ದುಬೈ : ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ೨೦ ವಿಶ್ವ ಕಪ್‌ಗೆ ನಿಸ್ಸಾನ್ ಕಂಪನಿಯ ಎಸ್‌ಯುವಿ ಮ್ಯಾಗ್ನೈಟ್ (Nissan Magnite) ಅಧಿಕೃತ ಕಾರು ಎಂದು ಘೋಷಣೆಯಾಗಿದೆ. ಈ ಮೂಲಕ ಸತತ ಏಳು ವರ್ಷಗಳ ಕಾಲ ನಿಸ್ಸಾನ್ ಇಂಡಿಯಾ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ನಡುವಿನ ಒಪ್ಪಂದ ಮುಂದುವರಿದಿದೆ. ಮ್ಯಾಗ್ನೈಟ್ ಭಾರತದಲ್ಲಿ ಅತ್ಯಂತ ಅಗ್ಗದ ದರದಲ್ಲಿ ದೊರೆಯುತ್ತಿರುವ ೫ ಸೀಟ್‌ಗಳ ಎಸ್‌ಯುವಿಯಾಗಿದ್ದು, ಆರಂಭಿಕ ಬೆಲೆ ೫.೯೭ ಲಕ್ಷ ರೂಪಾಯಿಯಾಗಿದ್ದರೆ, ಟಾಪ್ ಎಂಡ್ ಕಾರಿನ ಬೆಲೆ ೧೦.೭೯ ಲಕ್ಷ ರೂಪಾಯಿಯಾಗಿದೆ. ರಿನೋ ಕೈಗರ್, ಹ್ಯುಂಡೈನ ವೆನ್ಯು, ಸಿಟ್ರಾನ್ ಸಿ೩, ಮಹೀಂದ್ರಾ ಎಕ್ಸ್‌ಯುವಿ ೩೦೦, ಮಾರುತಿ ಸುಜುಕಿ ಬ್ರೇಜಾಗೆ ಮ್ಯಾಗ್ನೈಟ್ ಪ್ರತಿಸ್ಪರ್ಧಿಯಾಗಿದೆ.
ನಿಸ್ಸಾನ್ ಕಂಪನಿಯು ತನ್ನ ಮ್ಯಾಗ್ನೈಟ್ ಕಾರನ್ನು ೧೫ ದೇಶಗಳಿಗೆ ರಫ್ತು ಮಾಡುತ್ತಿದೆ. ನೇಪಾಳ ಹಾಗೂ ಭೂತಾನ್‌ನಲ್ಲೂ ಇತ್ತೀಚೆಗೆ ಕಾರು ಮಾರುಕಟ್ಟೆಗೆ ಇಳಿದಿತ್ತು. ಅಂತೆಯೇ ಭಾರತೀಯ ಮಾರುಕಟ್ಟೆಯಲ್ಲೂ ಈ ಕಾರಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತಗೊಂಡಿದೆ.
ಹಬ್ಬದ ಋತುವಿನ ಹಿನ್ನೆಲೆಯಲ್ಲಿ ಮ್ಯಾಗ್ನೈಟ್‌ಗೆ ಬೇಡಿಕೆ ಹೆಚ್ಚಾಗಿದೆ. ಅಂತೆಯೇ ನಮ್ಮ ಗ್ರಾಹಕರನ್ನು ಸಂತೃಪ್ತಗೊಳಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ ಅವರು ಅಭಿಪ್ರಾಯಪಟ್ಟಿದ್ದಾರೆ.
ನಿಸ್ಸಾನ್ ರೆಡ್ ಎಡಿಷನ್ ಮ್ಯಾಗ್ನೈಟ್ ಅನ್ನು ಮಾರುಕಟ್ಟೆಗೆ ಇಳಿಸಿತ್ತು. ಅದರ ಬೆಲೆ ೭.೮೭ ಲಕ್ಷ ರೂಪಾಯಿಂದ ಆರಂಭವಾಗುತ್ತದೆ. ಈ ಕಾರಿನ ಇಂಟೀರಿಯರ್‌ನಲ್ಲಿ ಕೆಂಪು ಬಣ್ಣದ ಆಕ್ಸೆಂಟ್‌ಗಳು ಬರುತ್ತವೆ. ಅದೇ ರೀತಿ ಮಧ್ಯದ ಕನ್ಸೋಲ್‌ಗಳು ಕೂಡ ಕೆಂಫು ಬಣ್ಣದ್ದಾಗಿದೆ.