Site icon Vistara News

Champions Trophy : ಇನ್ನು ಮುಂದೆ ಚಾಂಪಿಯನ್ಸ್​ ಟ್ರೋಫಿಯಲ್ಲೂ ಟಿ20 ಪಂದ್ಯಗಳು

Champions Trophy

ಬೆಂಗಳೂರು: ಐಸಿಸಿ ಕ್ರಿಕೆಟ್ ವಿಶ್ವಕಪ್ ಹೊಸ ವೀಕ್ಷಕರ ದಾಖಲೆಗೆ ಸಜ್ಜಾಗಿದೆ. ಭಾರತದಲ್ಲಿ ನಡೆಯುತ್ತಿರುವ 50 ಓವರ್​ಗಳ ಕ್ರಿಕೆಟ್​ ಸ್ವರೂಪವು ಅದ್ಧೂರಿಯಾಗಿ ನಡೆಯುತ್ತಿದೆ. ಆದರೆ ವೀಕ್ಷಕರ ಸಂಖ್ಯೆಯನ್ನು ಹೊರತುಪಡಿಸಿ 50 ಓವರ್​ಗಳ ಸ್ವರೂಪ ಅಥವಾ ಏಕದಿನ ಪಂದ್ಯಗಳು ಇನ್ನು ಮುಂದೆ ಜನಪ್ರಿಯವಾಗಿರುವುದಿಲ್ಲ ಎಂದು ಹೇಳಲಾಗಿದೆ. ಭಾರತದಂತಹ ಕ್ರಿಕೆಟ್ ಪ್ರೇಮಿಗಳ ರಾಷ್ಟ್ರದಲ್ಲಿಯೂ ಭಾರತ ತಂಡವನ್ನು ಹೊರತುಪಡಿಸಿ ಉಳಿದ ಪಂದ್ಯಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿವೆ. ಇದು ಐಸಿಸಿಯ ಅಧಿಕೃತ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಅನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 (Champions Trophy ) (ಐಸಿಟಿ 2025) ಸ್ವರೂಪವನ್ನು 50 ಓವರ್​ಗಳ ಬದಲು ಟಿ 20 ಗೆ ಬದಲಾಯಿಸಲು ಪ್ರಸಾರಕರು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮೇಲೆ ಒತ್ತಡ ಹೇರುತ್ತಿದ್ದಾರೆ.

ಎಂಟು ತಂಡಗಳ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ನಿಗದಿಯಾಗಿದೆ. ಪಾಕಿಸ್ತಾನದ ಆತಿಥ್ಯದಲ್ಲಿ ಅದು ನಡೆಯುತ್ತಿದೆ. 8 ವರ್ಷಗಳ ಅಂತರದ ನಂತರ ಟೂರ್ನಿ ನಡೆಯಲಿದೆ. ದಿ ಗಾರ್ಡಿಯನ್ ವರದಿಯ ಪ್ರಕಾರ ಸ್ಟಾರ್ ಸ್ಪೋರ್ಟ್ಸ್ ಈಗಾಗಲೇ 20 ಓವರ್​ಗಳ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ಗಾಗಿ ಯೋಜನೆಗಳನ್ನು ರೂಪಿಸಿದೆ. ಡಿಸ್ನಿ ಸ್ಟಾರ್ 2023-27ನೇ ಸಾಲಿಗೆ 3 ಬಿಲಿಯನ್ ಡಾಲರ್ ಪಾವತಿಸುತ್ತಿದೆ. ಈ ಎರಡು ನೇರ ಪ್ರಸಾರಕರು ಟೂರ್ನಿಯ ಮಾದರಿಯನ್ನು ಬದಲಿಸಲು ಯೋಜನೆ ರೂಪಿಸಿದೆ.

ಇದನ್ನೂ ಓದಿ : ICC Champions Trophy 2025: ಆಂಗ್ಲರ ಚಾಂಪಿಯನ್ಸ್​ ಟ್ರೋಫಿ ಕನಸು ಜೀವಂತ

ಆದಾಗ್ಯೂ, ಡಿಸ್ನಿ ಸ್ಟಾರ್ ಅಧಿಕಾರಿಯೊಬ್ಬರು ದಿ ಗಾರ್ಡಿಯನ್​ಗೆ ಮಾಹಿತಿ ನೀಡಿದ್ದು, ಪ್ರಸಾರಕರು ಐಸಿಸಿಗೆ ಔಪಚಾರಿಕ ವಿನಂತಿಯನ್ನು ಸಲ್ಲಿಸಿಲ್ಲ ಎಂದು ತಿಳಿಸಲಾಗಿದೆ.

2025 ಸ್ವರೂಪವನ್ನು ಬದಲಾಯಿಸುತ್ತದೆಯೇ?

ಟಿ 20 ವಿಶ್ವಕಪ್ ಎರಡು ವರ್ಷಗಳಿಗೊಮ್ಮೆ ನಡೆಯುತ್ತಿರುವುದರಿಂದ, 8 ತಂಡಗಳ ಐಸಿಟಿ ಟಿ20 ಕ್ರಿಕೆಟ್​​ ಟೈಮ್​ಟೇಬಲ್ ಹೆಚ್ಚುತ್ತದೆ. 2024, 2026 ಮತ್ತು 2028ರಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಆದರೆ 50 ಓವರ್​ಗಳ ಸ್ವರೂಪವು ಮೊದಲಿನಷ್ಟು ಜನಪ್ರಿಯವಾಗಿಲ್ಲ. ಕ್ರಿಕೆಟ್ ವಿಶ್ವಕಪ್ 2023ರಲ್ಲಿ ಅರ್ಧ ಖಾಲಿ ಕ್ರೀಡಾಂಗಣಗಳು ಈ ಮಾತಿಗೆ ಸಾಕಷ್ಟು ಪುರಾವೆಗಳನ್ನು ನೀಡಿವೆ.

ಆದಾಗ್ಯೂ ಮುಂದಿನ ಏಕದಿನ ವಿಶ್ವಕಪ್ 2027ರಲ್ಲಿ ನಡೆಯಲಿದೆ. ಐಸಿಸಿ ಮುಂದಿನ ವಾರ ಅಹಮದಾಬಾದ್​ನಲ್ಲಿ ಸಭೆ ಸೇರಲಿದ್ದು, ಇದು ಚರ್ಚೆಯ ಭಾಗವಾಗಬಹುದು. ಆದಾಗ್ಯೂ, ಐಸಿಸಿ ಡಿಸ್ನಿ ಸ್ಟಾರ್​ನ ವಿನಂತಿಯನ್ನು ಅನುಮೋದಿಸಿದರೆ, ಅದು ಆಟಗಾರರಲ್ಲಿ ಜನಪ್ರಿಯವಲ್ಲದ ಸ್ವರೂಪವನ್ನು ಕೊನೆಗೊಳಿಸುವ ಸಾಧ್ಯತೆಯಿದೆ.

ಐಸಿಟಿ 2025 ಅರ್ಹ ತಂಡಗಳು

Exit mobile version