Site icon Vistara News

Neeraj Chopra: ಲುಸಾನ್‌ ಡೈಮಂಡ್ ಲೀಗ್​ನಲ್ಲಿ ಕಣಕ್ಕಿಳಿಯಲಿದ್ದಾರೆ ನೀರಜ್​ ಚೋಪ್ರಾ

Diamond League

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ ಚಾಂಪಿಯನ್‌, ಭಾರತದ ತಾರಾ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ(Neeraj Chopra) ಅವರು ಗಾಯದಿಂದ ಚೇತರಿಕೆ ಕಂಡಿದ್ದು, ಜೂನ್‌ 30ರಂದು ಲುಸಾನ್‌ನಲ್ಲಿ(Lausanne ) ನಡೆಯಲಿರುವ ಆರನೇ ಹಂತದ ಡೈಮಂಡ್ ಲೀಗ್​ನಲ್ಲಿ(Diamond League) ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಕುರಿತು ನೀರಜ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

“ಸ್ನಾಯು ಸೆಳೆತದಿಂದ ಚೇತರಿಕೆ ಕಂಡಿರುವ ವಿಶ್ವದ ಅಗ್ರಮಾನ್ಯ ಜಾವೆಲಿನ್‌ ಥ್ರೊ ಸ್ಪರ್ಧಿ ನೀರಜ್‌ ಅವರು ಲುಸಾನ್‌ನಲ್ಲಿ ನಡೆಯಲಿರುವ ಡೈಮಂಡ್‌ ಲೀಗ್‌ನಲ್ಲಿ ಆಡುವುದು ಬಹುತೇಕ ಖಚಿತ” ಎಂದು ಕ್ರೀಡಾ ವೆಬ್​ಸೈಟ್​​ ಒಂದು ವರದಿ ಮಾಡಿದೆ. ಜತೆಗೆ ನೀರಜ್‌ ಅವರಿಗೆ ಇಲ್ಲಿ ಚೆಕ್‌ ರಿಪಬ್ಲಿಕ್‌ನ ಯಾಕುಬ್‌ ವಡ್ಲೆಚ್‌(Vadlejch) ಮತ್ತು ಜರ್ಮನಿಯ ಜೂಲಿಯನ್‌ ವೆಬರ್‌(Weber) ಅವರು ಸವಾಲೊಡ್ಡಲಿದ್ದಾರೆ ಎಂದು ತಿಳಿಸಲಾಗಿದೆ.

ತರಬೇತಿ ವೇಳೆ ಸ್ನಾಯು ಸೆಳೆತವಾಗಿದ್ದ ಕಾರಣ ನೀರಜ್​ ಅವರು ಮುನ್ನೆಚ್ಚರಿಕೆ ಕ್ರಮವಾಗಿ ನೆದರ್ಲೆಂಡ್‌ನಲ್ಲಿ ನಡೆದ ಎಫ್‌ಬಿಕೆ ಗೇಮ್ಸ್‌ ಹಾಗೂ ಪಾವೊ ನೂರ್ಮಿ ಕೂಟದಿಂದ ಹಿಂದೆ ಸರಿದಿದ್ದರು. ಮೇ 5ರಂದು ಖತರ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ದೋಹಾ ಡೈಮಂಡ್ ಲೀಗ್ ಫೈನಲ್‌ನಲ್ಲಿ 88.67 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಗುರಿಯಿಟ್ಟಿದ್ದರು. ಕಳೆದ ವರ್ಷ ಜ್ಯುರಿಚ್‌ನಲ್ಲಿ ನಡೆ​ದಿದ್ದ ಡೈಮಂಡ್‌ ಲೀಗ್‌ ಫೈನ​ಲ್‌​ನ​ಲ್ಲಿ ಚಾಂಪಿ​ಯನ್‌ ಆಗಿ​, ಈ ಸಾಧನೆ ಮಾಡಿದ ಮೊದಲ ಭಾರ​ತೀಯ ಎಂಬ ಹೆಗ್ಗ​ಳಿ​ಕೆಗೆ ಪಾತ್ರ​ರಾ​ಗಿ​ದ್ದರು.

ಇದನ್ನೂ ಓದಿ Neeraj Chopra | ನೀರಜ್ ಚೋಪ್ರಾ ಅಭ್ಯಾಸದ ವಿಡಿಯೊ ಶೇರ್​ ಮಾಡಿದ ಆನಂದ್ ಮಹೀಂದ್ರಾ

ಸದ್ಯ ಉತ್ತಮ ಪ್ರದರ್ಶನ ತೋರುತ್ತಿರುವ ಅವರು ಈ ವರ್ಷ ಬುಡಾಪೆಸ್ಟ್‌ನಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ (ಆ 19 ರಿಂದ 27) ಮೇಲೆ ಚಿತ್ತ ನೆಟ್ಟಿದ್ದಾರೆ. ಇದರ ಜತೆಗೆ ಏಷ್ಯನ್‌ ಕ್ರೀಡಾಕೂಟವೂ ಇದೆ. ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿಯೂ ನೀರಜ್​ ಮೇಲೆ ಪದಕ ಬರವಸೆ ಇಡಲಾಗಿದೆ.

Exit mobile version