅವರೊಂದಿಗೆ ಮೈದಾನದಲ್ಲೇ ಜಗಳವಾಡಿದ ಬಳಿಕ ಚರ್ಚೆಯ ವ್ಯಕ್ತಿಯಾಗಿದ್ದರು. ವಿರಾಟ್​ ಕೊಹ್ಲಿ ಆ ಗಲಾಟೆಯನ್ನು ಅಲ್ಲಿಗೆ ಕೊನೆಗೊಳಿಸಿದ್ದರು. ಐಪಿಎಲ್ ಹಾಕಿರುವ ದಂಡವನ್ನು ಕಟ್ಟಿಕೊಂಡು ಸುಮ್ಮನಾಗಿದ್ದರು. ಮೈದಾನದಲ್ಲಿ ಗಲಾಟೆ ಮಾಡುವ ಮೂಲಕ ಟೀಕೆಗಳಿಗೆ ಒಳಗಾಗಿದ್ದ ವಿರಾಟ್​ ಮೈದಾನದಿಂದ ಆಚೆ ಬಂದ ಬಳಿಕ ಸುಮ್ಮನಾಗುವ ಮೂಲಕ ಪ್ರಬುದ್ಧತೆ ಮರೆದಿದ್ದರು. ಆದರೆ, ನವಿನ್ ಉಲ್​ ಹಕ್​ ತನ್ನ ಎಳಸು ಬುದ್ಧಿಯನ್ನು ಬಿಡುತ್ತಲೇ ಇಲ್ಲ. ಗುಪ್ತ ಸಂದೇಶವನ್ನು ಹಾಕುವ ಮೂಲಕ ಮತ್ತೆ ಮತ್ತೆ ಕೊಹ್ಲಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಟೂರ್ನಿ ಮುಗಿದು ಒಂದು ತಿಂಗಳಾಗಿರುವ ನಂತರವೂ ವಿರಾಟ್​ ಕೊಹ್ಲಿಯನ್ನು ಟೀಕೆ ಮಾಡುವುದು ಬಿಟ್ಟಿಲ್ಲ. ಇದೀಗ ಕೊಹ್ಲಿಯನ್ನು ಮತ್ತೊಂದು ಬಾರಿ ಟೀಕಿಸಿದ್ದಾರೆ.

ನವೀನ್ ತಮಗಾಗದವರ ವಿರುದ್ಧ ರಹಸ್ಯ ಸಂದೇಶಗಳು ಮತ್ತು ಕಾಮೆಂಟ್​ಗಳನ್ನು ನಿಯಮಿತವಾಗಿ ಪೋಸ್ಟ್ ಮಾಡಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದಾರೆ. ಈ ಮೂಲಕ ತಮ್ಮ ಜಿದ್ದನ್ನು ಆಗಾಗ ಪ್ರದರ್ಶಿಸುತ್ತಿದ್ದಾರೆ. ಘಟನೆ ನಡೆದು ಸರಿಯಾಗಿ ಎರಡು ತಿಂಗಳಾಗಿದೆ . ಇದೀಗ ನವೀನ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ, ಹುಲಿ ಕತ್ತೆಯೊಂದಿಗೆ ವಾದಿಸುವ ನೀತಿಕಥೆಯನ್ನು ಪ್ರದರ್ಶಿಸುವ ರಹಸ್ಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ವೀಡಿಯೊದ ಕೊನೆಯಲ್ಲಿ ಈ ರೀತಿ ನೀತಿ ಹೇಳುತ್ತದೆ “ಸತ್ಯ ಅಥವಾ ವಾಸ್ತವದ ಬಗ್ಗೆ ಕಾಳಜಿ ವಹಿಸದ ಮೂರ್ಖ ಮತ್ತು ಅಂಧನೊಂದಿಗೆ ವಾದಿಸುವುದು ಸಮಯ ಹಾಳು, ಗೆಲುವು ನಂಬಿಕೆಗಳು ಮತ್ತು ಭ್ರಮೆಗಳ ಮಾತ್ರ. ನಾವು ಎಷ್ಟೇ ಪುರಾವೆಗಳನ್ನು ಒದಗಿಸಿದರೂ, ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲದ ಜನರಿದ್ದಾರೆ . ಇತರರು ಅಹಂ, ದ್ವೇಷ ಮತ್ತು ಅಸಮಾಧಾನದಿಂದ ಕುರುಡರಾಗಿದ್ದಾರೆ ಎಂದು ಹೇಳಿದ್ದಾರೆ.

ನವೀನ್ ಎಲ್ಎಸ್ಜಿ ತಂಡದ ಭಾಗವಾಗಿದ್ದರು. ಅವರು ವಿರಾಟ್ ಕೊಹ್ಲಿಯ ವಿರುದ್ಧ ಗಲಾಟೆ ಮಾಡಿದ ನಂತರ ಸುದ್ದಿಯಲ್ಲಿದ್ದರು. ವಿರಾಟ್ ಬಗ್ಗೆ ಕೋಪ ಹೊಂದಿರುವ ಗಂಭೀರ್ ಕೂಡ ಅಫಘಾನಿಸ್ತಾನದ ಆಟಗಾರ ನವಿನ್​ಗೆ ಬೆಂಬಲ ಕೊಟ್ಟಿದ್ದರು. ಅಲ್ಲಿಂದ ಅವರು ವಿರಾಟ್​ ವಿರುದ್ಧ ನಾನಾ ಸಂದೇಶಗಳನ್ನು ಹರಿಯಬಿಡುತ್ತಿದ್ದಾರೆ.

ಇದನ್ನೂ ಓದಿ : ind vs wi : ಪ್ರತ್ಯೇಕವಾಗಿ ವಿಂಡೀಸ್ ಪ್ರಯಾಣ ಶುರು ಮಾಡಿದ ವಿರಾಟ್​, ಕೊಹ್ಲಿ! ಏನಾಯಿತು ಅವರಿಗೆ?

ಕೊಹ್ಲಿ ವೇಗಿಯ ಕೈ ಹಿಡಿದು ಅವಮಾನ ಮತ್ತು ಬಿಸಿಯಾದ ಮಾತುಗಳನ್ನು ಹಂಚಿಕೊಂಡಿದ್ದರಿಂದ ಸಂವಾದವನ್ನು ಪ್ರಚೋದಿಸಲಾಗಿದೆ ಎಂದು ನವೀನ್ ಇತ್ತೀಚೆಗೆ ಹೇಳಿದ್ದಾರೆ. ಕಾಮೆಂಟ್ ನಂತರ ನವೀನ್ ಭಾರತೀಯ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದರು. ವಿಶೇಷವೆಂದರೆ, ನವೀನ್ ಇತರ ಪಂದ್ಯಗಳು ಮತ್ತು ಲೀಗ್ಗಳಲ್ಲಿ, ವಿಶೇಷವಾಗಿ ಲಂಕಾ ಪ್ರೀಮಿಯರ್ ಲೀಗ್ ಮತ್ತು ಬಿಗ್ ಬ್ಯಾಷ್ ಲೀಗ್ನಲ್ಲಿ ಶಿಸ್ತು ಸಮಸ್ಯೆಗಳನ್ನು ಎದುರಿಸಿದ್ದಾರೆ.

ಭಾರತ ತಂಡದ ಮಾಜಿ ನಾಯಕನೊಂದಿಗಿನ ವಿವಾದವು ಅಫ್ಘಾನಿಸ್ತಾನದ ವೇಗಿ ಮಾತಿನ ಚಕಮಕಿಗೆ ಇಳಿಯುವುದು ಇದೇ ಮೊದಲಲ್ಲ. 23ರ ಹರೆಯದ ಈ ಅಟಗಾರ ಈ ಹಿಂದೆ ಮೈದಾನದಲ್ಲಿ ಮೊಹಮ್ಮದ್ ಅಮೀರ್ ಮತ್ತು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರೊಂದಿಗೆ ಪಿಚ್​​ನಲ್ಲಿ ಜಗಳವಾಡಿದ್ದರು.

ಐಪಿಎಲ್ 2023 ರ ಮಿನಿ ಹರಾಜಿನಲ್ಲಿ ನವಿನ್​ ಉಲ್​ ಹಕ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ 2022 ರ ಡಿಸೆಂಬರರ್​ನಲ್ಲಿ 50 ಲಕ್ಷ ರೂ.ಗೆ ಖರೀದಿಸಿತು. ಲೀಗ್​​ನ 16 ನೇ ಆವೃತ್ತಿಯಲ್ಲಿ ಅವರು ಲಕ್ನೋ ಪರ ನಿರ್ಣಾಯಕರಾಗಿದ್ದರು. ಎಂಟು ಪಂದ್ಯಗಳಿಂದ 19.89 ಸರಾಸರಿ ಮತ್ತು 7.82 ಎಕಾನಮಿ ರೇಟ್ನಲ್ಲಿ 11 ವಿಕೆಟ್​​ ಉರುಳಿಸಿದ್ದರು. ನವೀನ್ 2019 ರಲ್ಲಿ ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನ ಪರ ಟಿ 20 ಐ ಗೆ ಪದಾರ್ಪಣೆ ಮಾಡಿದರು. ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ 27 ಪಂದ್ಯಗಳಿಂದ 20.70ರ ಸರಾಸರಿಯಲ್ಲಿ 34 ವಿಕೆಟ್ ಉರುಳಿಸಿದ್ದಾರೆ.

Exit mobile version