Site icon Vistara News

IPL 2023 : ಆರ್​ಸಿಬಿ ಸೋಲುತ್ತಿದ್ದಂತೆ ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ ನವಿನ್​ ಉಲ್ ಹಕ್​!

Navin

#image_title

ಬೆಂಗಳೂರು: ಅಫಘಾನಿಸ್ತಾನದ ವೇಗದ ಬೌಲರ್​ ನವಿನ್​ ಉಲ್​- ಹಕ್​ ಮತ್ತೊಂದು ಬಾರಿ ವಿರಾಟ್​ ಕೊಹ್ಲಿಯನ್ನು ಅಪಹಾಸ್ಯ ಮಾಡಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್​ಟೈಟನ್ಸ್​ ತಂಡ ರಾಯಲ್ ಚಾಲೆಂಜರ್ಸ್ ತಂಡವನ್ನು ಸೋಲಿಸಿದ ಬಳಿಕ ಗುಪ್ತ ಸಂದೇಶವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್​ ಮಾಡುವ ಮೂಲಕ ಅವರು ಮತ್ತೆ ಆರ್​ಸಿಬಿಯ ಕಾಲೆಳೆದಿದ್ದಾರೆ. ಇದರ ಬಗ್ಗೆ ಸೋಶಿಯಲ್​ ಮೀಡಿಯಾಗಳಲ್ಲಿ ಮಿಶ್ರ ಪ್ರತಿಕ್ರಿಯೆ ಎದುರಾಗಿದೆ. ಕೆಲವರು ನವಿನ್​ ಉಲ್​ ಹಕ್​ ಅವರನ್ನು ನಿಂದಿಸಿದ್ದರೆ, ಇನ್ನಲವರು ವಿರಾಟ್​ ಕೊಹ್ಲಿಗೆ ತಕ್ಕ ಶಾಸ್ತಿ ಎಂದು ಹೇಳಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರು ವಿಕೆಟ್​ಗಳಿಂದ ಸೋತ ಕೆಲವೇ ಕ್ಷಣಗಳಲ್ಲಿ ನವೀನ್, ಆಫ್ರಿಕನ್ ವರದಿಗಾರೊಬ್ಬರು ನಗುವ ವಿಡಿಯೊವನ್ನು ಶೇರ್​ ಮಾಡಿದರು. ಅದು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿರುವ ವಿಡಿಯೊ. ವರದಿಗಾರ ನಗುವ ಮೊಲು “ದೇವರು ನಮ್ಮ ಮೇಲೆ ಕರುಣೆ ತೋರಲಿ” ಎಂದು ಹೇಳುತ್ತಾರೆ. ಈ ವಿಡಿಯೊವನ್ನು ಹಾಕುವ ಮೂಲಕ ನವಿನ್​ ಉಲ್​ ಹಕ್​ ಸೇಡು ತೀರಿಸಿಕೊಂಡಿದ್ದಾರೆ.

ಈ ನಿರ್ದಿಷ್ಟ ವೀಡಿಯೊವನ್ನು ಹಂಚಿಕೊಳ್ಳುವುದರ ಹಿಂದೆ ಒಂದು ಉದ್ದೇಶವಿದೆ. ಇದನ್ನು ಕೊಹ್ಲಿ ಅಭಿಮಾನಿಗಳು ಮಾತ್ರ ನೆನಪಿಸಿಕೊಳ್ಳುತ್ತಾರೆ. ಮಾರ್ಚ್​​ನಲ್ಲಿ ಆರ್​ಸಿಬಿಯ ಮಾಜಿ ಆಟಗಾರ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್​​ನ ಲೈವ್ ವಿಡಿಯೋದಲ್ಲಿ ವಿರಾಟ್​ ಕೊಹ್ಲಿ ಜತೆ ಚಾಟ್ ಮಾಡಿದ್ದರು. ಈ ವೇಳೇ ನವೀನ್ ಹಂಚಿಕೊಂಡ ದೇ ನಿರ್ದಿಷ್ಟ ವೀಡಿಯೊದ ಬಗ್ಗೆ ಮಾತನಾಡಿದ್ದರು. ಕೊಹ್ಲಿ ಅದು ತಮ್ಮ ನೆಚ್ಚಿನ ವೀಡಿಯೊ ಎಂದು ಕರೆದಿದ್ದರು.

ಇದನ್ನೂ ಓದಿ : IPL 2023 : ಆರ್​ಸಿಬಿಗೆ ಸಿಗದ ಪ್ಲೇಆಫ್​ ಅವಕಾಶ, ಐಪಿಎಲ್​ ಅಂಕಪಟ್ಟಿ ಈಗ ಹೇಗಿದೆ?

ಆರ್​ಸಿಬಿಗೆ ಸೋಲು

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (IPL 2023) ತಂಡವು ಸೋಲಿನ ಅಭಿಯಾನ ಮುಂದುವರಿಸಿದೆ. ಗುಜರಾತ್‌ ಟೈಟನ್ಸ್‌ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ 2023ರ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದೆ. ಇದರೊಂದಿಗೆ ಆರ್‌ಸಿಬಿ ಅಭಿಯಾನ ಅಂತ್ಯವಾಗಿದೆ. ಇನ್ನು ಕಳೆದ 16 ಸೀಸನ್‌ಗಳಲ್ಲಿ ಆರ್‌ಸಿಬಿ ಪ್ರದರ್ಶನ ಹೇಗಿತ್ತು? ಎಷ್ಟು ಬಾರಿ ಪ್ಲೇಆಫ್‌ಗೆ ಹೋಗಿತ್ತು? ಎಷ್ಟು ಸಲ ಫೈನಲ್‌ಗೇರಿತ್ತು ಹಾಗೂ ಎಷ್ಟು ಬಾರಿ ಪ್ಲೇಆಫ್‌ ಕೂಡ ಪ್ರವೇಶಿಸದೆ ಮನೆಗೆ ಹೋಗಿತ್ತು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಎಂಟು ಬಾರಿ ಪ್ಲೇಆಫ್‌ ಪ್ರವೇಶ

ಆಡಿರುವ 16 ಸೀಸನ್‌ಗಳಲ್ಲಿ ಆರ್‌ಸಿಬಿಯು ಎಂಟು ಬಾರಿ ಪ್ಲೇಆಫ್‌ಗೆ ತಲುಪಿದ ಸಾಧನೆ ಮಾಡಿದೆ. 2022 ಹಾಗೂ 2021ರಲ್ಲಿ ಪ್ಲೇಆಫ್‌ಗೆ ತೆರಳಿದ್ದ ಆರ್‌ಸಿಬಿ, ಫೈನಲ್‌ಗೇರುವಲ್ಲಿ ವಿಫಲವಾಗಿತ್ತು. 2020ರಲ್ಲಿ ಬೆಂಗಳೂರು ತಂಡವು 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇನ್ನು 2019ರಲ್ಲಿ 8, 2018ರಲ್ಲಿ 6, 2017ರಲ್ಲಿ 8, 2016ರಲ್ಲಿ ರನ್ನರ್ಸ್‌ ಅಪ್‌, 2015ರಲ್ಲಿ ತೃತೀಯ, 2014ರಲ್ಲಿ 7, 2013ರಲ್ಲಿ 5, 2012ರಲ್ಲಿ 5, 2011ರಲ್ಲಿ ರನ್ನರ್ಸ್‌ ಅಪ್‌, 2010ರಲ್ಲಿ ತೃತೀಯ, 2009ರಲ್ಲಿ ರನ್ನರ್ಸ್‌ ಅಪ್‌ ಹಾಗೂ 2008ರಲ್ಲಿ 7ನೇ ಸ್ಥಾನ ಪಡೆದಿತ್ತು. ಈಗ 2023ರಲ್ಲಿ ಆರನೇ ಸ್ಥಾನ ಪಡೆಯುವಲ್ಲಿ ಮಾತ್ರ ಶಕ್ತವಾಗಿದೆ.

Exit mobile version