Site icon Vistara News

ICC World Cup 2023 : ದ. ಆಫ್ರಿಕಾ ತಂಡವನ್ನು ಬಗ್ಗು ಬಡಿದು ಹೊಸ ದಾಖಲೆ ಬರೆದ ನೆದರ್ಲ್ಯಾಂಡ್ಸ್​​

Netherlands cricket team

ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮಂಗಳವಾರ (ಅಕ್ಟೋಬರ್ 17) ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ 15ನೇ ಪಂದ್ಯದಲ್ಲಿ (ICC World Cup 2023) ನೆದರ್ಲೆಂಡ್ಸ್ ತಂಡ ದಕ್ಷಿಣ ಆಫ್ರಿಕಾವನ್ನು 38 ರನ್ ಗಳಿಂದ ಮಣಿಸಿದೆ. ಮಳೆಯಿಂದ ಮೊಟಕುಗೊಂಡ 46 ಓವರ್ ಗಳ ಪಂದ್ಯದಲ್ಲಿ 246 ರನ್ ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾದ ದಕ್ಷಿಣ ಆಫ್ರಿಕಾ 42.5 ಓವರ್ ಗಳಲ್ಲಿ 207 ರನ್ ಗಳಿಗೆ ಆಲೌಟ್ ಆಯಿತು.

ಅರ್ಹತಾ ಸುತ್ತಿನ ಮೂಲಕ ವಿಶ್ವ ಕಪ್​ಗೆ ಪ್ರವೇಶ ಪಡೆದಿದ್ದ ನೆದರ್ಲ್ಯಾಂಡ್ಸ್​ ತಂಡಕ್ಕೆ ಇದು 16 ವರ್ಷಗಳ ಬಳಿಕ ದೊರೆತ ಗೆಲುವು ಎಂಬುದು ವಿಶೇಷ. ಈ ಹಿಂದೆ 2007ರ ವಿಶ್ವ ಕಪ್​ನಲ್ಲಿ ನೆದರ್ಲ್ಯಾಂಡ್ಸ್ ತಂಡ ಸ್ಕಾಟ್ಲೆಂಡ್​​ ತಂಡದ ವಿರುದ್ಧ ಗೆಲುವು ಸಾಧಿಸಿತ್ತು. ಅದಕ್ಕಿಂತ ಮೊದಲು 2003 ವಿಶ್ವ ಕಪ್​ನಲ್ಲಿ ಡಚ್ಚರ ತಂಡ ನಮೀಬಿಯಾ ವಿರುದ್ಧ ಏಕೈಕ ಗೆಲವು ಸಾಧಿಸಿತ್ತು. ಅಂದ ಹಾಗೆ ಟೆಸ್ಟ್​ ಆಡುವ ತಂಡವೊಂದರ ವಿರುದ್ಧ ವಿಶ್ವ ಕಪ್​ನಲ್ಲಿ ಗಳಿಸಿದ ಮೊದಲ ಗೆಲುವು ದಕ್ಷಿಣ ಆಫ್ರಿಕಾದ ವಿರುದ್ಧವಾಗಿದೆ.

ಪಂದ್ಯದಲ್ಲಿ ಏನಾಯಿತು?

ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಏಕ ದಿನ ವಿಶ್ವ ಕಪ್​ನಲ್ಲಿ (ICC World Cup 2023) ಮತ್ತೊಂದು ಅನಿರೀಕ್ಷಿತ ಫಲಿತಾಂಶ ಮೂಡಿ ಬಂದಿದೆ. ಮೊದಲೆರಡು ಪಂದ್ಯಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ದಕ್ಷಿಣ ಆಫ್ರಿಕಾ ಬಳಗ, ಅರ್ಹತಾ ಸುತ್ತಿನ ಮೂಲಕ ಪ್ರವೇಶ ಪಡೆದಿರುವ ನೆದರ್ಲ್ಯಾಂಡ್ಸ್​ ತಂಡದ ವಿರುದ್ಧ 38 ರನ್​ಗಳಿಂದ ಹೀನಾಯವಾಗಿ ಸೋಲು ಕಂಡಿದೆ. ಈ ಮೂಲಕ ಹಾಲಿ ಆವೃತ್ತಿಯ ತನ್ನ ಮೊದಲ ವಿಜಯವನ್ನು ದಾಖಲಿಸಿದೆ ಡಚ್ಚರ ಪಡೆ. ಇದು ವಿಶ್ವ ಕಪ್​ 202ರ ಎರಡನೇ ಆಘಾತಕಾರಿ ಫಲಿತಾಂಶವಾಗಿದೆ. ನವದೆಹಲಿಯಲ್ಲಿ ನಡೆದಿದ್ದ ಹಾಲಿ ಚಾಂಪಿಯನ್​ ಇಂಗ್ಲೆಂಡ್ ತಂಡವನ್ನು ಅಫಘಾನಿಸ್ತಾನ ತಂಡ 69 ರನ್​ಗಳಿಂದ ಸೋಲಿಸಿ ಸಂಭ್ರಮಿಸಿತ್ತು.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್​ ಸಂಸ್ಥೆಯ ಸ್ಟೇಡಿಯಮ್​ನಲ್ಲಿ ಆಯೋಜನೆಗೊಂಡಿದ್ದ ಪಂದ್ಯಕ್ಕೆ ಆರಂಭದಲ್ಲಿಯೇ ಮಳೆಯ ಅಡಚಣೆ ಉಂಟಾಯಿತು. ಹೀಗಾಗಿ 43 ಇನಿಂಗ್ಸ್​ಗಳ ಪಂದ್ಯವನ್ನು ಆಯೋಜಿಸಲಾಯಿತು. ಅಂತೆಯೇ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್​ ತಂಡ ನಿಗದಿತ ಓವರ್​ಗಳಲ್ಲಿ ವಿಕೆಟ್​ ನಷ್ಟಕ್ಕೆ 245 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಹರಿಣಗಳ ಬಳಗ 42.5 ಓವರ್​ಗಳಲ್ಲಿ 207 ರನ್​ ಬಾರಿಸಿ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು.

ಈ ಸುದ್ದಿಗಳನ್ನೂ ಓದಿ:
Rohit Sharma : ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಬೌಲಿಂಗ್ ಮಾಡ್ತಾರಾ ರೋಹಿತ್​?
Ind vs Pak : ಸೋತರೂ ಬಿಡದ ಹುಂಬತನ; ಭಾರತ ವಿರುದ್ಧವೇ ದೂರು ನೀಡಿದ ಪಾಕಿಸ್ತಾನ
ICC World Cup 2023 : ನಿಮ್ಮಪ್ಪ ನಿನಗೆ ಕಲಿಸಿಲ್ವಾ? ಆಸೀಸ್​ ಆಟಗಾರನಿಗೆ ಗವಾಸ್ಕರ್ ಪ್ರಶ್ನೆ

ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ ಪರಿಪೂರ್ಣ ಕ್ರಿಕೆಟ್ ಆಡಿತು. ಇನಿಂಗ್ಸ್ ಆರಂಭದಲ್ಲಿ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದರೂ ಕೊನೇ 9 ಓವರ್​ಗಳಲ್ಲಿ 109 ರನ್​ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಸ್ಪರ್ಧಾತ್ಮಕ ಗುರಿಯನ್ನು ಒಡ್ಡಿತು. ಆ ಮೊತ್ತವನ್ನು ಬಳಿಕ ಬೌಲಿಂಗ್​ನಲ್ಲಿಯೂ ಸ್ಮರಣೀಯ ಪ್ರದರ್ಶನ ನೀಡಿ ಗೆಲುವು ತನ್ನದಾಗಿಸಿಕೊಂಡಿತು.

ಅತ್ತ ದಕ್ಷಿಣ ಆಫ್ರಿಕಾ ತಂಡ ಮೊದಲೆರಡು ಪಂದ್ಯಗಳಲ್ಲಿ ಅದ್ಧೂರಿ ಪ್ರದರ್ಶನ ನೀಡಿತ್ತು. ಶ್ರೀಲಂಕಾ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ 102 ರನ್​ಗಳ ವಿಜಯ ದಾಖಲಿಸಿದ್ದರೆ, ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧವಂತೂ 132 ರನ್​ಗಳ ಬೃಹತ್​ ವಿಜಯವನ್ನು ತನ್ನದಾಗಿಸಿಕೊಂಡಿತ್ತು. ಆದರೀಗ ಏಕಾಏಕಿ ಕುಸಿತ ಕಂಡು ದುರ್ಬಲ ತಂಡವೊಂದರ ವಿರುದ್ಧ ಸೋಲು ಕಂಡಿತ್ತು.

Exit mobile version