ಕೊಲಂಬೊ: ಭಾರತ ಮತ್ತು ಪಾಕಿಸ್ತಾನ (ind vs pak) ನಡುವಿನ ಏಷ್ಯಾ ಕಪ್ ಸೂಪರ್ 4 (Asia cup 2023) ಹೈ ವೋಲ್ಟೇಜ್ ಥ್ರಿಲ್ಲರ್ ಪಂದ್ಯಕ್ಕೆ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಈ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗು ಬಡಿಯಲಿದೆ ಎಂಬ ವಿಶ್ವಾಸದಲ್ಲಿದೆ. ಆದೆರ, ಈ ಹಣಾಹಣಿಗೆ ಮಳೆಯ ಬೆದರಿಕೆ ಇದೆ, ಇದರಿಂದಾಗಿ ಏಷ್ಯಾ ಕಪ್ 2023 ಸ್ಪರ್ಧೆಯ ವೇಗಕ್ಕೆ ಅಡಚಣೆಯಾಗಬಹುದು ಎನ್ನಲಾಗಿದೆ.
ಕ್ಯಾಂಡಿಯ ಪಲ್ಲೆಕೆಲೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಗುಂಪು ಹಂತದ ಮುಖಾಮುಖಿ ನಿರಂತರ ಮಳೆಯಿಂದಾಗಿ ರದ್ದಾಗಿತ್ತು. ಭಾರತ ತಂಡ ಮೊದಲ ಇನಿಂಗ್ಸ್ ಆಡಿದ ತಕ್ಷಣವೇ ಮಳೆ ಬಂದ ಕಾರಣ ಪಂದ್ಯ ನಡೆಸಲು ಸಾಧ್ಯವಾಗಿರಲಿಲ್ಲ. ಸೂಪರ್ 4 ಪಂದ್ಯವು ಸ್ಥಳೀಯ ಕಾಲಮಾನ ಮಧ್ಯಾಹ್ನ 3:00 ಗಂಟೆಗೆ (ಮತ್ತು ಭಾರತೀಯ ಕಾಲಮಾನ) ಪ್ರಾರಂಭವಾಗಲಿದೆ. ಆದರೆ, ‘ಅಕ್ಯೂವೆದರ್’ ಪ್ರಕಾರ ಗುಡುಗು ಸಹಿತ ದಿನವಿಡೀ ಮೋಡ ಕವಿದ ವಾತಾವರಣ ಹಾಗೂ ಮಳೆ ಬರುವ ಸಾಧ್ಯತೆಗಳನ್ನು ಹೇಳಿದೆ.
ಮೋಡದ ಹೊದಿಕೆ ಶೇಕಡಾ 96 ಮತ್ತು ಆರ್ದ್ರತೆಯು ಶೇಕಡಾ 84 ರಷ್ಟಿರುತ್ತದೆ. ಮಧ್ಯಾಹ್ನದ ಸಮಯದಲ್ಲಿ ಗಾಳಿಯು ಗಂಟೆಗೆ 41 ಕಿ.ಮೀ ವೇಗದಲ್ಲಿ ಮತ್ತು ನೈಋತ್ಯದಿಂದ ಗಾಳಿಯು ಗಂಟೆಗೆ 20 ಕಿ.ಮೀ ವೇಗದಲ್ಲಿ ಚಲಿಸುವ ಸಾಧ್ಯತೆಯಿದೆ. ಸಂಜೆಯ ಹೊತ್ತಿಗೆ, ಮೋಡದ ಹೊದಿಕೆ ಶೇಕಡಾ 100ರಷ್ಟಾಗಲಿದೆ. ಹೀಗಾಗಿ ಮಳೆಯ ಸಂಭವನೀಯತೆ ಶೇಕಡಾ 96 ರಷ್ಟಿದೆ.
ಇದನ್ನೂ ಓದಿ : ind vs pak : ಗೆಲುವಿನ ಹುಮ್ಮಸ್ಸಿನಲ್ಲಿರುವ ಪಾಕ್ ತಂಡ ಜಂಘಾಬಲ ಉಡುಗಿಸಲು ಟೀಮ್ ಇಂಡಿಯಾ ರೆಡಿ
‘ಬಿಬಿಸಿ ವೆದರ್’ ಕೂಡ ಮಧ್ಯಾಹ್ನದ ಸಮಯದಲ್ಲಿ ಮಳೆಯಾಗುವ ಶೇಕಡಾ 47 ರಷ್ಟು ಸಾಧ್ಯತೆಗಳನ್ನು ಅಂದಾಜಿಸಿದೆ, ಇದು ಸಂಜೆಯ ಬಳಿಕ ಹೆಚ್ಚಾಗುತ್ತದೆ. ಹವಾಮಾನದ ಅಂದಾಜಿನ ಪ್ರಕಾರ ಪಂದ್ಯದ ದಿನದಂದು ವರುಣದೇವ ತಮ್ಮ ಉಪಸ್ಥಿತಿ ತೋರಲಿರುವ ಕಾರಣ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ.
ಸೆಪ್ಟೆಂಬರ್ 11 ರಂದು ಮೀಸಲು ದಿನ
ನಿಗದಿತ ದಿನದಂದು ಪಂದ್ಯಕ್ಕೆ ಅಡ್ಡಿಯಾದರೆ, ಅದು ಮೀಸಲು ದಿನದಂದು ಪುನರಾರಂಭಗೊಳ್ಳುತ್ತದೆ. ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮೀಸಲು ದಿನವನ್ನು ನಿಗದಿಪಡಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸೂಪರ್ ಫೋರ್ನಲ್ಲಿ ಭಾಗವಹಿಸುವ ಎಲ್ಲಾ ನಾಲ್ಕು ತಂಡಗಳ ಮಂಡಳಿಗಳಿಂದ ಒಪ್ಪಿಗೆ ಪಡೆದಿದೆ ಎನ್ನಲಾಗಿದೆ.
ವಿಶೇಷವೆಂದರೆ, ಪಂದ್ಯದ ಅಧಿಕಾರಿಗಳು ಪಂದ್ಯದ ದಿನದಂದು ಆಟವನ್ನು 90 ನಿಮಿಷಗಳವರೆಗೆ ವಿಸ್ತರಿಸಬಹುದು, ಆದಾಗ್ಯೂ, ಭಾನುವಾರ ಪಂದ್ಯ ಪೂರ್ಣಗೊಳ್ಳುವುದಿಲ್ಲ ಎಂದು ಭಾವಿಸಿದರೆ ಆಟವು ಸೋಮವಾರ ಪುನರಾರಂಭಗೊಳ್ಳುತ್ತದೆ.
ತಂಡಗಳು ಇಂತಿವೆ
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.
ಪಾಕಿಸ್ತಾನ ತಂಡ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ಸಿ), ಮೊಹಮ್ಮದ್ ರಿಜ್ವಾನ್ (ವಿಕೆ), ಇಫ್ತಿಖರ್ ಅಹ್ಮದ್, ಅಘಾ ಸಲ್ಮಾನ್, ಶದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಶಾ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರವೂಫ್.