Site icon Vistara News

IPL 2023 : ಕೊಹ್ಲಿ ಎಂದು ಕಿಚಾಯಿಸಿದ ಅಭಿಮಾನಿಗಳಿಗೆ ಬಾಯ್ಮುಚ್ಚು ಎಂದು ಸನ್ನೆ ಮಾಡಿದ ನವಿನ್​ ಉಲ್​ ಹಕ್​!

Navin ul haq IPL LSG

#image_title

ಕೋಲ್ಕೊತಾ: ವಿಶ್ವದ ಶ್ರೇಷ್ಠ ಬ್ಯಾಟರ್​ ವಿರಾಟ್​ ಕೊಹ್ಲಿಯನ್ನು ಕೆಣಕಿದ ಅಫಘಾನಿಸ್ತಾನದ ಬೌಲರ್​ ನವಿನ್ ಉಲ್​ ಹಕ್​ ಅದರ ಪ್ರತಿಫಲವನ್ನು ಪಡೆಯುತ್ತಿದ್ದಾರೆ. ಅವರು ಹೋದಲ್ಲಿ, ಬಂದಲ್ಲಿ ಕ್ರಿಕೆಟ್​ ಅಭಿಮಾನಿಗಳು ಅವರನ್ನು ಕೆಣಕುತ್ತಿದ್ದಾರೆ. ಕೊಹ್ಲಿ, ಕೊಹ್ಲಿ ಎಂದು ಕೂಗುವ ಮೂಲಕ ಅವರ ಪಿತ್ತ ನೆತ್ತಿಗೇರಿಸುತ್ತಿದ್ದಾರೆ. ಈ ಸಮಸ್ಯೆಯಿಂದ ಅವರು ಸದ್ಯಕ್ಕೆ ಪಾರಾಗುವ ಲಕ್ಷಣ ಕಾಣಿಸುತ್ತಿಲ್ಲ. ಮುಂದಿನ ಹಲವು ವರ್ಷಗಳ ಕಾಲ ಅವರು ಕೊಹ್ಲಿಯ ಅಭಿಮಾನಿಗಳ ಕುಹಕಗಳಿಗೆ ಗುರಿಯಾಗಲಿದ್ದಾರೆ.

ಕೊಹ್ಲಿ ಹಾಗೂ ನವೀನ್​ ಉಲ್​ ನಡುವಿನ ಕಿತ್ತಾಟ ನಡೆದು ಸುಮಾರು ಮೂರು ವಾರಗಳು ಕಳೆದಿದೆ. ಆದರೆ, ನವೀನ್ ಉಲ್​ ಹಕ್​ ಕಂಡ ತಕ್ಷಣ ಪ್ರೇಕ್ಷಕರು ಅವರನ್ನು ಅಪಹಾಸ್ಯ ಮಾಡುತ್ತಿದ್ದಾರೆ. ಶನಿವಾರ ಎಲ್​ಎಸ್​​ಜಿ ಹಾಗೂ ಕೆಕೆಆರ್​ ತಂಡಗಳ ನಡುವಿನ ಪಂದ್ಯದ ವೇಳೆ ಅದು ಪುನರಾರ್ತನೆಗೊಂಡಿತು. ಮತ್ತೆ ಅವರು ಕೊಹ್ಲಿ ಕೊಹ್ಲಿ ಎಂದು ಹೇಳುವ ಮೂಲಕ ಪ್ರೇಕ್ಷಕರು ಅಣಕಿಸಿದರು.

ಕೋಲ್ಕತಾ ನೈಟ್ ರೈಡರ್ಸ್ ತಂಡ ರನ್​ ಚೇಸ್​ ಮಾಡುವ ವೇಳೆ ಈ ಪ್ರಸಂಗ ಘಟಿಸಿತು. ಇನಿಂಗ್ಸ್​​ನ ಎರಡನೇ ಓವರ್ ಎಸೆಯಲು ನಾಯಕ ಕೃಣಾಲ್​ ಪಾಂಡಯ ನವೀನ್​ ಕೈಗೆ ಚೆಂಡು ನೀಡಿದರು. ಈ ಓವರ್​ನಲ್ಲಿ ಕೆಕೆಆರ್​ ಬ್ಯಾಟರ್​ ಜೇಸನ್​ ರಾಯ್​ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್​ ಬಾರಿಸಿದರು. ಈ ಮೂಲಕ ನವಿನ್​ ಉಲ್​ ಹಕ್​ ಉತ್ಸಾಹಕ್ಕೆ ಕಡಿವಾಣ ಹಾಕಿದ್ದರು.

ಆ ಇಡೀ ಓವರ್ ಮುಗಿಯುವ ತನಕವೂ ಈಡನ್ ಗಾರ್ಡನ್ಸ್​ನಲ್ಲಿ ಕಿಕ್ಕಿರಿದು ತುಂಬಿದ್ದ ಕ್ರಿಕೆಟ್​ ಪ್ರೇಕ್ಷಕರು ಕೊಹ್ಲಿ, ಕೊಹ್ಲಿ ಘೋಷಣೆಗಳನ್ನು ಕೂಗಿದರು. ಇದು ಕೆಲವು ದಿನಗಳ ಹಿಂದೆ ಹೈದರಾಬಾದ್​ನ ಕ್ರಿಕೆಟ್​ ಪ್ರೇಕ್ಷಕರು ಅಥವಾ ವಾರದ ಆರಂಭದಲ್ಲಿ ಲಕ್ನೋದ ಪ್ರೇಕ್ಷಕರು ಛೇಡಿಸಿದ್ದಕ್ಕಿಂತ ಅಬ್ಬರವಾಗಿತ್ತು.

ಬಾಯ್ಮುಚ್ಚು ಸನ್ನೆ ಮಾಡಿದರು

ಪ್ರೇಕ್ಷಕರು ಸತತವಾಗಿ ಅಪಹಾಸ್ಯ ಮಾಡುವುದನ್ನು ಮುಂದವರಿಸಿದಾಗ ನಿಯಂತ್ರಣ ಕಳೆದುಕೊಂಡ ನವಿನ್​ ಉಲ್​ ಹಕ್​ ಪ್ರೇಕ್ಷಕರತ್ತ ಬಾಯ್ಮುಚ್ಚಿ ಎಂದು ಸನ್ನೆ ಮಾಡಿದರು. ಆದರೆ, ಪ್ರೇಕ್ಷಕರು ಮಾತ್ರ ಅಣಕಿಸವುದನ್ನು ನಿಲ್ಲಿಸಲಿಲ್ಲ. ಒಂದು ವೇಳೆ ನವಿನ್​ ಬೌಲಿಂಗ್​ನಲ್ಲಿ ಉತ್ತಮ ಸಾಧನೆ ತೋರಿದ್ದರೆ ಪ್ರೇಕ್ಷಕರು ಸುಮ್ಮನೇ ಇರುತ್ತಿದ್ದರು. ಆದರೆ, ಅವರು ಬೌಲಿಂಗ್​​ ದಾಳಿಯಲ್ಲೂ ದುಬಾರಿ ಎನಿಸಿಕೊಂಡಿದ್ದರು. ಆದರೆ, ಹೇಗಾದರೂ ಮಾಡಿ ಪ್ರೇಕ್ಷಕರಿಗೆ ಪ್ರತಿಕ್ರಿಯೆ ಕೊಡಬೇಕು ಎಂದು ನಿರ್ಧರಿಸಿದ್ದರ ನವಿನ್ ಉಲ್​ ಹಕ್​ ಇನಿಂಗ್ಸ್​ನ 14ನೇ ಓವರ್​ನಲ್ಲಿ ಫೀಲ್ಡಿಂಗ್ ಮಾಡುವಾಗ ಪ್ರೇಕ್ಷಕರತ್ತ ತಿರುಗಿ ಬಾಯ್ಮುಚ್ಚು ಎಂದು ಸನ್ನೆ ಮಾಡಿದರು.

ಇದನ್ನೂ ಓದಿ : IPL 2023: ಶೀಘ್ರದಲ್ಲೇ ರಿಂಕು ಸಿಂಗ್​ ಟೀಮ್​ ಇಂಡಿಯಾ ಸೇರಲಿದ್ದಾರೆ; ಹರ್ಭಜನ್​ ವಿಶ್ವಾಸ

ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಲಕ್ನೊ ಸೂಪರ್​ ಜೈಂಟ್ಸ್​ ತಂಡ ಆರ್​ಸಿಬಿಯನ್ನು ಸೋಲಿಸಿದಾಗ ಎಲ್​ಎಸ್​ಜಿ ಮೆಂಟರ್ ಗೌತಮ್​ ಗಂಭೀರ್ ಕೂಡ ಇದೇ ರೀತಿಯಲ್ಲಿ ವರ್ತಿಸಿದ್ದರು. ಇದಕ್ಕೆ ವಿರಾಟ್ ಕೊಹ್ಲಿ ತಕ್ಕ ಪ್ರತಿಕ್ರಿಯೆ ಕೊಟ್ಟಿದ್ದರು. ಅದೇ ಚಾಳಿಯನ್ನು ನವಿನ್​ ಉಲ್​ ಹಕ್​ ಮುಂದುವರಿಸಿದರು.

ಪಂದ್ಯದ 15 ಮತ್ತು 17 ನೇ ಓವರ್ ಗಳಲ್ಲಿ ನವೀನ್ ಕೆಲವು ಉತ್ತಮ ಎಸೆತಗಳನ್ನು ಎಸೆದರು. ಕ್ರಮವಾಗಿ ಆರು ಮತ್ತು ಐದು ರನ್ ಗಳನ್ನು ಬಿಟ್ಟುಕೊಟ್ಟರು, ಆದರೆ ಕೊನೆಯ ಓವರ್ ನಲ್ಲಿ ರಿಂಕು ಸಿಂಗ್ 20 ರನ್ ಬಾಚಿಕೊಂಡರು.

Exit mobile version