ಬರ್ಮಿಂಗ್ಹಮ್ : ಭಾರತದ ಮಹಿಳೆಯರ ಹಾಕಿ ತಂಡ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ (CWG-2022) ಕಂಚಿನ ಪದಕ ಗೆದ್ದಿದ್ದು, ಆಟಗಾರ್ತಿಯರು ಅಪಾರ ಸಂಭ್ರಮದಲ್ಲಿದ್ದಾರೆ. ಯಾಕೆಂದರೆ ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತು ನಿರಾಸೆ ಎದುರಿಸಿದ್ದ ಆಟಗಾರ್ತಿಯರಿಗೆ ಈ ಗೆಲುವು ಸಾಕಷ್ಟು ಖುಷಿ ಕೊಟ್ಟಿದೆ. ಹೀಗಾಗಿ ಡ್ರೆಸಿಂಗ್ ರೂಮ್‌ಗೆ ವಾಪಸಾದವರು ಹಿಂದಿ ಹಾಡೊಂದಕ್ಕೆ ನೃತ್ಯ ಮಾಡಿದ್ದಾರೆ.
ಆಟಗಾರ್ತಿಯರು ಕುಣಿದು ಸಂಭ್ರಮ ಪಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಕ್ಷಾಂತರ ಮಂದಿ ವನಿತೆಯರ ಸಂಭ್ರಮಕ್ಕೆ ಭೇಷ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತಿದ್ದ ಭಾರತ ತಂಡ ಭಾನುವಾರ ನ್ಯೂಜಿಲೆಂಡ್ ವಿರುದ್ಧ ಕಂಚಿನ ಪದಕದ ಪಂದ್ಯದಲ್ಲಿ ಆಡಿತ್ತು. ಈ ಪಂದ್ಯದ ಪೂರ್ಣ ಅವಧಿಯಲ್ಲಿ ಇತ್ತಂಡಗಳು ೧-೧ ಗೋಲ್‌ಗಳ ಸಮಬಲ ಸಾಧಿಸಿದರೆ, ಬಳಿಕ ಫಲಿತಾಂಶಕ್ಕಾಗಿ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ೨-೧ ಗೋಲ್‌ಗಳಿಂದ ಭಾರತ ಜಯ ಸಾಧಿಸಿತ್ತು. ಈ ಮೂಲಕ ಭಾರತದ ವನಿತೆಯರ ತಂಡ ೧೬ ವರ್ಷಗಳ ಬಳಿಕ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದಂತಾಗಿದೆ. ೨೦೦೨ರಲ್ಲಿ ವನಿತೆಯರು ಬಂಗಾರದ ಪದಕ ಗೆದ್ದಿದ್ದರೆ, ನಾಲ್ಕು ವರ್ಷದ ಬಳಿಕ ಬೆಳ್ಳಿ ಗೆದ್ದಿದ್ದರು. ಇದೀಗ ೧೬ ವರ್ಷದ ನಂತರದ ಪದಕ ಸಿಕ್ಕಿದೆ.
ಇದನ್ನೂ ಓದಿ | CWG- 2022 | ನ್ಯೂಜಿಲೆಂಡ್ ಮಣಿಸಿದ ಭಾರತದ ವನಿತೆಯರ ಹಾಕಿ ತಂಡಕ್ಕೆ ಕಂಚು