Site icon Vistara News

Neeraj Chopra: ಪ್ಯಾರಿಸ್‌ನಿಂದ ಜರ್ಮನಿಗೆ ತೆರಳಿದ ಚೋಪ್ರಾ; ಭಾರತಕ್ಕೆ ಮರಳುವುದು ವಿಳಂಬ

Neeraj Chopra

Neeraj Chopra: Neeraj Chopra flies to Germany after Paris Olympics to seek medical advice

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​(paris olympics) ಬೆಳ್ಳಿ ಪದಕ ವಿಜೇತ ಭಾರತದ ಸ್ಟಾರ್​ ಜಾವೆಲಿನ್ ಎಸೆತಗಾರ ನೀರಜ್​ ಚೋಪ್ರಾ(Neeraj Chopra) ಅವರು ತವರಿಗೆ ಮರಳುವುದು ಕೊಂಚ ತಡವಾಗಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ನೀರಜ್​ ತಮ್ಮ ಗಾಯಕ್ಕೆ ಶಸ್ತ್ರಚಿಕಿತ್ಸೆಯ(neeraj chopra surgery) ಕುರಿತು ವೈದ್ಯರಿಂದ ಸಲಹೆ ಪಡೆಯಲು ಪ್ಯಾರಿಸ್‌ನಿಂದ ನೇರವಾಗಿ ಜರ್ಮನಿಗೆ ತೆರಳಿದ್ದಾರೆ. ಹೀಗಾಗಿ ಅವರು ಭಾರತಕ್ಕೆ ಮರಳುವುದು ವಿಳಂಬವಾಗಲಿದೆ.

ಕುಟುಂಬದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ನೀರಜ್​ ಸುಮಾರು ಒಂದು ತಿಂಗಳ ನಂತರ ಭಾರತಕ್ಕೆ ಮರಳಬಹುದು ಎನ್ನಲಾಗಿದೆ. ‘ನೀರಜ್​ ಜರ್ಮನಿಯಲ್ಲಿ ವೈದ್ಯರನ್ನು ಭೇಟಿಯಾಗಲಿದ್ದಾರೆಂಬುದು ತಿಳಿದಿದೆ. ಆದರೆ, ಉಳಿದ ಯಾವುದೇ ಮಾಹಿತಿಗಳು ಗೊತ್ತಿಲ್ಲ’ ಎಂದು ನೀರಜ್ ಸಂಬಂಧಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ತೊಡೆಯ ಸ್ನಾಯುಗಳಿಗೆ ಸಂಬಂಧಿಸಿದ ನೋವಿನಿಂದ ಬಳಲುತ್ತಿರುವ ನೀರಜ್​ ನೋವಿನ ಮಧ್ಯೆಯೇ ಈ ಬಾರಿ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕಣಕ್ಕಿಳಿದಿದ್ದರು. ಗಾಯದ ಬಗ್ಗೆ ಸ್ವತಃ ನೀರಜ್​ ಅವರೇ ಮಾಹಿತಿ ನೀಡಿದ್ದರು. ಜತೆಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೆ ಇದನ್ನು ಮಾಡಿಸುವುದಾಗಿ ತಿಳಿಸಿದ್ದರು.

ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಮತ್ತು ಶೂಟರ್ ಮನು ಭಾಕರ್ (Manu Bhaker) ಕಾರ್ಯಕ್ರಮವೊಂದರಲ್ಲಿ ಗುಟ್ಟಾಗಿ ಮಾತನಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಭಾರತದ ಕ್ರೀಡಾ ಕ್ಷೇತ್ರ ನವ ತಾರೆಗಳಾಗಿರುವ ಅವರಿಬ್ಬರೂ ಪರಸ್ಪರ ಸ್ನೇಹದ ಬಲೆಯಲ್ಲಿ ಬಿದ್ದಿದ್ದಾರೆ ಎಂಬುದಾಗಿ ಅಭಿಮಾನಿಗಳ ಅನುಮಾನ. ಅವರಿಬ್ಬರೂ ಮಾತನಾಡುತ್ತಿರುವ ವಿಡಿಯೊವನ್ನು ವೈರಲ್ ಮಾಡಿರುವ ನೆಟ್ಟಿಗರು ನಾನಾ ರೀತಿಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ ಇಬ್ಬರೂ ಮಾತನಾಡುವಾರ ಪರಸ್ಪರ ದೃಷ್ಟಿ ನೆಡದ ಕಾರಣ ಇವರೊಳಗೇನೋ ನಡಿತಾ ಇದೆ ಎಂಬುದಾಗಿ ನೆಟ್ಟಿಗರು ಅಂದಾಜಿಸಿದ್ದಾರೆ.

ಇದನ್ನೂ ಓದಿ Neeraj Chopra : ನೀರಜ್ ಚೋಪ್ರಾ ಭೇಟಿಯಾದ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ

ಟೋಕಿಯೊ ಒಲಿಂಪಿಕ್ಸ್​ನಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದ ಚೋಪ್ರಾ ಅವರು ಚಿನ್ನ ಗೆದ್ದು ಭಾರೀ ಸುದ್ದಿಯಾಗಿದ್ದರು. ಈ ಬಾರಿ ನೋವಿನಲ್ಲೂ ಹೋರಾಟ ನಡೆಸಿ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಒಲಿಂಪಿಕ್ ಪದಕಗಳನ್ನು ಪಡೆದ ಭಾರತದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ಹಿರಿಮೆಗೆ ಭಾಜನರಾದರು.

ನೀರಜ್​ ಹಾಗೂ ಮನು ಹರಿಯಾಣದ ಮೂಲದವರು. ಇಬ್ಬರೂ ಕ್ರೀಡೆಯ ಪ್ರೇರಕ ಕುಟುಂಬಕ್ಕೆ ಸೇರಿದವರು. ಹೀಗಾಗಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಮಾತನಾಡಿದ್ದು ಅಭಿಮಾನಿಗಳಲ್ಲಿ ನೂರು ಪ್ರಶ್ನೆಗಳನ್ನು ಸೃಷ್ಟಿಸಿತು. ಅವರು ಡೇಟಿಂಗ್ ಮಾಡುತ್ತಿರಬಹುದು ಎಂದು ಹಲವರು ಅಂದಾಜಿಸಿದ್ದಾರೆ. ಅವರಿಬ್ಬರು ಸಂಬಂಧದಲ್ಲಿಲ್ಲ ಎಂದು ತಿಳಿದಿದ್ದರೂ ಅನೇಕ ನಿಷ್ಠಾವಂತ ಅಭಿಮಾನಿಗಳು ಅವರು ದಂಪತಿಗಳಾಗಬೇಕೆಂದು ಆಶಿಸಿದರು. ಇಬ್ಬರೂ ಮಾತನಾಡುವ ವೀಡಿಯೊದ ಬಗ್ಗೆ ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ.

ಇದೇ ರೀತಿ ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಅವರು ನೀರಜ್ ಅವರ ಕೈ ಹಿಡಿದುಕೊಂಡು ಮಾತನಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾಕರ್ ಅವರ ತಾಯಿ ನೀರಜ್ ಅವರನ್ನು ತಮ್ಮ ಮಗಳಿಗೆ ಸಂಭಾವ್ಯ ಜೋಡಿಯಾಗಿ ನಿರ್ಣಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅನೇಕ ಬಳಕೆದಾರರು ಪ್ರತಿಕ್ರಿಯೆ ಕೊಟ್ಟಿದ್ದಾರೆ.

Exit mobile version