ಮುಂಬಯಿ: ಭಾರತದ ತಾರಾ ಜಾವೆಲಿನ್ ಎಸೆತಗಾರ, ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ಅವರು ಇದೇ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ಗೆ(paris olympics) ಮುನ್ನವೇ 90 ಮೀಟರ್ ಗಡಿಯನ್ನು ದಾಟುವ ವಿಶ್ವಾಸವಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಕಠಿಣ ತರಬೇತಿಯನ್ನು ಕೂಡ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ನೀರಜ್ರ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್ಹೋಮ್ ಡೈಮಂಡ್ ಲೀಗ್ನಲ್ಲಿ ಎಸೆದಿದ್ದರು. ಅಭ್ಯಾಸದ ವೇಳೆ ಈಗಾಗಲೆ ನೀರಜ್ ಹಲವು ಬಾರಿ 90 ಮೀ. ಗಡಿ ದಾಟಿದ್ದಾರೆ. ಆದರೆ, ಸ್ಪರ್ಧೆಗಳಲ್ಲಿ ಇದು ಸಾಧ್ಯವಾಗಿರಲಿಲ್ಲ. ಈ ಬಾರಿ ಸ್ಪರ್ಧೆಯಲ್ಲಿಯೂ ಇದನ್ನು ಸಾಧಿಸಲಿದ್ದೇನೆ ಎಂದು ನೀರಜ್ ಹೇಳಿದ್ದಾರೆ.
"Kishore ne last year kaafi accha progress Kiya hai chahe wo Asian Games ho ya World Championships. Main 2018 se 88-90m ke beech atka hua hu aur Kishore jis tarike se performance di hai to kya pata Kishore mujhse pehle 90m cross kar le." Neeraj Chopra #NeerajChopra… pic.twitter.com/GLFnONAtcw
— nnis (@nnis_sports) April 11, 2024
26 ವರ್ಷದ ನೀರಜ್ ಕಳೆದ ವರ್ಷದ ಏಷ್ಯನ್ ಗೇಮ್ಸ್ ಬಳಿಕ ಯಾವುದೇ ಟೂರ್ನಿಯಲ್ಲಿಯೂ ಕಣಕ್ಕಿಳಿದಿಲ್ಲ. ಇದೀಗ ಮೇ 10ರಂದು ದೋಹಾ ಡೈಮಂಡ್ ಲೀಗ್ನಲ್ಲಿ ಮರಳಿ ಕಣಕ್ಕಿಳಿಯಲಿದ್ದಾರೆ. ಬಳಿಕ ಜೂನ್ 18ರಂದು ಫಿನ್ಲ್ಯಾಂಡ್ನ ಪಾವೊ ನುರ್ಮಿ ಗೇಮ್ಸ್ನಲ್ಲೂ ಸ್ಪರ್ಧಿಸಲಿದ್ದಾರೆ. ಈ ಟೂರ್ನಿಯಲ್ಲಿ 90 ಮೀ. ಗಡಿ ದಾಟಲು ಅವರು ಪಣ ತೊಟ್ಟಿದ್ದಾರೆ.
ಇದನ್ನೂ ಓದಿ Neeraj Chopra: ರತನ್ ಟಾಟಾ ಭೇಟಿಯಾಗಿ ಹೃದಯಸ್ಪರ್ಶಿ ಸಂದೇಶ ಬರೆದ ನೀರಜ್ ಚೋಪ್ರಾ
“ನಾನು ಕಠಿಣ ತರಬೇತಿ ಪಡೆಯುತ್ತಿದ್ದೇನೆ ಮತ್ತು ಉತ್ತಮ ಭಾವನೆ ಹೊಂದಿದ್ದೇನೆ. ನನ್ನ ಸಾಮರ್ಥ್ಯದ ಅತ್ಯುತ್ತಮ ಪ್ರದರ್ಶನವನ್ನು ನಾನು ಇನ್ನೂ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ನಾನು ಹಿಂದೆಂದೂ ತಯಾರಿಸಿದ ಅತ್ಯುತ್ತಮ ತಯಾರಿಯಾನ್ನು ನಡೆಸುತ್ತಿದ್ದೇನೆ. ಇದು ಮುಂದಿನ ದಿನಗಳಲ್ಲಿ ಉತ್ತಮಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ನಾನು ನನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುತ್ತೇನೆ. ಈ ಸ್ಪರ್ಧೆಯನ್ನು ಆನಂದಿಸುತ್ತೇನೆ” ಎಂದು ನೀರಜ್ ಹೇಳಿದರು.
NNIS SPORTS: Kishore Jena has taken his game to a different level; he won the silver in the Asian Games with a throw of 87.54m, reached the World Championships final, and now he's ready to make his debut in the Diamond League. How do you see his progress?
— nnis (@nnis_sports) April 11, 2024
Neeraj Chopra:… pic.twitter.com/fINVZxa3PK
ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿರುವ ನೀರಜ್ ಈ ಬಾರಿಯೂ ಚಿನ್ನ ಗೆಲ್ಲಲಿ ಎನ್ನುವುದು ಶತ ಕೋಟಿ ಭಾರತೀಯರ ಆಶಯ ಮತ್ತು ಹಾರೈಕೆಯಾಗಿದೆ. 2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ಅತಿ ದೊಡ್ಡ ಮತ್ತು ಮಹತ್ವದ ಕ್ರೀಡಾಕೂಟವಾಗಿದೆ. ಸುಮಾರು 200 ದೇಶಗಳ 10,000 ಕ್ರೀಡಾಪಟುಗಳು ಒಲಿಂಪಿಕ್ ವೈಭವಕ್ಕಾಗಿ ಸ್ಪರ್ಧಿಸಲಿದ್ದಾರೆ. ಪ್ಯಾರಿಸ್ ತನ್ನ ಮೂರನೇ ಬಾರಿಗೆ ಆತಿಥೇಯ ನಗರವಾಗಿ (1900 ಮತ್ತು 1924 ರ ನಂತರ) ಟೂರ್ನಿಯ ಆತಿಥ್ಯ ವಹಿಸಿಕೊಳ್ಳಲಿದೆ. ಜುಲೈ 26 ರಿಂದ ಆಗಸ್ಟ್ 11ರ ತನಕ ಟೂರ್ನಿ ನಡೆಯಲಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.
ನೀರಜ್ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್ನಲ್ಲಿ ಬೆಳ್ಳಿ ಗೆದ್ದಿದ್ದರು. ಒಲಿಂಪಿಕ್ಸ್‌ನ ಟ್ರ್ಯಾಕ್ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.