Site icon Vistara News

Neeraj Chopra : ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಿಡಿಯುವ ಅವಕಾಶ ಶ್ರೀಜೇಶ್​ಗೆ ಬಿಟ್ಟುಕೊಟ್ಟ ನೀರಜ್​ ಚೋಪ್ರಾ

Neeraj Chopra

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಬೆಳ್ಳಿ ಪದಕ ಗೆದ್ದಿರುವ ಜಾವೆಲಿನ್​ ಎಸೆತಗಾರ ನೀರಜ್​ ಚೋಪ್ರಾ (Neeraj Chopra) ಭಾರತದ ಅಥ್ಲೀಟ್​ಗಳ ಹೃದಯವನ್ನು ಮತ್ತೊಂದು ಬಾರಿ ಗೆದ್ದಿದ್ದಾರೆ. ಹೇಗೆಂದರೆ ಸಮಾರೋಪ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಹಿಡಿದು ಸಾಗಲು ತಮಗಿದ್ದ ಅವಕಾಶವನ್ನು ಅವರು ಹಾಕಿ ತಂಡದ ಗೋಲ್​ ಕೀಪರ್​ಗೆ ನೀಡಿ ದೊಡ್ಡವರು ಎನಿಸಿಕೊಂಡಿದ್ದಾರೆ. ಈ ವಿಷಯವನ್ನು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿ.ಟಿ.ಉಷಾ ಬಹಿರಂಗಪಡಿಸಿದ್ದಾರೆ.

ಭಾರತದ ಧ್ವಜಧಾರಿಯಾಗಲು ನೀರಜ್ ಚೋಪ್ರಾ ಹೇಗೆ ಅನುಮತಿ ನೀಡಿದರು ಎಂಬುದನ್ನು ಆಗಸ್ಟ್ 9 ಶುಕ್ರವಾರದಂದು ಪಿಟಿ ಉಷಾ ಹೇಳಿದ್ದಾರೆ. ಶೂಟರ್ ಮನು ಭಾಕರ್ ಅವರೊಂದಿಗೆ ಶ್ರೀಜೇಶ್ ಭಾರತೀಯ ತಂಡದ ಜಂಟಿ ಧ್ವಜಧಾರಿಯಾಗಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ವರದಿಗಳ ಪ್ರಕಾರ, ಭಾರತದ ಗೋಲ್ ಕೀಪರ್ ಮತ್ತು ನೀರಜ್ ಇಬ್ಬರೂ ಮನು ಅವರೊಂದಿಗೆ ಧ್ವಜಧಾರಿಯಾಗುವ ಅವಕಾಶವಿತ್ತು. ಆದರೆ, ನೀರಜ್ ಅವರು ಶ್ರೀಜೇಶ್​ಗೆ ಕೊಡುವಂತೆ ಸಲಹೆ ಕೊಟ್ಟಿದ್ದಾರೆ.

ಉಷಾ ಈಗ ಶ್ರೀಜೇಶ್ ಅವರ ನಿಸ್ವಾರ್ಥ ಕಾರ್ಯವನ್ನು ಬಹಿರಂಗಪಡಿಸಿದ್ದಾರೆ. ಅವರನ್ನು ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯನ್ನಾಗಿ ಮಾಡುವಂತೆ ಕೋರಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಶ್ರೀಜೇಶ್ ಭಾರತದ ಧ್ವಜಧಾರಿಯಾಗಲು ಅವರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ನಾನು ನೀರಜ್ ಚೋಪ್ರಾ ಅವರೊಂದಿಗೆ ಮಾತನಾಡಿದ್ದೇನೆ. ಸಮಾರೋಪ ಸಮಾರಂಭದಲ್ಲಿ ಶ್ರೀಜೇಶ್ ಧ್ವಜಧಾರಿಯಾಗಬೇಕೆಂದು ಅವರು ಒಪ್ಪಿಕೊಂಡಿದ್ದಾರೆ. ಅವರಿಗೆ ಅಭಿನಂದನೆ ಎಂದು ಪಿಟಿ ಉಷಾ ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಆಗಸ್ಟ್​​ 10ರಂದು ಭಾರತಕ್ಕೆ ಯಾವ್ಯಾವ ಸ್ಪರ್ಧೆಗಳಿವೆ? ಇಲ್ಲಿದೆ ವಿವರ

ಮೇಡಂ, ನೀವು ನನ್ನನ್ನು ಕೇಳಿದ್ದರೂ ನಾನು ಶ್ರೀಜೇಶ್ ಅವರ ಹೆಸರನ್ನೇ ಸೂಚಿಸುತ್ತಿದ್ದೆ ಎಂದು ನೀರಜ್ ಅವರು ನನಗೆ ಹೇಳಿದರು. ಇದು ಶ್ರೀಜೇಶ್ ಬಗ್ಗೆ ನೀರಜ್ ಹೊಂದಿರುವ ಅಪಾರ ಗೌರವ ಮತ್ತು ಭಾರತೀಯ ಕ್ರೀಡೆಗೆ ಅವರು ನೀಡಿದ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಉಷಾ ಅವರು ಹೇಳಿದ್ದಾರೆ.

ಶ್ರೀಜೇಶ್ 2 ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಕ್ರೀಡೆಗೆ ಪ್ರಶಂಸನೀಯ ಸೇವೆ ಸಲ್ಲಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಯಾಗಲು ಶ್ರೀಜೇಶ್ “ಭಾವನಾತ್ಮಕ ಮತ್ತು ಜನಪ್ರಿಯ ಆಯ್ಕೆ” ಎಂದು ಉಷಾ ಅಭಿಪ್ರಾಯಪಟ್ಟಿದ್ದಾರೆ.

“ಶ್ರೀಜೇಶ್ ಅವರು ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಭಾರತೀಯ ಹಾಕಿಗೆ ಮತ್ತು ಸಾಮಾನ್ಯವಾಗಿ ಭಾರತೀಯ ಕ್ರೀಡೆಗೆ ಪ್ರಶಂಸನೀಯ ಸೇವೆ ಸಲ್ಲಿಸಿದ್ದಾರೆ” ಎಂದು ಅವರು ಹೇಳಿದರು.

ಶ್ರೀಜೇಶ್ ಮತ್ತು ನೀರಜ್ ಅವರ ಅದ್ಭುತ ಒಲಿಂಪಿಕ್ ಅಭಿಯಾನಗಳು

ಶ್ರೀಜೇಶ್ ಮತ್ತು ನೀರಜ್ ಇಬ್ಬರೂ ಈ ವರ್ಷ ಪ್ಯಾರಿಸ್​​ನಲ್ಲಿ ಅದ್ಭುತ ಒಲಿಂಪಿಕ್ ಅಭಿಯಾನ ಕಂಡಿದ್ದಾರೆ. ಒಲಿಂಪಿಕ್ಸ್ನಲ್ಲಿ ಸತತ ಎರಡನೇ ಕಂಚಿನ ಪದಕ ಗಳಿಸಿರುವ ಭಾರತೀಯ ಗೋಲ್ ಕೀಪರ್ ಅವರ ತಂಡದ ಪ್ರಮುಖ ತಾರೆಗಳಲ್ಲಿ ಒಬ್ಬರಾಗಿದ್ದಾರೆ. 1972ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಸತತ ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಜಾವೆಲಿನ್ ಸ್ಪರ್ಧೆಯಲ್ಲಿ ನೀರಜ್ 89.45 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಗಳಿಸಿದ್ದಾರೆ. ಇದು ಅವರ ವೃತ್ತಿಜೀವನದ ಎರಡನೇ ಅತ್ಯುತ್ತಮ ಎಸೆತ. ಆದರೆ, ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ದೂರ ಎಸೆದು ಹೊಸ ಒಲಿಂಪಿಕ್ ದಾಖಲೆ ನಿರ್ಮಿಸಿ ಚಿನ್ನ ಗೆದ್ದರು.

Exit mobile version