ಹ್ಯಾಂಗ್ಝೌ : ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ (Asian Games) ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಅವರು ಸತತ ಎರಡನೇ ಬಾರಿ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಬಾಚಿಕೊಂಂಡಂತಾಗಿದೆ. ಅವರು 2018ರ ಆವೃತ್ತಿಯಲ್ಲೂ ಚಿನ್ನದ ಪದಕ ಗೆದ್ದಿದ್ದರು. ಇತ್ತೀಚಿಗೆ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದಿರುವ ಬಳಿಕ ಅವರು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗಳಿಸಿದ ಎರಡನೇ ಚಿನ್ನದ ಪದಕವಾಗಿದೆ.
ಬುಧವಾರ ಸಂಜೆ ನಡೆದ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಅವರ 88. 88 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಪದಕ ಗೆದ್ದುಕೊಂಡರು. ಭಾರತದವರೇ ಆದ ಕಿಶೋರ್ ಜೆನ್ನಾ ಅವರು 87.54 ಮೀಟರ್ ದೂರಕ್ಕೆ ಎಸೆದು ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತದ ಚಿನ್ನದ ಪದಕದ ಒಟ್ಟು ಗಳಿಕೆ 17ಕ್ಕೆ ಏರಿಕೆಯಾಗಿದೆ. ಬೆಳ್ಳಿಯ ಪದಕ 30 ಆಗಿದೆ.
ಭಾರತದ ಪದಕ ಪಟ್ಟಿ
ಚಿನ್ನ: 17
ಬೆಳ್ಳಿ: 30
ಕಂಚು: 32
𝑲𝒂𝒓 𝑯𝒂𝒓 𝑴𝒂𝒊𝒅𝒂𝒏 𝑭𝒂𝒕𝒆𝒉💪🏻#GOLD🥇 FOR THE G.O.A.T@Neeraj_chopra1 conquers #AsianGames2022 for the second time with a season best throw of 88.88!
— SAI Media (@Media_SAI) October 4, 2023
Take a bow King👑! You have done it💪🏻
Congratulations on your #HallaBol performance 🥳#Cheer4India#JeetegaBharat… pic.twitter.com/m7NhwV8o6X
ಬುಧವಾರ ಏಷ್ಯನ್ ಗೇಮ್ಸ್ನ 11ನೇ ದಿನ ಭಾರತ ಚಿನ್ನ ಮತ್ತು ಕಂಚಿನ ಪದಕ ಗೆಲ್ಲುವ ಮೂಲಕ ಪದಕದ ಖಾತೆ ತೆರೆದಿತ್ತು. ಮಿಕ್ಸೆಡ್ ಕಾಂಪೌಂಡ್ ಆರ್ಚರಿಯಲ್ಲಿ ಓಜಾಸ್ ಮತ್ತು ಜ್ಯೋತಿ ವೆನ್ನಮ್ ಚಿನ್ನಕ್ಕೆ ಗುರಿ ಇರಿಸಿದರೆ, ರಾಮ್ ಬಾಬು ಮತ್ತು ಮಂಜು ರಾಣಿ 35ಕೀ.ಮೀ ಓಟದ ನಡಿಗೆ(ರೇಸ್ ವಾಕ್) ಮಿಶ್ರ ತಂಡದಲ್ಲಿ ಕಂಚು ಗೆದ್ದರು. ಈ ಮೂಲಕ ಭಾರತದ ಪದಕಗಳ ಸಂಖ್ಯೆ 71ಕ್ಕೇರಿದೆ. ಇದು ಏಷ್ಯಾಡ್ನಲ್ಲಿ ಭಾರತ ಗೆದ್ದ ದಾಖಲೆಯ ಪದಕವಾಗಿದೆ.
ಆರ್ಚರಿ ರೋಚಕ ಫೈನಲ್ ಪಂದ್ಯದಲ್ಲಿ ಓಜಾಸ್ ಮತ್ತು ಜ್ಯೋತಿ ವೆನ್ನಮ್ ಜೋಡಿ ಕೇವಲ ಒಂದು ಅಂಕದ ಮುನ್ನಡೆಯಿಂದ ಚಿನ್ನ ತಮ್ಮದಾಗಿಸಿಕೊಂಡರು. ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾವನ್ನು 159-158 ಅಂಕಗಳಿಂದ ಸೋಲಿಸಿದ ಭಾರತ ಐತಿಹಾಸಿಕ ಚಿನ್ನ ಗೆದ್ದಿತು.
.@Kishore78473748 creates a stir with his shiny #Silver🥈at #AsianGames2022!!
— SAI Media (@Media_SAI) October 4, 2023
Jena gave his personal best performance with a throw of 87.54 to steal the show!
Many congratulations Jena💪🏻 We are super proud 🤗#Cheer4India#HallaBol#JeetegaBharat#BharatAtAG22 pic.twitter.com/jpnMF43FXw
ಇದನ್ನೂ ಓದಿ : Asian Games 2023: ಏಷ್ಯನ್ ಗೇಮ್ಸ್ನಲ್ಲಿ ದಾಖಲೆಯ ಪದಕ ಗೆದ್ದ ಭಾರತ; ಆರ್ಚರಿಯಲ್ಲಿ ಚಿನ್ನ
ಬುಧವಾರ ಬೆಳಗ್ಗೆ ನಡೆದ ಈ ಸ್ಫರ್ದೆಯಲ್ಲಿ ಭಾರತೀಯ ತಂಡ 5:51:14 ಸೆಂಕೆಡ್ನಲ್ಲಿ ಗುರು ತಲುಪಿ ಮೂರನೇ ಸ್ಥಾನ ಪಡೆದ ಕಂಚಿಗೆ ತೃಪ್ತಿಪಟ್ಟಿತ್ತು. ಇಂದು ನಡೆಯುವ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಮಹಿಳಾ ಬಾಕ್ಸಿಂಗ್ ಫೈನಲ್ಸ್ನಲ್ಲಿ ಲವ್ಲಿನಾ ಬೋರ್ಗಹೈನ್(Lovlina Borgohain) ಕಣಕ್ಕಿಳಿಯಲಿದ್ದಾರೆ. ಇವರ ಮೇಲೆ ಚಿನ್ನದ ನಿರೀಕ್ಷೆ ಇರಿಸಲಾಗಿದೆ. ಆರ್ಚರಿಯಲ್ಲಿ ಕೆಲ ಸ್ಪರ್ಧಿಗಳು ಫೈನಲ್ ತಲುಪಿದ್ದು ಪದಕ ಖಾತ್ರಿ ಪಡಿಸಿದ್ದಾರೆ.
ದಾಖಲೆ ಬರೆದ ಭಾರತ‘
ಭಾರತದ ಪದಕ ಗಳಿಕೆ 71ಕ್ಕೇರುವ ಮೂಲಕ ದಾಖಲೆಯೊಂದನ್ನು ಬರೆದಿದೆ. ಭಾರತ 2010ರಲ್ಲಿ 65 ಪದಕ 2018ರಲ್ಲಿ 70 ಪದಕ ಗೆದ್ದಿತ್ತು. ಈ ಬಾರಿ 71 ಪದಕ ಗೆಲ್ಲುವ ಮೂಲಕ ಹಳೆಯ ದಾಖಲೆಯನ್ನು ಮುರಿದಿದೆ. ಸದ್ಯ 16 ಚಿನ್ನ, 26 ಬೆಳ್ಳಿ ಹಾಗೂ 29 ಕಂಚು ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರಿದಿದೆ.
ಬುಧವಾರದ ಫಲಿತಾಂಶಗಳು
ಆರ್ಚರಿ: ಭಾರತದ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಪ್ರವೀಣ್ ಓಜಾಸ್ ಡಿಯೋಟಾಲೆ ಕಾಂಪೌಂಡ್ ಆರ್ಚರಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ.
ಕುಸ್ತಿ: ಪುರುಷರ ಗ್ರೀಕೋ-ರೋಮನ್ 87 ಕೆಜಿ ವಿಭಾಗದಲ್ಲಿ ಸುನಿಲ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ.
ಬಾಕ್ಸಿಂಗ್: ಮಹಿಳೆಯರ 57 ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ಸೋತು ಕಂಚಿನ ಪದಕ ಗೆದ್ದ ಪರ್ವೀನ್
ಮಹಿಳೆಯರ 75 ಕೆಜಿ ವಿಭಾಗದ ಫೈನಲ್ನಲ್ಲಿ ಚೀನಾದ ಲಿ ಕಿಯಾನ್ ವಿರುದ್ಧ ಸೋತ ಲೊವ್ಲಿನಾ ಬೊರ್ಗೊಹೈನ್ ಬೆಳ್ಳಿ ಪದಕ ಗೆದ್ದರು.
ಅಥ್ಲೆಟಿಕ್ಸ್: 35 ಕಿ.ಮೀ ಓಟದ ಮಿಶ್ರ ತಂಡ ಫೈನಲ್ನಲ್ಲಿ ಭಾರತಕ್ಕೆ ಕಂಚಿನ ಪದಕ
ಮಹಿಳೆಯರ 800 ಮೀಟರ್ ಫೈನಲ್ನಲ್ಲಿ ಹರ್ಮಿಲನ್ ಬೈನ್ಸ್ ಬೆಳ್ಳಿ ಗೆದಿದ್ದಾರೆ.
ಪುರುಷರ 5000 ಮೀಟರ್ ಫೈನಲ್ನಲ್ಲಿ ಅವಿನಾಶ್ ಸಾಬ್ಲೆ ಬೆಳ್ಳಿ ಗೆದ್ದರು
ಸ್ಕ್ವಾಷ್: ಮಿಶ್ರ ಡಬಲ್ಸ್ ಸೆಮಿಫೈನಲ್ನಲ್ಲಿ ಭಾರತದ ಅನಾಹತ್ ಸಿಂಗ್ ಮತ್ತು ಅಭಯ್ ಸಿಂಗ್ ಜೋಡಿಗೆ ಮಲೇಷ್ಯಾದ ಐಫಾ ಬಿಂಟಿ ಮತ್ತು ಮೊಹಮ್ಮದ್ ಸಯಾಫಿಕ್ ವಿರುದ್ಧ ಸೋತು ಕಂಚಿನ ಪದಕ
ಮಿಶ್ರ ಡಬಲ್ಸ್ ಸೆಮಿಫೈನಲ್ನಲ್ಲಿ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಸಂಧು ಹಾಂಕಾಂಗ್ನ ಕಾ ಯಿ ಲೀ ಮತ್ತು ಚಿ ಹಿಮ್ ವಾಂಗ್ ಅವರನ್ನು ಸೋಲಿಸಿ ಫೈನಲ್ಗೆ ಪ್ರವೇಶಿಸಿದ್ದಾರೆ.