ದೋಹಾ : ಫಿಫಾ ವಿಶ್ವ ಕಪ್‌ನಲ್ಲಿ (FIFA World Cup) ಭಾನುವಾರ ಎ ಗುಂಪಿನಲ್ಲಿರುವ ಎರಡು ತಂಡಗಳು ನಾಕೌಟ್ ಸುತ್ತಿಗೆ ಪ್ರವೇಶ ಪಡೆದುಕೊಂಡಿವೆ. ನೆದರ್ಲೆಂಡ್ಸ್ ಹಾಗೂ ಸೆನೆಗಲ್ ೧೬ನೇ ಸುತ್ತಿಗೆ ಪ್ರವೇಶ ಪಡೆದುಕೊಂಡ ತಂಡಗಳು. ನೆದರ್ಲೆಂಡ್ಸ್ ತಂಡ ಗುಂಪು ಹಂತದ ಮೂರನೇ ಪಂದ್ಯದಲ್ಲಿ ಕತಾರ್ ವಿರುದ್ದ ಜಯ ಸಾಧಿಸಿದ್ದರೆ, ಸೆನೆಗಲ್ ತಂಡ ಈಕ್ವೆಡಾರ್ ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.
ಅಲ್ ಬಯಾತ್ ಸ್ಟೇಡಿಯಮ್‌ನಲ್ಲಿ ನಡೆದ ಹಣಾಹಣಿಯಲ್ಲಿ ನೆದರ್ಲೆಂಡ್ಸ್ ತಂಡ ಅತಿಥೇಯ ಕತಾರ್ ವಿರುದ್ಧ ೨-೦ ಗೋಲ್‌ಗಳ ಸುಲಭ ಜಯ ದಾಖಲಿಸಿತು. ಕಾಡಿ ಗಾಪ್ಕೊ (೨೬ನೇ ನಿಮಿಷ) ಹಾಗೂ ಫ್ರೆಂಕಿ ಡಿ ಜಾಂಗ್ (೪೯ನೇ ನಿಮಿಷ) ಎರಡು ಗೋಲ್‌ಗಳನ್ನು ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು. ನೆದರ್ಲೆಂಡ್ಸ್ ತಂಡ ಪಂದ್ಯದುದ್ದಕ್ಕೂ ಪಾರಮ್ಯ ಸಾಧಿಸಿ ಜಯ ಕಂಡಿತು.
ಖಲಿಫಾ ಇಂಟರ್‌ನ್ಯಾಷನಲ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಸೆನೆಗಲ್ ಹಾಗೂ ಈಕ್ವೆಡಾರ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಅಂತಿಮವಾಗಿ ೨-೧ ಗೋಲ್‌ಗಳಿಂದ ಸೆನೆಗಲ್ ಜಯ ಸಾಧಿಸಿತು. ಈಕ್ವೆಡಾರ್ ಪರ ಮೊಯ್ಸೆ ಕಾಯ್ಸೆಡೊ (೬೭ನೇ ನಿಮಿಷ) ಗೋಲ್ ಬಾರಿಸಿದರೆ, ಸೆನೆಗಲ್ ಪರ ಇಸ್ಮಾಯಿಲಾ ಸರ್ (೪೪ನೇ ನಿಮಿಷ) ಹಾಗೂ ಕಲಿದೊ ಕೊಲಿಬಲಿ (೭೦ನೇ ನಿಮಿಷ) ಗೋಲ್ ಬಾರಿಸಿದರು.
ಇದನ್ನೂ ಓದಿ | Video| ಫಿಫಾ ವಿಶ್ವ ಕಪ್ ಪಂದ್ಯದ ವೇಳೆ ಭಾರತದ ತ್ರಿವರ್ಣ ಧ್ವಜ ಹೊದ್ದು ತನ್ನ ದೇಶವನ್ನು ಬೆಂಬಲಿಸಿದ ಅರ್ಜೆಂಟೀನಾ ಯುವತಿ; ಕಾರಣ ಇಲ್ಲಿದೆ