ಮುಂಬೈ: ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಟಾಟಾ ಐಪಿಎಲ್ 2023ರ ಕ್ವಾಲಿಫೈಯರ್-1 ಪಂದ್ಯವನ್ನು ಜಿಯೋಸಿನಿಮಾದಲ್ಲಿ ದಾಖಲೆಯ 2.5 ಕೋಟಿ ಜನರು ವೀಕ್ಷಿಸಿದ್ದಾರೆ. ಈ ಮೂಲಕ ಜಿಯೋಸಿನಿಮಾ ಹೊಸ ಮೈಲುಗಲ್ಲು ಸೃಷ್ಟಿಸುವುದನ್ನು ಮುಂದುವರಿಸಿದೆ. ಜಿಯೋಸಿನಿಮಾ ಹಾಲಿ ಐಪಿಎಲ್ ಆವೃತ್ತಿಯಲ್ಲಿ ಮೂರನೇ ಬಾರಿಗೆ ತನ್ನದೇ ಆದ ಏಕಕಾಲಿಕ (ಕನ್ಕರೆನ್ಸಿ) ವೀಕ್ಷಕರ ದಾಖಲೆಯನ್ನು ಮುರಿದಿದೆ. 2019ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದ ವೇಳೆ ನಿರ್ಮಾಣವಾಗಿದ್ದ ವಿಶ್ವದಾಖಲೆಯನ್ನೂ ಸರಿಗಟ್ಟಿದೆ.
ಏಪ್ರಿಲ್ 17ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ಕಿಂಗ್ಸ್ ನಡುವಿನ ಪಂದ್ಯದ ವೇಳೆ ಎಂಎಸ್ ಧೋನಿ ಅವರ ಆಟವನ್ನು ವೀಕ್ಷಿಸಲು 2.4 ಕೋಟಿ ವೀಕ್ಷಕರು ಜಿಯೋಸಿನಿಮಾದಲ್ಲಿ ಒಟ್ಟಾಗಿ ಸೇರಿದ್ದು ಹಿಂದಿನ ದಾಖಲೆ ಎನಿಸಿತ್ತು. ಅದಕ್ಕೆ ಮುನ್ನ ಏಪ್ರಿಲ್ 12ರಂದು ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಮಾಡಿದಾಗ ಗರಿಷ್ಠ 2.2 ಕೋಟಿ ವೀಕ್ಷಕರು ಪಂದ್ಯ ವೀಕ್ಷಿಸಿದ್ದರು.
ಟಾಟಾ ಐಪಿಎಲ್ 2023ರ ಪಂದ್ಯಗಳನ್ನು ವೀಕ್ಷಿಸಲು ಜಿಯೋಸಿನಿಮಾವೇ ಕ್ರಿಕೆಟ್ ಅಭಿಮಾನಿಗಳ ಪ್ರಮುಖ ಆದ್ಯತೆ ಆಗಿದೆ ಎಂಬುದಕ್ಕೆ ಈ ದಾಖಲೆಗಳು ಸಾಕ್ಷಿಯಾಗಿವೆ. ರೋಚಕ ಪಂದ್ಯಗಳನ್ನು ವೀಕ್ಷಿಸುವ ವೇಳೆ ಜಿಯೋಸಿನಿಮಾದಲ್ಲಿ ಅಭಿಮಾನಿ ಕೇಂದ್ರಿತವಾದ ಹಲವಾರು ಕೊಡುಗೆಗಳನ್ನು ನೀಡಲಾಗುತ್ತಿದೆ. ಉದಾಹರಣೆಗೆ ಎಲ್ಲಾ ನೆಟ್ವರ್ಕ್ ಚಂದಾದಾರರಿಗೆ ಉಚಿತ ಸ್ಟ್ರೀಮಿಂಗ್ ನೀಡಲಾಗಿದೆ. ಅದರಲ್ಲೂ 4ಕೆ ಸ್ಟ್ರೀಮಿಂಗ್ ವಿಶೇಷವೆನಿಸಿದೆ. 12 ಭಾಷೆಗಳಲ್ಲಿ ವೀಕ್ಷಕ ವಿವರಣೆ ನೀಡಲಾಗುತ್ತಿದೆ. ಜೀತೋ ಧನ್ ಧನಾ ಧನ್ ಸ್ಪರ್ಧೆಯ ಮೂಲಕ ಪ್ರತಿ ಪಂದ್ಯದ ವೀಕ್ಷಣೆಯ ವೇಳೆ ಕಾರು ಗೆಲ್ಲುವ ಜತೆ ಅತ್ಯಾಕರ್ಷಕ ಬಹುಮಾನಗಳನ್ನೂ ವಿತರಿಸಲಾಗುತ್ತಿದೆ.
ಜಿಯೋಸಿನಿಮಾ ಡಿಜಿಟಲ್ ಕ್ರೀಡಾ ವೀಕ್ಷಣೆಯ ಜಗತ್ತಿನಲ್ಲಿ ಜಾಗತಿಕ ಮಾನದಂಡಗಳನ್ನು ನಿರ್ಮಿಸುವುದನ್ನು ಮುಂದುವರಿಸಿದೆ. ಟಾಟಾ ಐಪಿಎಲ್ 2023ರ ಮೊದಲ ಐದು ವಾರಗಳಲ್ಲಿ 1,300 ಕೋಟಿಗೂ ಅಧಿಕ ವಿಡಿಯೋ ವೀಕ್ಷಣೆಯ ದಾಖಲೆ ನಿರ್ಮಿಸಲಾಗಿತ್ತು. ವೀಕ್ಷಕರು ಜಿಯೋಸಿನಿಮಾದ ಅಭಿಮಾನಿ-ಕೇಂದ್ರಿತ ಪ್ರಸ್ತುತಿಗೆ ಮನಸೋತಿದ್ದಾರೆ.
ಇದನ್ನೂ ಓದಿ : JioCinema : ಜಿಯೋ ಸಿನಿಮಾ ಇನ್ನು ಉಚಿತವಲ್ಲ! ವಾರ್ಷಿಕ ಚಂದಾದಾರಿಕೆ ದರ ಎಷ್ಟು?
ಪ್ರತಿ ಪಂದ್ಯದ ವೇಳೆ ಪ್ರತಿ ವೀಕ್ಷಕರು ಸರಾಸರಿ 60 ನಿಮಿಷಗಳಷ್ಟು ಸಮಯವನ್ನು ಜಿಯೋಸಿನಿಮಾದಲ್ಲಿ ಕಳೆಯುತ್ತಿದ್ದಾರೆ. ಕನೆಕ್ಟೆಡ್ ಟಿವಿಯಲ್ಲಿನ ಟಾಟಾ ಐಪಿಎಲ್ 2023ರ ಪಂದ್ಯಗಳ ವೀಕ್ಷಣೆ ಈಗಾಗಲೆ ಎಚ್ಡಿ ಟಿವಿಗಿಂತ ಎರಡು ಪಟ್ಟು ಅಧಿಕ ವೀಕ್ಷಕರ ಸಂಖ್ಯೆಯನ್ನು ತಲುಪಿದೆ.
ಟಾಟಾ ಐಪಿಎಲ್ 2023ರ ಡಿಜಿಟಲ್ ಸ್ಟ್ರೀಮಿಂಗ್‌ಗಾಗಿ ಜಿಯೋಸಿನಿಮಾ 26 ಅಗ್ರ ಬ್ರ್ಯಾಂಡ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಇವುಗಳಲ್ಲಿ (ಸಹ-ಪ್ರಸ್ತುತ ಪ್ರಾಯೋಜಕ) ಡ್ರೀಮ್11, (ಕೋ-ಪವರ್ಡ್) ಜಿಯೋಮಾರ್ಟ್, ಫೋನ್ಪೆ, ಟಿಯಾಗೋ ಇವಿ, ಜಿಯೋ (ಸಹ ಪ್ರಾಯೋಜಕ) ಆ್ಯಪ್ಪಿ ಫಿಜ್, ಇಟಿಮನೀ, ಕ್ಯಾಸ್ಟ್ರಾಲ್, ಟಿವಿಎಸ್, ಓರಿಯೊ, ಬಿಂಗೋ, ಸ್ಟಿಂಗ್, ಅಜಿಯೋ, ಹೈಯರ್, ರುಪೇ, ಲೂಯಿಸ್ ಜೀನ್ಸ್, ಅಮೆಜಾನ್, ರಾಪಿಡೊ, ಅಲ್ಟ್ರಾ ಟೆಕ್ ಸಿಮೆಂಟ್, ಪೂಮಾ, ಕಮಲಾ ಪಸಂದ್, ಕಿಂಗ್‌ಫಿಶರ್ ಪವರ್ ಸೋಡಾ, ಜಿಂದಾಲ್ ಪ್ಯಾಂಥರ್ ಟಿಎಂಟಿ ರೆಬಾರ್, ಸೌದಿ ಪ್ರವಾಸೋದ್ಯಮ, ಸ್ಪಾಟಿಫೈ ಮತ್ತು ಎಎಂಎಫ್ಐ ಸೇರಿವೆ.