Site icon Vistara News

ICC T20 World Cup : ವಿಶೇಷ ಸ್ಟೇಡಿಯಮ್​ನಲ್ಲಿ ಭಾರತ -ಪಾಕ್​ ಪಂದ್ಯ

India Pakistan match

ಬೆಂಗಳೂರು: ಕಳೆದ ತಿಂಗಳು ಮುಕ್ತಾಯಗೊಂಡ ಏಕದಿನ ವಿಶ್ವಕಪ್​ನ ರೋಚಕ ಆವೃತ್ತಿಯ ನಂತರ ಕ್ರಿಕೆಟ್ ಕ್ಷೇತ್ರವು ಮುಂದಿನ ವರ್ಷ ಜೂನ್​​ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್​​ನ (ICC T20 World Cup) ನಿರೀಕ್ಷೆಯಲ್ಲಿದೆ. ಈ ವರ್ಷದ ಆರಂಭದಲ್ಲಿ ಮೇಜರ್ ಲೀಗ್ ಕ್ರಿಕೆಟ್​​ನ ನಡೆದ ನಂತರ ಅಮೆರಿಕದಲ್ಲಿ ಕ್ರಿಕೆಟ್ ಒಂದು ಜನಪ್ರಿಯ ಕ್ರೀಡೆಯಾಗಿ ರೂಪ ಪಡೆದುಕೊಂಡಿದೆ. ಹೀಗಾಗಿ ಮುಂದಿನ ವಿಶ್ವ ಕಪ್​ ಯಶಸ್ವಿಯಾಗಬಹುದು ಎಂದು ಹೇಳಲಾಗಿದೆ. ಇವೆಲ್ಲದರ ನಡುವೆ ಭಾರತ ಮತ್ತು ಪಾಕಿಸ್ತಾನ ನಡುವಿನಿ ಟಿ20 ವಿಶ್ವಕಪ್​ ಪಂದ್ಯದ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈ ಪಂದ್ಯ ಎಲ್ಲಿ ನಡೆಯಬಹುದು ಎಂಬ ಕೌತುಕ ಸೃಷ್ಟಿಯಾಗಿದೆ.

ಮೂಲಗಳ ಪ್ರಕಾರ ಭಾರತ ಮತ್ತು ಪಾಕಿಸ್ತಾನ ತಂಡಗಳು ನ್ಯೂಯಾರ್ಕ್​ನಲ್ಲಿ ನಡೆಯಲಿದೆ. ಮೊದಲ ಗ್ರೂಪ್ ಹಂತದ ಪಂದ್ಯದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿವೆ ಎಂದು ವರದಿಗಳು ಹೇಳಿವೆ. ಹೀಗಾಗಿ ಯುಎಸ್ಎ ಕ್ರಿಕೆಟ್ ಪ್ರೇಮಿಗಳು ಕೆಲವು ಅದ್ಭುತ ಕ್ಷಣಗಳನ್ನು ಇಲ್ಲಿ ಅನುಭವಿಸಲಿದ್ದಾರೆ. ವಿಶ್ವಕಪ್ ಗಾಗಿ 34,000 ಆಸನಗಳ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು. ಇತ್ತೀಚಿನ ಜನಗಣತಿಯ ಮಾಹಿತಿಯ ಪ್ರಕಾರ, ಭಾರತೀಯ ಮೂಲದ 7,11,000 ಜನರು ಮತ್ತು ಪಾಕಿಸ್ತಾನಿ ಮೂಲದ ಸುಮಾರು 1,00,000 ಜನರು ನ್ಯೂಯಾರ್ಕ್​ನಲ್ಲಿ ವಾಸಿಸುತ್ತಿದ್ದಾರೆ.

ಬೆಳಗ್ಗೆ ಪಂದ್ಯ ಆರಂಭ

ನ್ಯೂಯಾರ್ಕ್ ಮತ್ತು ನವದೆಹಲಿ ನಡುವೆ 10.5 ಗಂಟೆಗಳ ಸಮಯದ ವ್ಯತ್ಯಾಸವಿರುವುದರಿಂದ, ಸಂಘಟಕರು ಕೆಲವು ಪಂದ್ಯಗಳನ್ನು, ವಿಶೇಷವಾಗಿ ಭಾರತವನ್ನು ಒಳಗೊಂಡ ಪಂದ್ಯಗಳನ್ನು ಬೆಳಗ್ಗೆ ಪ್ರಾರಂಭಿಸಲು ಒಪ್ಪಿಕೊಂಡಿದ್ದಾರೆ. ಇದು ಭಾರತೀಯ ದೂರದರ್ಶನ ಪ್ರೇಕ್ಷಕರಿಗೆ ತಮ್ಮ ಅನುಕೂಲದ ಸಮಯದಲ್ಲಿ ಪಂದ್ಯವನ್ನು ನೋಡಲು ಸಹಾಯ ಮಾಡಲಿದೆ.

ಅಮೆರಿಕದಲ್ಲಿ ನಡೆಯಲಿರುವ ಟೂರ್ನಿಯ ಗ್ರೂಪ್ ಹಂತದ ಎಲ್ಲಾ ಆರಂಭಿಕ ಪಂದ್ಯಗಳನ್ನು ಆಡಲಿರುವ 10 ದೇಶಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಸೇರಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಸ್ಥಳೀಯ ಸಂಘಟನಾ ಸಂಸ್ಥೆಗಳು ಡಿಸೆಂಬರ್ 15ರ ಶುಕ್ರವಾರ ಸಂಪೂರ್ಣ ವೇಳಾಪಟ್ಟಿಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.

ವೆಸ್ಟ್​ ಇಂಡೀಸ್​​ನಲ್ಲಿ ಇಂಗ್ಲೆಂಡ್​ ಆಸ್ಟ್ರೇಲಿಯಾ ಪಂದ್ಯ

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಮ್ಮ ಎಲ್ಲಾ ಗುಂಪು ಹಂತದ ಪಂದ್ಯಗಳನ್ನು ವೆಸ್ಟ್​ ಇಂಡೀಸ್​ನಲ್ಲಿ ಆಡಬಹುದು. ವರದಿಗಳ ಪ್ರಕಾರ ಇಂಗ್ಲೆಂಡ್ ತಮ್ಮ ಗುಂಪಿನಲ್ಲಿರುವ ನಾಲ್ಕು ತಂಡಗಳ ವಿರುದ್ಧ ಆಂಟಿಗುವಾ, ಬಾರ್ಬಡೋಸ್ ಮತ್ತು ಸೇಂಟ್ ಲೂಸಿಯಾದಲ್ಲಿ ಸೆಣಸಲಿದೆ. ಏತನ್ಮಧ್ಯೆ, ಸೇಂಟ್ ವಿನ್ಸೆಂಟ್, ಗಯಾನಾ ಮತ್ತು ಟ್ರಿನಿಡಾಡ್ ನಂತಹ ಸ್ಥಳಗಳಲ್ಲಿ ಆಸ್ಟ್ರೇಲಿಯಾವನ್ನು ಆಡಲಿದೆ.

ಐಸಿಸಿ ಕಳೆದ ಹದಿನೈದು ದಿನಗಳ ಹಿಂದೆ ಕೆರಿಬಿಯನ್ ಸ್ಥಳಗಳಿಗೆ ಪರಿಶೀಲನಾ ತಂಡವನ್ನು ಕಳುಹಿಸಿದೆ. ಈ ವಾರ ಗಯಾನಾದಲ್ಲಿ ಮುಕ್ತಾಯಗೊಂಡಿದ್ದು. ಸುಧಾರಣೆಗೆ ಅವಕಾಶವನ್ನು ಇದ್ದರೂ ಗಮನಾರ್ಹ ಸಮಸ್ಯೆ ಇಲ್ಲ . 2007ರ ಏಕದಿನ ವಿಶ್ವಕಪ್ ಹಾಗೂ 2010ರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ಬಾರ್ಬಡೋಸ್​​ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

Exit mobile version