Site icon Vistara News

Nicholas Pooran : ಐಪಿಎಲ್​ 2024ರ ಬೃಹತ್ ಸಿಕ್ಸರ್ ಬಾರಿಸಿದ ಪೂರನ್, ಇಲ್ಲಿದೆ ವಿಡಿಯೊ

Nicholas Pooran

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswam Stadium) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ಎಡಗೈ ಬ್ಯಾಟರ್​ ನಿಕೋಲಸ್ ಪೂರನ್ (Nicholas Pooran) ಮಂಗಳವಾರ (ಏಪ್ರಿಲ್ 2) ತಮ್ಮ ಉತ್ತಮ ಫಾರ್ಮ್​ ಮುಂದುವರಿಸಿದರು. ಅವರು ಲಕ್ನೋ ಸೂಪರ್ ಜೈಂಟ್ಸ್ ಪರ ಮತ್ತೊಂದು ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಈ ಅಬ್ಬರದ ಆಟದಲ್ಲಿ ಅವರು ಬೃಹತ್​ ಸಿಕ್ಸರ್​ಗಳನ್ನು ಬಾರಿಸಿದ್ದು. ಇದು ಹಾಲಿ ಆವೃತ್ತಿಯ ಐಪಿಎಲ್​ನ ಬೃಹತ್ ಸಿಕ್ಸರ್ ಎನಿಸಿಕೊಂಡಿದೆ.

ಐಪಿಎಲ್ 2024 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಜೇಯ 64 ರನ್ ಗಳಿಸುವ ಮೂಲಕ ಅವರು ತಮ್ಮ ಅಭಿಯಾನವನ್ನು ಪ್ರಾರಂಭಿಸಿದರು. ಆದಾಗ್ಯೂ, ಎಲ್ಎಸ್​​ಜಿ 20 ರನ್​ಗಳಿಂದ ಪಂದ್ಯವನ್ನು ಕಳೆದುಕೊಂಡಿದ್ದರಿಂದ ಈ ಪ್ರಯತ್ನ ವ್ಯರ್ಥವಾಯಿತು. ಎರಡನೇ ಪಂದ್ಯದಲ್ಲಿ ಅವರು 42 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಎಲ್ಎಸ್​​ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಐಪಿಎಲ್ 2024 ರಲ್ಲಿ ಖಾತೆ ತೆರೆಯಿತು.

ಇದನ್ನೂ ಓದಿ: Virat kohli : ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ವಿಶೇಷ ದಾಖಲೆ ಬರೆದ​ ಕೊಹ್ಲಿ; ಈ ಸಾಧನೆ ಮಾಡಿದ ಮೊದಲ ಭಾರತೀಯ

ತಮ್ಮ ಪ್ರಭಾವಶಾಲಿ ಓಟವನ್ನು ಮುಂದುವರಿಸಿದ ಎಡಗೈ ಬ್ಯಾಟ್ಸ್ಮನ್ ಆರ್​ಸಿಬಿ ವಿರುದ್ಧ ಅಜೇಯ 40 ರನ್ ಗಳಿಸಿ ವಿರುದ್ಧ 180 ಕ್ಕೂ ಹೆಚ್ಚು ಮೊತ್ತವನ್ನು ಗಳಿಸಲು ತಮ್ಮ ತಂಡಕ್ಕೆ ಸಹಾಯ ಮಾಡಿದರು. 18ನೇ ಓವರ್ ಅಂತ್ಯಕ್ಕೆ ಎಲ್ಎಸ್​ಜಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತ್ತು. ಆದಾಗ್ಯೂ, ನಿಕೋಲಸ್ ಪೂರನ್ ಕೊನೆಯ ಎರಡು ಓವರ್​ಗಳಲ್ಲಿ ಐದು ಸಿಕ್ಸರ್​ಗಳನ್ನು ಬಾರಿಸಿ ತಮ್ಮ ತಂಡವನ್ನು ದೊಡ್ಡ ಮೊತ್ತಕ್ಕೆ ಮುನ್ನಡೆಸಿದರು. 19 ನೇ ಓವರ್​ಲ್ಲಿ ಅವರು ರೀಸ್ ಟಾಪ್ಲೆ ವಿರುದ್ಧ ಮೂರು ಸಿಕ್ಸರ್​ಗಳನ್ನು ಸಿಡಿಸಿದರು. ಅಂತಿಮ ಓವರ್​ನಲ್ಲಿ ಮೊಹಮ್ಮದ್ ಸಿರಾಜ್ ವಿರುದ್ದ 2 ಸಿಕ್ಸರ್ ಬಾರಿಸಿದರು.

ಅಷ್ಟು ಸಿಕ್ಸರ್ ಗಳಲ್ಲಿ ಒಂದು 106 ಮೀಟರ್ ಗಳ ದೂರ ಹೋಗಿತ್ತು. ಇದು ರೀಸ್​ ಟೋಪ್ಲೆಯ 19ನೇ ಓವರ್​ನ ಮೂರನೇ ಸಿಕ್ಸರ್ ಆಗಿತ್ತು. ವೆಸ್ಟ್ ಇಂಡೀಸ್ ಸ್ಟಾರ್ ತನ್ನ ಭಾರಿ ಹೊಡೆತದೊಂದಿಗೆ ಚೆಂಡನ್ನು ಕ್ರೀಡಾಂಗಣದ ಚಾವಣಿಗೆ ಏರಿಸಿದರು. ಈ ಮೂಲಕ ಐಪಿಎಲ್ 2024ರಲ್ಲಿ ಅತಿ ದೊಡ್ಡ ಸಿಕ್ಸರ್ ಸಿಡಿಸಿದ ಕೋಲ್ಕತಾ ನೈಟ್ ರೈಡರ್ಸ್ ಬ್ಯಾಟರ್​ ವೆಂಕಟೇಶ್ ಅಯ್ಯರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಬಿ ವಿರುದ್ಧ ಅಯ್ಯರ್ 106 ಮೀಟರ್ ಸಿಕ್ಸರ್ ಬಾರಿಸಿದ್ದರು.

Exit mobile version