ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನ (CWG- 2022) ಬಾಕ್ಸಿಂಗ್‌ನಲ್ಲಿ ಭಾರತಕ್ಕೊಂದು ಪದಕ ಖಾತರಿಯಾಗಿದೆ. ಯುವ ಬಾಕ್ಸರ್ ನೀತೂ ಗಂಗಾಸ್ ೪೮ ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್ಸ್ ಹಂತಕ್ಕೇರಿದ್ದು, ಕನಿಷ್ಠ ಪಕ್ಷ ಕಂಚಿನ ಪದಕ ಲಭಿಸಲಿದೆ. ಬುಧವಾರ ನಡೆದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಎದುರಾಳಿ ಉತ್ತರ ಐರ್ಲೆಂಡ್‌ನ ಸ್ಪರ್ಧಿಯ ವಿರುದ್ಧ ಪಾರಮ್ಯ ಸಾಧಿಸುವ ಮೂಲಕ ಸುಲಭ ಜಯ ದಾಖಸಿ ಉಪಾಂತ್ಯಕ್ಕೆ ಪ್ರವೇಶ ಪಡೆದುಕೊಂಡರು.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೆಚ್ಚು ವಿಶ್ವಾಸದಿಂದ ಸ್ಪರ್ಧಿಸಿದ ನೀತೂ, ಎದುರಾಳಿ ನಿಕೋಲ್ ಕ್ಲೈಡ್ ವಿರುದ್ಧ ಸರ್ವಾನುಮತದ ವಿಜಯ ಸಾಧಿಸಿದರು. ಮೊದಲೆರಡು ಸುತ್ತಿನಲ್ಲಿ ನೀತೂ ಅವರಿಂದ ಭರ್ಜರಿ ಪಂಚ್‌ಗಳನ್ನು ತಿಂದ ಎದುರಾಳಿ ನಿಕೋಲ್ ಅವರು ಸುಸ್ತು ಹೊಡೆದರು. ಹೀಗಾಗಿ ಮೂರನೇ ಸುತ್ತಿನಲ್ಲಿ ಅವರು ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗಾಗಿ ನೀತೂಗೆ ಏಕಪಕ್ಷೀಯ ಜಯ ದೊರೆಯಿತು.
ಹರಿಯಾಣ ಮೂಲದ ೨೧ ವರ್ಷದ ನೀತೂ ಅವರು ಎರಡು ಬಾರಿ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಬಂಗಾರದ ಪದಕ ಗೆದ್ದವರು ಹಾಗೂ ಏಷ್ಯಾ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣ ಪದಕ ಗೆದ್ದಿದ್ದರು.
ಇದನ್ನೂ ಓದಿ | CWG-2022 | ಲವ್‌ಪ್ರೀತ್ ಸಿಂಗ್‌ಗೆ ಕಂಚಿನ ಪದಕ, ಭಾರತಕ್ಕೆ 14ನೇ ಮೆಡಲ್