Site icon Vistara News

World Cup 2023 : ಕೊರೊನಾ ಇಲ್ಲ; ಆದ್ರೂ ಪಾಕ್​- ಕಿವೀಸ್​ ವಿಶ್ವ ಕಪ್​ ಪಂದ್ಯಕ್ಕೆ ಫ್ಯಾನ್ಸ್​ಗೆ ಎಂಟ್ರಿ ಇಲ್ಲ!

World Cup 2023

ನವದೆಹಲಿ: ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ 2023ರ ಅಭ್ಯಾಸ ಪಂದ್ಯವೊಂದು ನಾಟಕೀಯ ತಿರುವುಗಳನ್ನು ಪಡೆಯುತ್ತಿದೆ. ಹೈದರಾಬಾದ್​ನಲ್ಲಿ ಆಯೋಜನೆಗೊಂಡಿರುವ ಈ ಪಂದ್ಯದ ಹಿಂದಿನಿಂದೂ ಅನಿಶ್ಚಿತತೆ ಆರಂಭಗೊಂಡಿದ್ದು, ಅದೀಗ ಮತ್ತಷ್ಟು ಬಿಗಡಾಯಿಸಿದೆ. ಇದೀಗ ಬಂದಿರುವ ಹೊಸ ಅಪ್​ಡೇಟ್ ಪ್ರಕಾರ ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶವಿಲ್ಲ ಎಂದು ಹೇಳಲಾಗಿದೆ. ಕೊರೊನಾ ಕಾಲದಲ್ಲಿ ಸೋಂಕು ಹರಡುವುದನ್ನು ತಪ್ಪಿಸಲು ಅಭಿಮಾನಿಗಳು ಇಲ್ಲದೇ ಟೂರ್ನಿಗಳನ್ನು ಆಯೋಜಿಸಲಾಗಿತ್ತು. ಇದೀಗ ಅದೇ ಪರಿಸ್ಥಿತಿ ಅಭ್ಯಾಸ ಪಂದ್ಯವೊಂದಕ್ಕೆ ಬಂದಿರುವುದು ಸೋಜಿಗ ಎನಿಸಿದೆ.

ಭದ್ರತೆ ಕೊಡಲು ಸಾಧ್ಯವಿಲ್ಲ ಎಂದು ಹೈದರಾಬಾದ್​​ ಪೊಲೀಸರು ಹೇಳಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ನಿರಂತರವಾಗಿ ಬದಲಾದ ವೇಳಾಪಟ್ಟಿ ಮತ್ತು ವಿವಿಧ ಹಬ್ಬಗಳೊಂದಿಗಿನ ಸಂಘರ್ಷದಿಂದಾಗಿ ಭದ್ರತೆಯ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಪಂದ್ಯಕ್ಕೆ ಭದ್ರತೆ ಕೊಡಲು ಪೊಲೀಸ್​ ಇಲಾಖೆ ನಿರಾಕರಿಸಿದೆ. ಹೀಗಾಗಿ ಬಿಸಿಸಿಐ ಈಗಾಗಲೇ ಪಂದ್ಯಕ್ಕೆ ಟಿಕೆಟ್ ಖರೀದಿಸಿದ ಅಭಿಮಾನಿಗಳಿಗೆ ಮರುಪಾವತಿಸಲು ಬುಕ್​ಮೂಐ ಶೋಗೆ ತಿಳಿಸಿದೆ.

ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಆಟವನ್ನು ಆಡಿಸಲಾಗುವುದ. ಟಿಕೆಟ್ ಕಾಯ್ದಿರಿಸಿದವರ ಹಣವನ್ನು ಮರುಪಾವತಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಇಂಡಿಯನ್ ಎಕ್​​ಪ್ರೆಸ್​ಗೆ ತಿಳಿಸಿದ್ದಾರೆ.

ಪಂದ್ಯದ ದಿನದಂದು ಸಿಬ್ಬಂದಿಯ ಕೊರತೆಯ ಬಗ್ಗೆ ಹೈದರಾಬಾದ್ ಪೊಲೀಸರು ಈಗಾಗಲೇ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷ್​ನಗೆ ಮಾಹಿತಿ ನೀಡಿದೆ. ಪಂದ್ಯವನ್ನು ಮುಂದೂಡುವಂತೆ ಮಂಡಳಿಯನ್ನು ಕೇಳಿದ್ದರು. ಆದಾಗ್ಯೂ ಬಿಸಿಸಿಐ ವೇಳಾಪಟ್ಟಿ ಬದಲಾವಣೆಗೆ ನಿರಾಕರಿಸಿತ್ತು. ಮೂಲ ವೇಳಾಪಟ್ಟಿಯ ಪ್ರಕಾರವೇ ಪಂದ್ಯಗಳನ್ನು ನಡೆಸಬೇಕಾಗಿರುವುದದರಿಂದ ಕ್ರೀಡಾಂಗಣಕ್ಕೆ ಅಭಿಮಾನಿಗಳ ಪ್ರವೇಶವನ್ನು ನಿರ್ಬಂಧಿಸಲು ನಿರ್ಧರಿಸಲಾಗಿದೆ.

ಎರಡು ದಿನದಲ್ಲಿ ಎರಡು ಪಂದ್ಯ

ಅಕ್ಟೋಬರ್ 9 ಮತ್ತು 10 ರಂದು ಹೈದರಾಬಾದ್​ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ 2023ರ ಎರಡು ಬ್ಯಾಕ್ ಟು ಬ್ಯಾಕ್ ಪಂದ್ಯಗಳ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಅಕ್ಟೋಬರ್ 10ರಂದು ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಇದು ಕೂಡ ಅಲ್ಲಿನ ಕ್ರಿಕೆಟ್ ಸಂಸ್ಥೆ ಹಾಗೂ ಪೊಲೀಸ್ ಇಲಾಖೆ ಮೇಲಿನ ಒತ್ತಡ ಹಚ್ಚಾಗುವಂತೆ ಮಾಡಿದೆ. ಬಿಸಿಸಿಐ ಈ ರೀತಿಯಾಗಿ ವೇಳಾಪಟ್ಟಿಯನ್ನು ನಿಗದಿ ಮಾಡಿರುವ ಕುರಿತು ಸ್ಥಳೀಯ ಮಟ್ಟದಲ್ಲಿ ಆಕ್ಷೇಪಗಳು ಎದ್ದಿವೆ.

ಇದನ್ನೂ ಓದಿ : ICC World Cup 2023: ಸೂಪರ್‌ಸ್ಟಾರ್‌ ರಜನಿಕಾಂತ್‌ಗೆ ಗೋಲ್ಡನ್​ ಟಿಕೆಟ್​ ನೀಡಿದ ಬಿಸಿಸಿಐ!

ಒಂದು ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು (3000) ನಿಯೋಜಿಸಲಾಗುವುದರಿಂದ, ಇನ್ನೊಂದು ದೊಡ್ಡ ಭಾಗವು ಪಾಕಿಸ್ತಾನ ಕ್ರಿಕೆಟ್ ತಂಡ ತಂಗಿರುವ ಹೋಟೆಲ್​ನಲ್ಲಿರಬೇಕಾಗುತ್ತದೆ. ಇದೇ ಸಮಸ್ಯೆಗೆ ಕಾರಣವೆಂದರೆ ವಿಶ್ವಕಪ್ ವೇಳಾಪಟ್ಟಿ ಬದಲಾವಣೆ. ಒಂಬತ್ತು ಪಂದ್ಯಗಳನ್ನು ಮರು ನಿಗದಿಪಡಿಸಲಾಗಿದೆ. ಅಕ್ಟೋಬರ್ 5ರಂದು ಅಹ್ಮದಾಬಾದ್​ನಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.

Exit mobile version