ಅಹಮದಾಬಾದ್: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ(ICC World Cup 2023)ಯ ಉದ್ಘಾಟನ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಈ ಕಾರ್ಯಕ್ರಮ ರದ್ದುಗೊಂಡಿದೆ ಎಂದು ವರದಿಯಾಗಿದೆ. ಟೂರ್ನಿ ಗುರುವಾರದಿಂದ ಆರಂಭಗೊಳ್ಳಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವೆ ಆರಂಭಿಕ ಪಂದ್ಯ ನಡೆಯಲಿದೆ. ಬಿಸಿಸಿಐ ಪೂರ್ವ ನಿರ್ಧಾರದಂತೆ ವರ್ಣರಂಜಿತ ಉದ್ಘಾಟನ ಸಮಾರಂಭವನ್ನು ಇಂದು ನಡೆಯಬೇಕಿತ್ತು. ಆದರೆ ಸದ್ಯದ ಮಾಹಿತಿ ಪ್ರಕಾರ ಇದು ರದ್ದುಗೊಂಡಿದೆ ಎಂದು ಹೇಳಲಾಗಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಉದ್ಘಾಟನಾ ಪಂದ್ಯ ನಡೆಯಲಿದೆ. ಆದರೆ ಈಗಿನ ಮಾಹಿತಿಯ ಪ್ರಕಾರ ಬಿಸಿಸಿಐ ಯಾವುದೇ ಉದ್ಘಟನಾ ಸಮಾರಂಭ ನಡೆಸುವುದಿಲ್ಲ ಎನ್ನಲಾಗಿದೆ. ರಣವೀರ್ ಸಿಂಗ್, ಅರ್ಜಿತ್ ಸಿಂಗ್, ತಮನ್ನಾ ಭಾಟಿಯಾ, ಶ್ರೇಯಾ ಘೋಷಾಲ್ ಮತ್ತು ಆಶಾ ಭೋಂಸ್ಲೆಯಂತಹ ಪ್ರಸಿದ್ಧ ಬಾಲಿವುಡ್ ಸ್ಟಾರ್ ಗಳನ್ನು ಒಳಗೊಂಡಿರುವ ಈ ಸಮಾರಂಭದಲ್ಲಿ ಪಟಾಕಿ ಮತ್ತು ಲೇಸರ್ ಪ್ರದರ್ಶನವನ್ನು ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ರೇವ್ ಸ್ಪೋರ್ಟ್ಸ್ ವೆಬ್ ಸೈಟ್ ವರದಿ ಪ್ರಕಾರ ಈ ಕಾರ್ಯಕ್ರಮ ರದ್ದುಗೊಂಡಿದೆ ಎನ್ನಲಾಗಿದೆ.
ಭಾರತ-ಪಾಕ್ ಪಂದ್ಯದ ವೇಳೆ ವರ್ಣರಂಜಿತ ಕಾರ್ಯಕ್ರಮ
ಅಕ್ಟೋಬರ್ 14 ರಂದು ಅಹಮದಾಬಾದ್ನಲ್ಲಿ ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದ ವೇಳೆ ಅದ್ಧೂರಿ ಸಮಾರಂಭವನ್ನು ಮಾಡಲು ಬಿಸಿಸಿಐ ಮುಂದಾಗಿದ್ದು ಇದೇ ಕಾರಣಕ್ಕೆ ಉದ್ಘಾಟನ ಸಮಾರಂಭವನ್ನು ರದ್ದು ಮಾಡಲಾಗಿದೆ ಎನ್ನಲಾಗ್ತಿದೆ. ನಾಳೆ ನಡೆಯುವ ಕಿವೀಸ್ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ ಐಸಿಸಿ ಮತ್ತು ಬಿಸಿಸಿಐ ಅಧಿಕಾರಿಗಳು ಹಾಗೂ ಸಣ್ಣ ಮಟ್ಟದ ಲೇಶರ್ ಶೋ ಮಾತ್ರ ಇರಲಿದೆ ಎಂದು ತಿಳಿದುಬಂದಿದೆ.
ರಾಯಭಾರಿಗಳ ಪಟ್ಟಿ
ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು 2023 ರ ಏಕದಿನ ಕ್ರಿಕೆಟ್ ವಿಶ್ವಕಪ್ನ (ICC World Cup 2023) ಜಾಗತಿಕ ರಾಯಭಾರಿಯಾಗಿ ಹೆಸರಿಸಲಾಗಿದೆ. ಭಾರತ ಆತಿಥ್ಯ ವಹಿಸಲಿರುವ ವಿಶ್ವಕಪ್ ಗೆ ಸಚಿನ್ ಅವರನ್ನು ಜಾಗತಿಕ ರಾಯಭಾರಿಯಾಗಿ ಹೆಸರಿಸಿರುವುದು ಸೂಕ್ತ ಗೌರವವಾಗಿದೆ. 12 ವರ್ಷಗಳ ಹಿಂದೆ 2011ರಲ್ಲಿ ತವರಿನಲ್ಲಿ ನಡೆದ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಕೊನೆಯ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದ್ದರು.
ಇದನ್ನೂ ಓದಿ ICC World Cup 2023: 12 ವಿಶ್ವಕಪ್ ಟೂರ್ನಿಯ ಕ್ವಿಕ್ ರೌಂಡಪ್
ವೆಸ್ಟ್ ಇಂಡೀಸ್ನ ವಿವಿಯನ್ ರಿಚರ್ಡ್ಸ್, ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ಇಂಗ್ಲೆಂಡ್ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್, ಆಸ್ಟ್ರೇಲಿಯಾದ ಆರೋನ್ ಫಿಂಚ್, ಶ್ರೀಲಂಕಾದ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್, ನ್ಯೂಜಿಲೆಂಡ್ನ ರಾಸ್ ಟೇಲರ್, ಭಾರತದ ಸುರೇಶ್ ರೈನಾ, ಮಿಥಾಲಿ ರಾಜ್ ಮತ್ತು ಪಾಕಿಸ್ತಾನದ ಆಲ್ರೌಂಡರ್ ಮೊಹಮ್ಮದ್ ಹಫೀಜ್ ಐಸಿಸಿ ರಾಯಭಾರಿಗಳ ಪಟ್ಟಿಯಲ್ಲಿದ್ದಾರೆ. ಇವರೆಲ್ಲರೂ ದೇಶಾದ್ಯಂತ ಆಯ್ದ ಪಂದ್ಯಗಳಿಗೆ ಹಾಜರಾಗಲಿದ್ದಾರೆ, ಇದು ಬಹುನಿರೀಕ್ಷಿತ ವಿಶ್ವಕಪ್ನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲಿದೆ.