Site icon Vistara News

Neeraj Chopra : ವ್ಯರ್ಥವಾಯಿತು ನೀರಜ್ ಚೋಪ್ರಾ ಅವರ ಬೃಹತ್​ ಎಸೆತ; ಆದ್ರೂ ಸಿಕ್ಕಿತು ಚಿನ್ನ

Neeraj Chopra

ಹ್ಯಾಂಗ್ಝೌ: ಒಬ್ಬ ಕ್ರೀಡಾಪಟುವನ್ನು ಸ್ಪರ್ಧೆಯಲ್ಲಿ ಪಾಲ್ಗೊಂಡ ಬಳಿಕ ಆತನ ಸಾಧನೆಯನ್ನು ಸರಿಯಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದುಕೊಳ್ಳಿ. ಅದು ಆ ಕ್ರೀಡಾಪಟು ಎದುರಿಸುವ ಅತ್ಯಂತ ಅಸಹನೀಯ ಸಂಗತಿಯಾಗಿರುತ್ತದೆ. ಅವರು ಮಾಡಿರುವ ದೊಡ್ಡ ಸಾಹಸವು ವ್ಯರ್ಥಗೊಳ್ಳುವುದಂತೂ ಗ್ಯಾರಂಟಿ. ಏಷ್ಯನ್ ಗೇಮ್ಸ್​ನಲ್ಲಿ ಪಾಲ್ಗೊಂಡಿದ್ದ ಭಾರತದ ಸ್ಟಾರ್​ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಅವರಿಗೂ ಇದೇ ಪರಿಸ್ಥಿತಿ ಎದುರಾಗಿತ್ತು. ಅದಕ್ಕೆ ಕಾರಣ ತಾಂತ್ರಿಕ ಸಮಸ್ಯೆ.

ಫೈನಲ್ ಸ್ಪರ್ಧೆಯಲ್ಲಿ ಅವರು ತಮ್ಮ ಮೊದಲ ಅವಕಾಶದಲ್ಲಿ 85 ಮೀಟರ್ ಗಿಂತಲೂ ದೂರ ಆರಾಮವಾಗಿ ಎಸೆದಿದ್ದರು. ಆದರೆ ಅಧಿಕಾರಿಗಳು, ಪದೇ ಪದೇ ಪ್ರಯತ್ನಿಸಿದರೂ ಅವರ ಮೊದಲ ಪ್ರಯತ್ನವನ್ನು ದಾಖಲಿಸಲು ಸಾಧ್ಯವಾಗಲಿಲ್ಲ. ತಾಂತ್ರಿಕ ದೋಷ ಉಂಟಾದ ಕಾರಣ ಎಸೆತವನ್ನು ಸರಿಯಾಗಿ ಅಳೆಯಲು ಸಾಧ್ಯವಾಗಲಿಲ್ಲ. ಈ ವೇಳೆ ಆಯೋಜಕರಲ್ಲಿ ಗೊಂದಲ ಉಂಟಾಯಿತು. ಇದರ ಪರಿಣಾಮವಾಗಿ, ನೀರಜ್ ಅವರಿಗೆ ಮತ್ತೊಂದು ಬಾರಿ ಎಸೆಯುವಂತೆ ಸೂಚಿಸಲಾಯಿತು. ಈ ವೇಳೆ ಅವರಿಗೆ ಕೇವಲ 82.38 ಮೀಟರ್ ದೂರ ಎಸೆಯಲು ಮಾತ್ರ ಸಾಧ್ಯವಾಯಿತು.

ನೀರಜ್ ಅವರಲ್ಲದೆ, ಬೆಳ್ಳಿ ಗೆದ್ದ ಭಾರತದ ಸ್ಪರ್ಧಿ ಕಿಶೋರ್ ಅವರಿಗೂ ಇದೇ ಪರಿಸ್ಥಿತಿ ಎದುರಾಯಿತು ಕಿಶೋರ್ ಜೆನಾ ಅವರ ಎರಡನೇ ಎಸೆತವನ್ನು ಪೌಲ್​ ಎಂದು ತಪ್ಪಾಗಿ ಪರಿಗಣಿಸಲಾಯಿತು. ತಕ್ಷಣದ ಅವರು ಪ್ರತಿರೋಧ ತೋರಿದರು. ಬಳಿಕ ಎಸೆತವನ್ನು ದಾಖಲಿಸಲಾಯಿತು.

ಸಮಸ್ಯೆ ನಡುವೆಯೂ ನೀರಜ್ ಚೋಪ್ರಾ ಅವರಿಗೆ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಮತ್ತು ದೇಶಕ್ಕೆ ಮತ್ತೊಂದು ಚಿನ್ನದ ಪದಕವನ್ನು ತರಲು ಅದು ಅಡ್ಡಿಯಾಗಲಿಲ್ಲ. ಅವರು 88.88 ಮೀಟರ್ ದೂರ ಜಿಗಿದು ಪ್ರಥಮ ಸ್ಥಾನ ಪಡೆದರೆ, ಕಿಶೋರ್ ಜೆನಾ 87.54 ಮೀಟರ್ ದೂರ ಜಿಗಿದು ಬೆಳ್ಳಿ ಪದಕ ಗೆದ್ದರು. ಕುತೂಹಲಕಾರಿಯಾಗಿ, ಇದು ಜೆನಾ ಅವರ ವೈಯಕ್ತಿಕ ಅತ್ಯುತ್ತಮ ಸಾಧನೆ.

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ ಹಲವಾರು ಗೊಂದಲಗಳಿಗೆ ಕಾರಣವಾಗಿದೆ. ಮಹಿಳೆಯರ 110 ಮೀಟರ್ ಹರ್ಡಲ್ಸ್​ನಲ್ಲಿ ಜ್ಯೋತಿ ಯರ್ರಾಜಿ ಅವರನ್ನು ಆರಂಭದಲ್ಲಿ ಅನರ್ಹಗೊಳಿಸಲಾಗಿತ್ತು. ಆದರೆ ನಂತರ ಅವರ ಕಂಚಿನ ಪದಕವನ್ನು ಬೆಳ್ಳಿಗೆ ಅಪ್​ಡೇಟ್​ಮಾಡಲಾಗಿತ್ತು.

ಮಹಿಳೆಯರ 800 ಮೀಟರ್ ಓಟದಲ್ಲಿ ಭಾರತದ ಹರ್ಮಿಲನ್ ಬೈನ್ಸ್ ಬೆಳ್ಳಿ ಪದಕ ಗೆದ್ದರು, ಇದು ಏಷ್ಯನ್ ಗೇಮ್ಸ್ 2023 ರಲ್ಲಿ ಅವರ ಎರಡನೇ ಪದಕವಾಗಿದೆ. ಪಂಜಾಬ್​ನ 25 ವರ್ಷದ ಅಥ್ಲೀಟ್​ 2:03.75 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದರು. ಶ್ರೀಲಂಕಾದ ತರುಷಿ ದಿಸ್ಸಾನಾಯಕ 2:03.20 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. ಚೀನಾದ ಚುನ್ಯು ವಾಂಗ್ 2.03:90 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು.

ಈ ಹಿಂದೆ ಬೈನ್ಸ್ ಮಹಿಳೆಯರ 1500 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 800 ಮೀಟರ್ ಓಟದಲ್ಲಿ ಭಾರತದ ಮತ್ತೊಬ್ಬ ಓಟಗಾರ್ತಿ ಚಂದಾ 2:05.69 ಸಮಯದೊಂದಿಗೆ ಏಳನೇ ಸ್ಥಾನ ಪಡೆದುಕೊಂಡಿದ್ದಾರೆ.

Exit mobile version