ಚೆನ್ನೈ: ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಸಮತೋಲಿತ ಪ್ರದರ್ಶನ ನೀಡಿದ ನ್ಯೂಜಿಲ್ಯಾಂಡ್ ತಂಡ ಐಸಿಸಿ ವಿಶ್ವಕಪ್ನ ತನ್ನ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ವಿರುದ್ದ 8 ವಿಕೆಟ್ ಸುಲಭ ವಿಜಯ ಸಾಧಿಸಿದೆ. ಇದು ನ್ಯೂಜಿಲ್ಯಾಂಡ್ ತಂಡಕ್ಕೆ ಹ್ಯಾಟ್ರಿಕ್ ಜಯವಾಗಿದ್ದು ಹಾಲಿ ಆವೃತ್ತಿಯಲ್ಲಿ ಅತ್ಯುತ್ತಮ ಆರಂಭ ಪಡೆದುಕೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ್ದ ಕಿವೀಸ್ ಬಳಗ ನಂತರದ ಹಣಾಹಣಿಯಲ್ಲಿ ನೆದರ್ಲೆಂಡ್ಸ್ ವಿರುದ್ದ ವಿಜಯ ಸಾಧಿಸಿತ್ತು. ಒಟ್ಟು ಆರು ಅಂಕಗಳನ್ನು ಗಳಿಸಿರುವ ಕೇನ್ಸ್ ವಿಲಿಯಮ್ಸನ್ ಪಡೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
The New Zealand juggernaut rolls on with a third consecutive win at #CWC23 🙌#NZvBAN 📝 https://t.co/SYge6mt66w pic.twitter.com/mdREUucGA5
— ICC (@ICC) October 13, 2023
ಇಲ್ಲಿನ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 245 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ತಂಡ 42.5 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 248 ರನ್ ಬಾರಿಸಿ ಗೆಲುವು ಸಾಧಿಸಿತು. ನ್ಯೂಜಿಲ್ಯಾಂಡ್ ಪರ ನಾಯಕ ಕೇನ್ ವಿಲಿಯಮ್ಸನ್ (78) ಹಾಗೂ ಡ್ಯಾರಿಲ್ ಮಿಚೆಲ್ (89) ತಂಡದ ಗೆಲುವಿಗೆ ಕೊಟ್ಟರು.
ಈ ಸುದ್ದಿಯನ್ನೂ ಓದಿ : Cricket in LA28 : ಇದು ಅಧಿಕೃತ ಮಾಹಿತಿ; ಅಮೆರಿಕ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಮತ್ತು ಸ್ಕ್ವಾಷ್ ಫಿಕ್ಸ್
ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಹೊರಟ ನ್ಯೂಜಿಲ್ಯಾಂಡ್ 12 ರನ್ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ ಜತೆಯಾದ ಡೆವೋನ್ ಕಾನ್ವೆ (45) ಹಾಗೂ ಕೇನ್ ವಿಲಿಯಮ್ಸನ್ 80 ರನ್ಗಳ ಜತೆಯಾಟವಾಡಿದರು. ಶಕಿಬ್ ಅಲ್ ಹಸನ್ ಎಸೆತಕ್ಕೆ ಎಲ್ಬಿಡಬ್ಲ್ಯು ಆಗಿ ಔಟ್ ಆದ ಕಾನ್ವೆ 5 ರನ್ಗಳ ಕೊರತೆಯಿಂದ ಅರ್ಧ ಶತಕ ಬಾರಿಸುವ ಅವಕಾಶ ತಪ್ಪಿಸಿಕೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಡ್ಯಾರಿಲ್ ಮಿಚೆಲ್, ವಿಲಿಯಮ್ಸನ್ ಜತೆ ಸೇರಿ 108 ರನ್ಗಳ ಜತೆಯಾಟ ನೀಡಿದರು. ಆದರೆ, ಗಾಯದ ಸಮಸ್ಯೆಯಿಂದಾಗಿ ಕೇನ್ ವಿಲಿಯಮ್ಸನ್ 78 ರನ್ಗಳನ್ನು ಗಳಿಸಿ ನಿವೃತ್ತಿ ಪಡೆದು ಪೆವಿಲಿಯನ್ ತಲುಪಿದರು. ಕೊನೆಯಲ್ಲಿ ಬಂದ ಗ್ಲೆನ್ ಫಿಲಿಪ್ಸ್ 16 ರನ್ ಬಾರಿಸಿದರು.
ಮುಷ್ಫಿಕರ್ ಅರ್ಧ ಶತಕದ ನೆರವು
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 56 ರನ್ಗೆ ಮೊದಲ 4 ವಿಕೆಟ್ ಕಳೆದುಕೊಂಡಿತು. ಈ ವೇಳೆ ಜತೆಯಾದ ನಾಯಕ ಶಕಿಬ್ ಅಲ್ ಹಸನ್ (40) ತಂಡವನ್ನು ಕಾಪಾಡಲು ಯತ್ನಿಸಿದರು. ಇನ್ನೊಂದು ಕಡೆ ಮುಷ್ಫಿಕರ್ ರಹಿಮ್ (66) ಅರ್ಧ ಶತಕ ಬಾರಿಸಿ ಆರಂಭಿಕ ಹಿನ್ನಡೆಯನ್ನು ತಪ್ಪಿಸಿದರು. ಮಹಮದುಲ್ಲಾ 41 ರನ್ ಬಾರಿಸಿ ಕೊನೇ ಹಂತದಲ್ಲಿ ಒಟ್ಟು ಮೊತ್ತ ಹೆಚ್ಚುವಂತೆ ನೋಡಿಕೊಂಡರು.