ಜ್ಯೂರಿಚ್ : ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ದೇಶದ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ನೂತನ ಇತಿಹಾಸ ಬರೆದಿದ್ದಾರೆ. ಗುರುವಾರ ಸ್ವಿಜರ್ಲೆಂಡ್‌ನ ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್‌ಲೀಗ್ ಫೈನಲ್‌ನಲ್ಲಿ ಅವರು ಬಂಗಾರದ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.
೨೪ ವರ್ಷದ ಭಾರತದ ಅಥ್ಲೀಟ್ ಗರಿಷ್ಠ ೮೮.೪೪ ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಬಂಗಾರದ ಪದಕ ಗೆದ್ದು ಹೊಸ ಇತಿಹಾಸ ಬರೆದರು. ಇತ್ತೀಚೆಗಷ್ಟೇ ಅಮೆರಿಕದಲ್ಲಿ ನಡೆದ ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ನೀರಜ್ ಅವರು ಗುರುವಾರ ನಡೆದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮತ್ತೊಮ್ಮೆ ಭಾರತದ ಕೀರ್ತಿ ಪತಾಕೆಯನ್ನು ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಎತ್ತಿ ಹಿಡಿದರು.
ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಂಗಾರದ ಪದಕ ಗೆದ್ದ ಬಳಿಕ ನಿರಂತರವಾಗಿ ಹಲವು ಟೂರ್ನಿಗಳ ಪ್ರಶಸ್ತಿ ವೇದಿಕೆಯೇರಿದ್ದ ನೀರಜ್ ಇದೀಗ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ. ಇದರೊಂದಿಗೆ ಭಾರತದ ಸೂಪರ್‌ಸ್ಟಾರ್ ಜಾವೆಲಿನ್ ಎಸೆತಗಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದುಕೊಂಡಂತಾಗಿದೆ.
ಒಲಿಂಪಿಕ್ಸ್- ಚಿನ್ನ
ವರ್ಲ್ಡ್ ಚಾಂಪಿಯನ್‌ಷಿಪ್- ಬೆಳ್ಳಿ
ಕಾಮನ್ವೆಲ್ತ್ ಗೇಮ್ಸ್(೨೦೧೮)- ಚಿನ್ನ
ಏಷ್ಯನ್ ಗೇಮ್ಸ್- ಚಿನ್ನ
ವರ್ಲ್ಡ್ ಜೂನಿಯರ್ ಚಾಂಪಿಯನ್‌ಷಿಪ್- ಚಿನ್ನ
ಡೈಮಂಡ್ ಲೀಗ್- ಚಿನ್ನ
ಇದನ್ನೂ ಓದಿ | Neeraj Chopra | ನೀರಜ್ ಚೋಪ್ರಾ ಬಂಗಾರದ ಪದಕ ಗೆದ್ದ ಜಾವೆಲಿನ್ ವಶಕ್ಕೆ ಪಡೆದುಕೊಂಡ ಬಿಸಿಸಿಐ!