ಬರ್ಮಿಂಗ್ಹಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಬಾಕ್ಸರ್ ನೀತೂ ಗಂಗಾಸ್ ಬಂಗಾರದ ಪದಕ ಗೆದ್ದುಕೊಂಡಿದ್ದಾರೆ. ೪೮ ಕೆ.ಜಿ ವಿಭಾಗದ ಫೈನಲ್‌ನಲ್ಲಿ ಅವರು ಇಂಗ್ಲೆಂಡ್‌ನ ಬಾಕ್ಸರ್ ಡೆಮಿ ಜೇಡ್ ರೆಜ್‌ಟಾನ್ ವಿರುದ್ಧ ೫-೦ ಅಂತರದಿಂದ ಜಯ ಸಾಧಿಸಿ ಬಂಗಾರದ ಪದಕ ತಮ್ಮದಾಗಿಸಿಕೊಂಡರು. ಈ ಮೂಲಕ ಅವರು ಚೊಚ್ಚಲ ಕಾಮನ್ವೆಲ್ತ್ ಗೇಮ್ಸ್‌ನಲ್ಲಿಯೇ ಬಂಗಾರದ ಪದಕ ಗೆದ್ದುಕೊಂಡ ಸಾಧನೆ ಮಾಡಿದರು.
ನೀತು ಸೇರಿದಂತೆ ನಾಲ್ಕು ಬಾಕ್ಸರ್‌ಗಳು ಭಾನುವಾರ ಬಾಕ್ಸಿಂಗ್‌ನಲ್ಲಿ ಫೈನಲ್‌ಗೇರಿದ್ದರು. ಅದರಲ್ಲಿ ನೀತೂ ಮೊದಲ ಬಂಗಾರ ಗೆದ್ದುಕೊಂಡಿದ್ದಾರೆ. ಬೌಟ್‌ನ ಆರಂಭದಿಂದಲೂ ಸಂಪೂರ್ಣವಾಗಿ ಪಾರಮ್ಯ ಸಾಧಿಸಿಕೊಂಡು ಬಂದ ನೀತೂ, ಎದುರಾಳಿ ಬಾಕ್ಸರ್‌ಗೆ ಅಂಕಗಳನ್ನು ಗಳಿಸಲು ಅವಕಾಶವೇ ನೀಡದೆ ಗೆಲವು ತಮ್ಮದಾಗಿಸಿಕೊಂಡರು.
ಮೊದಲ ಸುತ್ತಿನಲ್ಲಿ ೪-೦ ಅಂಕಗಳನ್ನು ಸಂಪಾದಿಸಿ ಅವರು ಎರಡನೇ ಸುತ್ತಿನಲ್ಲಿ ೫-೦ಗೆ ವಿಸ್ತರಿಸಿಕೊಂಡರು. ಮೂರನೇ ಸುತ್ತಿನಲ್ಲಿ ಯಾವುದೇ ಅಂಕಗಳನ್ನು ಸಂಪಾದಿಸದಿದ್ದರೂ ಆರಂಭಿಕ ಮುನ್ನಡೆಯೊಂದಿಗೆ ಜಯ ತಮ್ಮದಾಗಿಸಿಕೊಂಡರು.
ಇದು ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಚಿನ್ನದ ಪದಕವಾಗಿದೆ. ಇದಕ್ಕಿಂತ ಹಿಂದೆ ಜಾಸ್ಮಿನ್ ಲೊಂಬೊಬರಿಯಾ ಹಾಗೂ ರೋಹಿತ್ ಟೋಕಸ್ ಅವರು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದರು.
ಇದನ್ನೂ ಓದಿ | CWG- 2022 | ಬಾಕ್ಸರ್ ರೋಹಿತ್ ಟೋಕಸ್‌ಗೆ ಕಂಚಿನ ಪದಕ