Site icon Vistara News

Javelin Throw | ಲೂಸಾನ್‌ ಡೈಮಂಡ್‌ಲೀಗ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ

javelin throw

ಲೂಸಾನ್‌ (ಫ್ರಾನ್ಸ್‌) : ಭಾರತದ ಸ್ಟಾರ್‌ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ (Javelin Throw) ಇಲ್ಲಿ ನಡೆದ ಲೂಸಾನ್ ಡೈಮಂಡ್‌ ಲೀಗ್‌ನಲ್ಲಿ ಗರಿಷ್ಠ ೮೯. ೦೮ ಮೀಟರ್‌ ದೂರ ಜಾವೆಲಿನ್‌ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಭಾರತದ ಜಾವೆಲಿನ್‌ ಎಸೆತಗಾರ ಹಾಲಿ ವರ್ಷದಲ್ಲಿ ಮೂರನೇ ಬಾರಿ ೮೯ ಮೀಟರ್‌ಗಿಂತ ಅಧಿಕ ದೂರ ಜಾವೆಲಿನ್‌ ಎಸೆದ ಸಾಧನೆ ಮಾಡಿದರು. ಈ ಸಾಧನೆಯೊಂದಿಗೆ ಅವರು ಮುಂದಿನ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡರು.

ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ನೀರಜ್‌ ಚೋಪ್ರಾ ತಮ್ಮ ಮೊದಲ ಎಸೆತದಲ್ಲಿಯೇ 89.08 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದರು. ಆದರೆ, ಎರಡನೇ ಎಸೆತದಲ್ಲಿ 85.18 ಮೀಟರ್‌ ದೂರ ಎಸೆದರು. ಅಂತೆಯೇ ಮೂರನೇ ಹಾಗೂ ಐದನೇ ಪ್ರಯತ್ನವನ್ನು ಮಾಡಲಿಲ್ಲ. ಏತನ್ಮಧ್ಯೆ ನಾಲ್ಕನೇ ಎಸೆತದಲ್ಲಿ ಪೌಲ್‌ ಆದರು. ಆರನೇ ಎಸೆತ ಕೇವಲ 80.04 ಮೀಟರ್‌ ದೂರಕ್ಕೆ ಕೊನೆಯಾಯಿತು.

ಲೂಸಾನ್‌ ಡೈಮಂಡ್‌ ಲೀಗ್‌ ಸೆಪ್ಟೆಂಬರ್‌ ೭ ಮತ್ತು ೮ರಂದು ಸ್ವಿಜರ್ಲೆಂಡ್‌ನ ಜ್ಯೂರಿಚ್‌ನಲ್ಲಿ ನಡೆಯಲಿರುವ ಡೈಮಂಡ್‌ಲೀಗ್‌ ಫೈನಲ್‌ ಸ್ಪರ್ಧೆಗೆ ಅರ್ಹತೆ ಪಡೆಯಲು ಕೊನೇ ಅವಕಾಶವಾಗಿದೆ. ನೀರಜ್‌ ಚೋಪ್ರಾ ಅವರು ಡೈಮಂಡ್‌ ಲೀಗ್‌ ಅಂಕಪಟ್ಟಿಯಲ್ಲಿ ಏಳು ಅಂಕಗಳನ್ನು ಸಂಪಾದಿಸಿ ನಾಲ್ಕನೆಯವರಾಗಿ ಫೈನಲ್‌ಗೆ ತಲುಪಿಸಿದರು. ಈ ಸ್ಪರ್ಧೆಗೆ ಅಂಕಪಟ್ಟಿಯ ಅಗ್ರ ಆರು ಸ್ಪರ್ಧಿಗಳು ಮಾತ್ರ ಅವಕಾಶ ಪಡೆಯುತ್ತಾರೆ.

ಇದನ್ನೂ ಓದಿ | World Athletics Championships | ಒಂದೇ ತಿಂಗಳಲ್ಲಿ ಎರಡು ಬೆಳ್ಳಿ ಪದಕ ಗೆದ್ದ ನೀರಜ್‌ ಚೋಪ್ರಾ

Exit mobile version