Site icon Vistara News

IPL 2023 : ಸುರೇಶ್​ ರೈನಾ ರಚಿಸಿದ ತಂಡದಲ್ಲಿ ಧೋನಿಗೆ ಇಲ್ಲ ಸ್ಥಾನ!

No place for Dhoni in Suresh Raina's squad

#image_title

ಚೆನ್ನೈ : ಕ್ರಿಕೆಟ್​ ತಂಡದ ನಾಯಕತ್ವ ವಿಚಾರಕ್ಕೆ ಬಂದಾಗ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಎಲ್ಲರೂ ಫುಲ್​ ಮಾರ್ಕ್​ ಕೊಡುತ್ತಾರೆ ಕ್ರಿಕೆಟ್​ ಪಂಡಿತರು. ಎಂಥದ್ದೇ ತಂಡವನ್ನು ಕಟ್ಟಿಕೊಂಡು ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಅವರಿಗಿದೆ ಎನ್ನುವುದೇ ಎಲ್ಲರ ಅಭಿಪ್ರಾಯ. ಇಷ್ಟೆಲ್ಲ ಖ್ಯಾತಿ ಪಡೆದುಕೊಂಡಿರುವ ರಾಂಚಿ ಮೂಲದ ಆಟಗಾರನನ್ನು ತಮ್ಮ ಕಾಲ್ಪನಿಕ ತಂಡದಲ್ಲಿ ಸೇರಿಸಿಲ್ಲ ಸಿಎಸ್​ಕೆ ತಂಡದ ಮಾಜಿ ಆಲ್​ರೌಂಡರ್​ ಸುರೇಶ್​ ರೈನಾ. ಐಪಿಎಲ್​​ನಲ್ಲಿ ಬಹುಪಾಲು ಸಿಎಸ್​ಕೆ ಪರ ಆಡಿದ್ದ ರೈನಾ, ತಂಡದ ನಾಯಕ ಧೋನಿ ತಮ್ಮ ಜೀವದಗಳೆಯ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ, ತಾವು ಆಯ್ಕೆ ಮಾಡಿರುವ ತಂಡದಲ್ಲಿ ಅವರಿಗೇ ಸ್ಥಾನ ನೀಡದಿರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಐಪಿಎಲ್​ 2023ನೇ ಆವೃತ್ತಿ ಬಹುತೇಕ ಮುಕ್ತಾಯಗೊಂಡಿದೆ. ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್​ ಪಂದ್ಯ ಬಾಕಿ ಉಳಿದಿದೆ. ಹೀಗಾಗಿ ಹಿಂದಿನ ಪಂದ್ಯಗಳೆಲ್ಲವನ್ನೂ ಆಧರಿಸಿ ಸುರೇಶ್​ ರೈನಾ ಅತ್ಯುತ್ತಮ ಆಟಗಾರರ ತಂಡವನ್ನು ಸೂಚಿಸಿದ್ದಾರೆ. ಈ ತಂಡದಲ್ಲಿ ಧೋನಿಗೆ ನಾಯಕತ್ವವೂ ನೀಡಿಲ್ಲ. 11ರ ಬಗಳದಲ್ಲಿ ಅವಕಾಶವೇ ಕೊಟ್ಟಿಲ್ಲ. ಧೋನಿ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಏತನ್ಮಧ್ಯೆ, ರೈನಾ ತಮ್ಮ ತಂಡಕ್ಕೆ ಆಯ್ಕೆ ಮಾಡಿದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ವೆಸ್ಟ್ ಇಂಡೀಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನಿಕೋಲಸ್ ಪೂರನ್. ಯಶಸ್ವಿ ಜೈಸ್ವಾಲ್ ಮತ್ತು ಶುಬ್ಮನ್ ಗಿಲ್ ಅವರನ್ನು ತಂಡಕ್ಕೆ ಆರಂಭಿಕರಾಗಿ ಆಯ್ಕೆ ಮಾಡಿದರೆ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ನಂತರದ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಯಜುವೇಂದ್ರ ಚಾಹಲ್ ಆಡುವ ಬಳಗದಲ್ಲಿದ್ದಾರೆ.

ಕ್ಯಾಮರೂನ್ ಗ್ರೀನ್, ಋತುರಾಜ್ ಗಾಯಕ್ವಾಡ್, ಜಿತೇಶ್ ಶರ್ಮಾ, ಮಥೀಶಾ ಪತಿರಾನಾ ಮತ್ತು ಯಶ್ ಠಾಕೂರ್ ಅವರನ್ನು ರೈನಾ ತಮ್ಮ ತಂಡಕ್ಕೆ ಮೀಸಲು ಆಟಗಾರರರಾಗಿ ಆಯ್ಕೆ ಮಾಡಿದ್ದಾರೆ ರೈನಾ. ನಿರೂಪಕ ಆಕಾಶ್ ಚೋಪ್ರಾ ಮತ್ತು ಕ್ರಿಕೆಟ್​ ಪಂಡಿತ ಪಾರ್ಥಿವ್ ಪಟೇಲ್ ಮತ್ತು ಜಹೀರ್ ಖಾನ್ ಅವರೊಂದಿಗಿನ ಸಂವಾದದ ಸಮಯದಲ್ಲಿ ರೈನಾ ತಮ್ಮ ಆಯ್ಕೆಯನ್ನು ಬಹಿರಂಗಪಡಿಸಿದರು. ಪಾರ್ಥಿವ್ ಕೂಡ ತಮ್ಮ ತಂಡವನ್ನು ಆಯ್ಕೆ ಮಾಡುವಾಗ ಧೋನಿಯನ್ನು ಕೈಬಿಟ್ಟಿದ್ದಾರೆ. ಆದರೆ, ಜಹೀರ್​ಖಾನ್​ ಅವರ ತಂಡದಲ್ಲಿ ಧೋನಿಯೇ ನಾಯಕ.

ಇದನ್ನೂ ಓದಿ : IPL 2023: ನಿಷೇಧ ಭೀತಿಯಲ್ಲಿ ಎಂ.ಎಸ್​ ಧೋನಿ; ಆತಂಕದಲ್ಲಿ ಚೆನ್ನೈ ತಂಡ

ಕ್ವಾಲಿಫೈಯರ್ 1ರಲ್ಲಿ ಹಾರ್ದಿಕ್ ನೇತೃತ್ವದ ಗುಜರಾತ್​ ವಿರುದ್ಧ ಧೋನಿ ನೇತೃತ್ವದ ಸಿಎಸ್ಕೆ 15 ರನ್​​ಗಳ ವಿಜಯದೊಂದಿಗೆ ಫೈನಲ್​ ಪ್ರವೇಶಿಸಿದೆ. ಮತ್ತೊಂದೆಡೆ, ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 81 ರನ್​​ಗಳಿಂದ ಸೋಲಿಸಿತ್ತು.

ಜಿಟಿ 2022ರಲ್ಲಿ ತಮ್ಮ ಚೊಚ್ಚಲ ಐಪಿಎಲ್ ಋತುವಿನಲ್ಲಿ ಪ್ರಶಸ್ತಿ ಗೆದ್ದಿತ್ತು. ಮುಂಬೈ ಇಂಡಿಯನ್ಸ್ ದಾಖಲೆಯ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದರೆ, ಸಿಎಸ್ಕೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದೆ.

Exit mobile version