Site icon Vistara News

Nino Salukvadze: ತಂದೆಯ ಆಸೆಯಂತೆ 10ನೇ ಒಲಿಂಪಿಕ್ಸ್ ಆಡಿ ದಾಖಲೆ ಬರೆದ ಜಾರ್ಜಿಯಾದ ಮಹಿಳಾ ಶೂಟರ್‌

Nino Salukvadze

Nino Salukvadze: Georgian shooter features in record 10th Olympics for father's last wish

ಪ್ಯಾರಿಸ್‌: ಜಾರ್ಜಿಯಾದ ಶೂಟರ್‌ ನಿನೊ ಸಲುಕ್‌ವಾಡ್ಜೆ(Nino Salukvadze) ಅವರು ಒಲಿಂಪಿಕ್ಸ್​(Olympic Games) ಇತಿಹಾಸದಲ್ಲೇ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಬರೋಬ್ಬರಿ 10 ಒಲಿಂಪಿಕ್ಸ್‌ ಟೂರ್ನಿಗಳಲ್ಲಿ ಭಾಗವಹಿಸುವ ತಮ್ಮ ತಂದೆಯ ಆಸೆಯನ್ನು ಪೂರೈಸಿದ್ದಾರೆ. ತಮ್ಮ ಹತ್ತು ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ತಲಾ ಒಂದೊಂದು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಚೊಚ್ಚಲ ಒಲಿಂಪಿಕ್ಸ್​ನಲ್ಲಿ ಅವಳಿ ಪದಕ


10 ಒಲಿಂಪಿಕ್ಸ್​ನಲ್ಲಿ ಪಾಲ್ಗೊಂಡ ಮೊದಲ ಮಹಿಳಾ ಕ್ರೀಡಾಪಟು ಎಂಬ ಕೀರ್ತಿಗೆ ಪಾತ್ರರಾಗಿರುವ ಸಲುಕ್‌ವಾಡ್ಜೆ, ತಮ್ಮ ಚೊಚ್ಚಲ ಒಲಿಂಪಿಕ್ಸ್​ ಪ್ರಯತ್ನದಲ್ಲೇ ಅವಳಿ ಪದಕ ಗೆದ್ದ ಸಾಧನೆ ಮಾಡಿದ್ದರು. ದಕ್ಷಿಣ ಕೊರಿಯಾದಲ್ಲಿ 1988ರಲ್ಲಿ ನಡೆದ ಒಲಿಂಪಿಕ್ಸ್‌ ಟೂರ್ನಿಯಲ್ಲಿ 10 ಮೀಟರ್‌ ಹಾಗೂ 25 ಮೀಟರ್‌ ಶೂಟಿಂಗ್‌ನಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಗೆದಿದ್ದರು. ಇದಾಗಿ 20 ವರ್ಷಗಳ ಬಳಿಕ 2008ರಲ್ಲಿ ನಡೆದಿದ್ದ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಬಾರಿ ಪ್ಯಾರಿಸ್​ನಲ್ಲಿ 25 ಮೀಟರ್‌ ಶೂಟಿಂಗ್‌ನಲ್ಲಿ ಸ್ಪರ್ಧಿಸಿದ್ದ ಅವರು ಫೈನಲ್‌ ತಲುಪುವಲ್ಲಿ ವಿಫಲರಾದರು. 1988ರಲ್ಲಿ ಅವರು ಪದಕ ಗೆದ್ದದ್ದು ಯುಎಸ್‌ಎಸ್‌ಆರ್‌ (ರಷ್ಯಾ ಒಕ್ಕೂಟ) ಪ್ರತಿನಿಧಿಯಾಗಿ. ಜಾರ್ಜಿಯಾ ದೇಶವನ್ನು ಪ್ರತಿನಿಧಿಸಿದ್ದು ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಹೀಗಾಗಿ ಚಿನ್ನ ಮತ್ತು ಬೆಳ್ಳಿ ರಷ್ಯಾ ಒಕ್ಕೂಟಕ್ಕೆ ಸೇರಿದರೆ, ಕಂಚು ಜಾರ್ಜಿಯಾಗೆ ಸೇರಿದ್ದಾಗಿದೆ.

ತಂದೆಯ ಆಸೆ ನೆರವೇರಿಸಲು ಸ್ಪರ್ಧೆ


55 ವರ್ಷದ ಸಲುಕ್‌ವಾಡ್ಜೆ ಕಳೆದ ಟೋಕಿಯೋ ಒಲಿಂಪಿಕ್ಸ್​ನಲ್ಲಿಯೇ ತಮ್ಮ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದರು. ಆದರೆ, ತಂದೆ ನಿಧನರಾಗುವುದಕ್ಕೂ ಮುನ್ನ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಆಡುವಂತೆ ಪ್ರೇರಿಪಿಸಿದ್ದರು. ಇದು ಅವರ ಕೊನೆಯ ಆಸೆಯಾಗಿತ್ತು. ಹೀಗಾಗಿ ಈ ಟೂರ್ನಿಯಲ್ಲಿ ಭಾಗವಹಿಸುವ ಮೂಲಕ ಅವರ ಆಸೆಯನ್ನು ಪೂರೈಸಿದೆ ಎಂದು ನಿನೊ ಸಲುಕ್‌ವಾಡ್ಜೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಕಳೆದ ಟೋಕಿಯೋದಲ್ಲಿಯೂ ಅವರಿಗೆ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಅಚ್ಚರಿ ಎಂದರೆ, ನಿನೊ ಸಲುಕ್‌ವಾಡ್ಜೆ ಅವರಿಗೆ ತಮ್ಮ ತಂದೆಯೇ ಕೋಚ್‌ ಆಗಿದ್ದರು. ಈಕ್ವೆಸ್ಟೀಯನ್‌ ಆಟಗಾರ ಇಯಾನ್‌ ಮಿಲ್ಲರ್‌ 10 ಒಲಿಂಪಿಕ್ಸ್‌ ಟೂರ್ನಿಗಳಲ್ಲಿ ಭಾಗವಹಿಸಿದ್ದ ಮೊದಲ ಕ್ರೀಡಾಪಟು ಎನಿಸಿದ್ದರು. ಇದೀಗ ಈ ದಾಖಲೆಯನ್ನು ಸಲುಕ್‌ವಾಡ್ಜೆ ಸರಿಗಟ್ಟಿದ್ದಾರೆ.

ನಿವೃತ್ತಿ ಘೋಷಿಸಿದ ಶಟ್ಲರ್​ ಅಶ್ವಿನಿ ಪೊನ್ನಪ್ಪ


ಪ್ಯಾರಿಸ್: ಕನ್ನಡತಿ, ಭಾರತದ ಹಿರಿಯ ಬ್ಯಾಡ್ಮಿಂಟನ್(Indian Badminton Star Ashwini Ponnappa) ಆಟಗಾರ್ತಿ ಅಶ್ವಿನಿ ಪೊನ್ನಪ್ಪ(Ashwini Ponnappa) ಅವರು ಒಲಿಂಪಿಕ್ಸ್​ಗೆ ವಿದಾಯ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಪೊನ್ನಪ್ಪ, ‘ಇದು ನನ್ನ ಕೊನೆಯ ಒಲಿಂಪಿಕ್ಸ್‌’ ಎಂದು ಹೇಳಿದ್ದಾರೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ತನಿಶಾ ಕ್ರಾಸ್ಟೊ ಅವರೊಂದಿಗೆ ಡಬಲ್ಸ್‌ನಲ್ಲಿ ಮೂರು ಸತತ ಸೋಲು ಅನುಭವಿಸಿ ಪರಾಭವಗೊಂಡ ಬೆನ್ನಲ್ಲೇ ಅವರು ತಮ್ಮ ನಿವೃತ್ತಿ(Ashwini Ponnappa Announces Retirement) ಪ್ರಕಟಿಸಿದ್ದಾರೆ.

ಮಂಗಳವಾರ ನಡೆದಿದ್ದ ‘ಸಿ’ ಗುಂಪಿನ ಪಂದ್ಯದಲ್ಲಿ ಅಶ್ವಿನಿ ಹಾಗೂ ತನಿಶಾ ಜೋಡಿಯು ಆಸ್ಟ್ರೇಲಿಯಾದ ಸೆತ್ಯಾನಾ ಮಾಪಸಾ ಹಾಗೂ ಏಂಜೆಲಾ ಯು ಜೋಡಿ ವಿರುದ್ಧ 15-21, 10-21 ನೇರ ಸೇಟ್‌ನಲ್ಲಿ ಸೋಲು ಕಂಡು 2024ರ ಒಲಿಂಪಿಕ್ಸ್‌ನಿಂದ ಈ ಜೋಡಿ ಹೊರಬಿದ್ದಿತು. ಈ ಸೋಲಿನ ಬಳಿಕ 34 ವರ್ಷದ ಅಶ್ವಿನಿ ಪೊನ್ನಪ್ಪ 2028ರಲ್ಲಿ ಲಾಸ್‌ಏಂಜಲೀಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ.

Exit mobile version