Site icon Vistara News

Rinku Singh: ಸೂಪರ್​ ಸಿಕ್ಸರ್​ ಬಾರಿಸಿ ತಂಡವನ್ನು ಗೆಲ್ಲಿಸಿದ ರಿಂಕು ಸಿಂಗ್​

Rinku Singh Smashes 3 Sixes

ಕಾನ್ಪುರ: 16ನೇ ಆವೃತ್ತಿಯ ಐಪಿಎಲ್​ನಲ್ಲಿ ಸತತ 5 ಸಿಕ್ಸರ್​ ಬಾರಿಸಿ ಎಲ್ಲಡೆ ಸುದ್ದಿಯಾಗಿದ್ದ ರಿಂಕು ಸಿಂಗ್​(Rinku Singh) ಇತ್ತೀಚೆಗಷ್ಟೇ ಟೀಮ್​ ಇಂಡಿಯಾ ಪರ ಪದಾರ್ಪಣೆ ಮಾಡಿದ್ದರು. ಇದೀಗ ಮತ್ತೆ ಸಿಕ್ಸರ್(Rinku Singh Consecutive Sixes)​ ವಿಚಾರದಲ್ಲೇ ಅವರು ಸುದ್ದಿಯಾಗಿದ್ದಾರೆ. ಯುಪಿ ಟಿ20 ಲೀಗ್​ನಲ್ಲಿ(UP T20 league) ಮೀರತ್ ಮೇವ್ರಿಕ್ಸ್(Meerut Mavericks) ಪರ ಕಣಕ್ಕಿಳಿದ ರಿಂಕು ಸೂಪರ್​ ಓವರ್​ನಲ್ಲಿ(Super Over) ಹ್ಯಾಟ್ರಿಕ್​ ಸಿಕ್ಸರ್​ ಬಾರಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದಾರೆ. ಅವರ ಈ ಸಿಕ್ಸರ್​ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video) ಆಗಿದೆ.​

ಗುರುವಾರ ರಾತ್ರಿ ನಡೆದಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಮೀರತ್ ತಂಡ ನಿಗದಿತ 20 ಓವರ್​ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಕಾಶಿ ತಂಡ ಏಳು ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಪಂದ್ಯವನ್ನು ಟೈಗೊಳಿಸಿತು. ಹೀಗಾಗಿ ಸೂಪರ್​ ಓವರ್​ ಮೊರೆ ಹೋಗಲಾಯಿತು.

ಹ್ಯಾಟ್ರಿಕ್​​ ಸಿಕ್ಸರ್​

ಸೂಪರ್​ ಓವರ್​ನಲ್ಲಿ ಮೊದಲ ಬ್ಯಾಟಿಂಗ್​ ನಡೆಸಿದ ಕಾಶಿ ತಂಡ 16 ರನ್​ ಬಾರಿಸಿತು. ಚೇಸಿಂಗ್​ ನಡೆಸಲು ಬಂದ ರಿಂಕು ಸಿಂಗ್​ ಮೊದಲ ಎಸೆತದಲ್ಲಿ ರನ್​ ಗಳಿಸಲು ವಿಫಲರಾದರು. ಈ ವೇಳೆ ಪಂದ್ಯ ಮತ್ತಷ್ಟು ರೋಚಕತೆಗೆ ಸಾಗಿತು. ಆದರೆ ಮುಂದಿನ ಮೂರು ಎಸೆತಗಳಲ್ಲಿ ದೊಡ್ಡ ಸಿಕ್ಸರ್​ ಬಾರಿಸಿ ತಂಡದ ಗೆಲುವು ಸಾಧಿಸಿದರು. ಅವರ ಸಿಕ್ಸರ್​ ಕಾಣುವಾಗ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರಿಗೆ ಒಂದು ಕ್ಷಣ ಗುಜರಾತ್​ ವಿರುದ್ಧದ ಐಪಿಎಲ್​ ಪಂದ್ಯ ಕಣ್ಣೆದುರು ಬಂದಂತೆ ಭಾಸವಾಯಿತು. ಅಂದು ರಿಂಕು ಸಿಂಗ್​ ಅವರು ಗುಜರಾತ್​ ತಂಡದ ಯಶ್​ ದಯಾಳ್​ ಓವರ್​ನಲ್ಲಿ ಸತತ 5 ಸಿಕ್ಸರ್​ ಸಿಡಿಸಿ ಮಿಂಚಿದ್ದರು.

ಇದನ್ನೂ ಓದಿ IPL 2023 : ರಿಂಕು ಸಿಂಗ್ ಹೊಗಳಿದ ವಿರಾಟ್​ ಕೊಹ್ಲಿ, ಏನಂದರು ಅವರು?

ಕೆಕೆಆರ್ ತಂಡದ ಕೀ ಪ್ಲೇಯರ್‌

ಅಂಡರ್‌-16, ಕಾಲೇಜು ಮಟ್ಟದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ರಿಂಕು ರಣಜಿಗೆ ಆಯ್ಕೆಯಾದರು. ಇಲ್ಲಿನ ಯಶಸ್ಸು ಐಪಿಎಲ್‌ ಬಾಗಿಲು ತೆರೆಯಿತು. 2017ರಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 10 ಲಕ್ಷ ರೂ.ಗೆ ಇವರನ್ನು ಖರೀದಿಸಿತು. ಮುಂದಿನ ವರ್ಷ 80 ಲಕ್ಷ ರೂ.ಗೆ ಕೆಕೆಆರ್‌ ಪಾಲಾದರು. ಆದರೆ ಬಳಿಕ ಬಿಡುಗಡೆ ಮಾಡಿತು. 2022ರಲ್ಲಿ ಮತ್ತೆ 55 ಲಕ್ಷ ರೂ.ಗೆ ಖರೀದಿಸಿತು. ಈಗ ಕೆಕೆಆರ್‌ನ ಕೀ ಪ್ಲೇಯರ್‌ ಆಗಿದ್ದಾರೆ. ಐರ್ಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿಯೂ ಮಿಂಚಿದ್ದ ರಿಂಕು ಮುಂದಿನ ದಿನಗಳಲ್ಲಿ ಟೀಮ್​ ಇಂಡಿಯಾದ ಪ್ರಮುಖ ಆಟಗಾರನಾಗಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.

ನಿಷೇಧಕ್ಕೂ ಒಳಗಾಗಿದ್ದರು

2019ರಲ್ಲೊಮ್ಮೆ ರಿಂಕು ಸಿಂಗ್‌ ಬಿಸಿಸಿಐನಿಂದ ನಿಷೇಧಕ್ಕೂ ಒಳಗಾಗಿದ್ದರು. ಕಾರಣ, ಬಿಸಿಸಿಐ ಅನುಮತಿ ಪಡೆಯದೆ ವಿದೇಶಿ ಟಿ20 ಲೀಗ್‌ ಒಂದರಲ್ಲಿ ಆಡಿದ್ದು. ಈ 3 ತಿಂಗಳ ನಿಷೇಧವನ್ನು ಅನುಭವಿಸಿದ್ದರು.

Exit mobile version