ಬರ್ಮಿಂಗ್‌ಹ್ಯಾಮ್: World athletics championship- 2022 ಕೂಟದಲ್ಲಿ ಬೆಳ್ಳಿಯ ಪದಕ ಗೆದ್ದು ಚರಿತ್ರೆ ಬರೆದಿದ್ದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮುಂಬರುವ Commenwealth Games ಕೂಟಕ್ಕೆ ಅಲಭ್ಯರಾಗಿದ್ದಾರೆ. ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ವೇಳೆ ಅವರ ತೊಡೆಯ ನೋವಿನ ಸಮಸ್ಯೆಗೆ ಒಳಗಾಗಿದ್ದು, ಸಮಸ್ಯೆಯಿಂದ ಸುಧಾರಿಸಿಕೊಳ್ಳದ ಕಾರಣ ಮುಂದಿನ ಕೂಟಕ್ಕೆ ಅಲಭ್ಯರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ 88.13 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಗೆದ್ದಿದ್ದ ಅವರು Commenwealth Games ಕೂಟದಲ್ಲಿ ಬಂಗಾರ ಗೆಲ್ಲುವ ಅವಕಾಶವಿತ್ತು. ಹೀಗಾಗಿ ಅವರ ಅಲಭ್ಯತೆಯಿಂದ ಭಾರತದ ಅಥ್ಲೀಟ್‌ಗಳ ನಿಯೋಗಕ್ಕೆ ಹಿನ್ನಡೆ ಉಂಟಾಗಿದೆ.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಫೈನಲ್ ವೇಳೆ ಗಾಯದ ಸಮಸ್ಯೆ ಒಳಗಾಗಿರುವ ನೀರಜ್ ಅವರು ಇನ್ನೂ ಫಿಟ್ ಆಗಿಲ್ಲ. ಈ ಬಗ್ಗೆ ಅವರು ನಮಗೆ ಮಾಹಿತಿ ನೀಡಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮಾಹಿತಿ ನೀಡಿದ್ದಾರೆ.
ನೀರಜ್ ಚೋಪ್ರಾ ಅವರು Commenwealth Games ಕೂಟದ ಜಾವೆಲಿನ್ ಎಸೆತದ ಹಾಲಿ ಚಾಂಪಿಯನ್. ೨೦೧೮ರಲ್ಲಿ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕೂಟದಲ್ಲಿ ಅವರು ಬಂಗಾರದ ಪದಕ ಗೆದ್ದಿದ್ದರು. ನೀರಜ್ ಅವರು ಗಾಯಗೊಂಡಿರುವ ಸುದ್ದಿ World athletics championship ಆರಂಭಕ್ಕೆ ಎರಡು ದಿನಗಳು ಬಾಕಿ ಇರುವಂತೆಯೇ ಅಪ್ಪಳಿಸಿದೆ.
ಒರೆಗಾನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ಬಳಿಕ ಪ್ರತಿಕ್ರಿಯಿಸಿದ್ದ ನೀರಜ್, ನಾಲ್ಕನೇ ಪ್ರಯತ್ನದ ವೇಳೆ ನನಗೆ ತೊಡೆ ನೋವಿನ ಸಮಸ್ಯೆ ಕಾಣಿಸಿಕೊಂಡಿತು. ಇಲ್ಲದಿದ್ದರೆ ಇನ್ನಷ್ಟು ದೂರ ಜಾವೆಲಿನ್ ಎಸೆಯಬಹುದಾಗಿತ್ತು. ನೋವಿನ ಸ್ಥಿತಿಯ ಬಗ್ಗೆ ಈಗಲೇ ಹೇಳುವುದು ಕಷ್ಟ. ನಾಳೆ ಬೆಳಗ್ಗೆ ಗೊತ್ತಾಗಬಹುದು. ಆದರೂ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಯಾವುದೇ ಅಡಚಣೆ ಇಲ್ಲ ಎಂದಿದ್ದರು. ಅದರೆ, ಅದು ಸುಳ್ಳಾಗಿದ್ದು ನೀರಜ್ ಅವರು ಗಾಯದಿಂದ ಇನ್ನೂ ಸುಧಾರಿಸಿಕೊಂಡಿಲ್ಲ.
ಇದನ್ನೂ ಓದಿ | World Athletics Championships | ಒಂದೇ ತಿಂಗಳಲ್ಲಿ ಎರಡು ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ