Site icon Vistara News

ind vs NZ : ಭಾರತ ವಿರುದ್ಧದ ಪಂದ್ಯದಲ್ಲಿ ಕ್ರೀಡಾ ಸ್ಫೂರ್ತಿ ಮೆರೆದ ನ್ಯೂಜಿಲ್ಯಾಂಡ್​ ಆಟಗಾರರು

ind vs NZ

ಧರ್ಮಶಾಲಾ: ಏಕದಿನ ವಿಶ್ವಕಪ್ 2023 ಉತ್ತಮವಾಗಿ ನಡೆಯುತ್ತಿದೆ. ಅಭಿಮಾನಿಗಳು ಈಗಾಗಲೇ ಸ್ಪರ್ಧೆಯಲ್ಲಿ ಅನೇಕ ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಅಕ್ಟೋಬರ್ 22ರ ಭಾನುವಾರ ಧರ್ಮಶಾಲಾದ ಎಚ್​ಪಿಸಿಎ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ (ind vs NZ) ಪಂದ್ಯದಲ್ಲೂ ಇಂಥದ್ದೇ ಒಂದು ಅವಿಸ್ಮರಣೀಯ ಕ್ಷಣ ಎದುರಾಯಿತು.

ಮೊದಲ ಇನ್ನಿಂಗ್ಸ್​ನ 24ನೇ ಓವರ್​ನಲ್ಲಿ ಬ್ಲ್ಯಾಕ್ ಕ್ಯಾಪ್ಸ್ ತಂಡದ ಬ್ಯಾಟರ್​ಗಳು ಅದ್ಭುತ ಕ್ರಿಕೆಟ್ ಸ್ಫೂರ್ತಿಯನ್ನು ಮೆರೆದರು. ಭಾರತ ತಂಡದ ಫೀಲ್ಡರ್​ಗಳು ಎಸೆದ ಓವರ್​ ಥ್ರೋಗೆ ರನ್​ ಗಳಿಸದೇ ಮೆಚ್ಚುಗೆಗೆ ಪಾತ್ರರಾದರು. ಚೆಂಡು ವಿಕೆಟ್ ಉರುಳಿಸಿದ್ದ ಕಾರಣ ಬ್ಯಾಟರ್​​ಗಳಿಗೆ ಹೆಚ್ಚುವರಿ ರನ್ ಗಳಿಸುವ ಅವಕಾಶವಿತ್ತು. ಆದರೆ, ರಚಿನ್ ರವೀಂದ್ರ ಮತ್ತು ಡ್ಯಾರಿಲ್ ಮಿಚೆಲ್ ಇದಕ್ಕೆ ವಿರುದ್ಧವಾಗಿ ನಿರ್ಧಾರ ಕೈಗೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.

24ನೇ ಓವರ್​​ನ ಎರಡನೇ ಎಸೆತದಲ್ಲಿ ರವೀಂದ್ರ ಜಡೇಜಾ ರಚಿನ್ ರವೀಂದ್ರಗೆ ಬೌಲ್ ಮಾಡಿದರು. ಅವರು ಕವರ್ ಪಾಯಿಂಟ್​ಗೆ ಚೆಂಡನ್ನು ಕಳುಹಿಸಿದರು. ಸೂರ್ಯಕುಮಾರ್ ಯಾದವ್ ಚೆಂಡನ್ನು ತಡೆದು ಎಸೆದರು. ಅದು ವಿಕೆಟ್​ಗೆ ಬಿತ್ತು. ಆದರೆ ಬ್ಯಾಟರ್​ಗಳು ರನ್​ಗಾಗಿ ಓಡಲಿಲ್ಲ. ಓಡುವುದು ಬೇಡ ಎಂದು ನಿರ್ಧಾರ ಕೈಗೊಂಡರು.

ಅಜೇಯ ಓಟವನ್ನು ಉಳಿಸಿಕೊಳ್ಳಲು ಹೋರಾಟ

ಎರಡೂ ತಂಡಗಳ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಭಾರತ ಮತ್ತು ನ್ಯೂಜಿಲೆಂಡ್ ಎರಡೂ ಪ್ರಸ್ತುತ ಏಕದಿನ ವಿಶ್ವಕಪ್ 2023 ರಲ್ಲಿ ಅಜೇಯವಾಗಿವೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಟೂರ್ನಿಯಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಸೆಣಸಿ ಗೆದ್ದಿದೆ.

ಈ ಸುದ್ದಿಯನ್ನೂ ಓದಿ : Rohit Sharma : ಗಾಯದ ನೋವಿಗೆ ಮೈದಾನವನ್ನೇ ಶಪಿಸಿದ ರೋಹಿತ್​ ಶರ್ಮಾ

ಮತ್ತೊಂದೆಡೆ, ನ್ಯೂಜಿಲೆಂಡ್ ಏಕದಿನ ವಿಶ್ವಕಪ್ 2023 ರಲ್ಲಿ ಅದ್ಭುತ ಪ್ರದರ್ಶನವನ್ನು ನೀಡುತ್ತಿದೆ. ಟೂರ್ನಿಯಲ್ಲಿ ಈವರೆಗೆ ಇಂಗ್ಲೆಂಡ್, ನೆದರ್ಲ್ಯಾಂಡ್ಸ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ವಿರುದ್ಧ ಸೆಣಸಿದ್ದು, ಅದ್ಭುತ ಗೆಲುವುಗಳನ್ನು ದಾಖಲಿಸಿದೆ. ಹೀಗಾಗಿ ಈ ಮುಖಾಮುಖಿಯಲ್ಲಿ ಯಾವ ತಂಡವು ತನ್ನ ಮೊದಲ ಸೋಲನ್ನು ಪಡೆಯುತ್ತದೆ ಎಂಬುದನ್ನು ನೋಡುವುದೇ ಆಸಕ್ತಿದಾಯಕವಾಗಿದೆ.

ಭಾರತಕ್ಕೆ 274 ರನ್ ಗೆಲುವಿನ ಗುರಿ

ಡ್ಯಾರಿಲ್ ಮಿಚೆಲ್​ (130) ಅವರ ಶತಕ ಹಾಗೂ ಯುವ ಬ್ಯಾಟರ್​ ರಚಿನ್ ರವೀಂದ್ರ (75) ಅವರ ಅರ್ಧ ಶತಕದ ನೆರವು ಪಡೆದ ನ್ಯೂಜಿಲ್ಯಾಂಡ್ (ind vs NZ )​ ತಂಡ ಭಾರತ ವಿರುದ್ಧದ ವಿಶ್ವ ಕಪ್​​ನ ಪಂದ್ಯದಲ್ಲಿ 273 ರನ್​ಗಳನ್ನು ಗಳಿಸಿದೆ. ಇದರೊಂದಿಗೆ ಭಾರತ ತಂಡಕ್ಕೆ 274 ರನ್​ಗಳ ಗೆಲುವಿನ ಸವಾಲು ಎದುರಾಗಿದೆ. ಹಾಲಿ ವಿಶ್ವ ಕಪ್​ನಲ್ಲಿ ಭಾರತ ಹಾಗೂ ನ್ಯೂಜಿಲ್ಯಾಂಡ್​ ತಲಾ ನಾಲ್ಕು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನವನ್ನು ಪಡೆದುಕೊಂಡಿದೆ. ಹೀಗಾಗಿ ಮೊದಲ ಸ್ಥಾನಕ್ಕಾಗಿ ಇತ್ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ.

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್​ ಸಂಸ್ಥೆಯ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕಿವೀಸ್​ ಪಡೆ ನಿಗದಿತ 50 ಓವರ್​ಗಳಲ್ಲಿ 273 ರನ್​ಗಳಿಗೆ ಆಲ್​ಔಟ್​ ಆಯಿತು. ಭಾರತ ತಂಡದ ಪರ ವಿಶ್ವ ಕಪ್​ನಲ್ಲಿ ಮೊದಲ ಪಂದ್ಯವಾಡಿದ 54 ರನ್​ಗಳಿಗೆ 5 ವಿಕೆಟ್​ ಪಡೆದು ಮಿಂಚಿದರು. ಮೊದಲ ಪಂದ್ಯದಲ್ಲಿಯೇ ಅವರು 5 ವಿಕೆಟ್​ ಪಡೆದು ಮಿಂಚಿದರು.

Exit mobile version