Site icon Vistara News

IPL 2024 : ರೋಹಿತ್​, ಪಾಂಡ್ಯ ಅಲ್ಲ; ಮುಂಬಯಿ ಇಂಡಿಯನ್ಸ್​ ತಂಡಕ್ಕೆ ಈ ಬಾರಿ ಹೊಸ ನಾಯಕ?

Rohit Sharma

ಮುಂಬಯಿ: ಐಪಿಎಲ್ 2024 ರ (IPL 2024) ಮಿನಿ ಹರಾಜಿಗೆ ಮುಂಚಿತವಾಗಿ ನಡೆದ ಹಾರ್ದಿಕ್ ಪಾಂಡ್ಯ ಅವರ ಟ್ರೇಡಿಂಗ್​​ ​ ಪ್ರಕ್ರಿಯೆ ಇಂಡಿಯನ್ಸ್​​ನಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ತಂಡಕ್ಕೆ ಯಾರು ನಾಯಕರಾಗುತ್ತಾರೆ ಎಂಬ ಚರ್ಚೆ ಶುರುವಾಗಿದೆ. ಕಾಯಂ ನಾಯಕ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಪಾಂಡ್ಯ ಅವರಿಗೆ ಪಟ್ಟ ಕಟ್ಟಲಾಗುತ್ತದೆ ಎಂದು ವರದಿಗಳು ಹೇಳಿವೆ. ಆದರೆ, ಭಾರತದ ಮಾಜಿ ಆಟಗಾರ ಅಜಯ್ ಜಡೇಜಾ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2024 ಋತುವಿನಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಜೂನ್ 04, 2024 ರಿಂದ ಪ್ರಾರಂಭವಾಗುವ ಟಿ 20 ವಿಶ್ವ ಕಪ್​ಗಾಗಿ ರೋಹಿತ್​ ಶರ್ಮಾ ಪೂರ್ಣ ಐಪಿಎಲ್ ಋತುವಿನಲ್ಲಿ ಆಡಬಾರದು. ಅವರು ಫಿಟ್ ಆಗಿರಬೇಕು. ಅದಕ್ಕಾಗಿ ಸೂರ್ಯಕುಮಾರ್ ಅವರಿಗೆ ನಾಯಕತ್ವ ನೀಡಬೇಕು ಎಂದು ಅವರು ಹೇಳಿದ್ದಾರೆ. “ಐಪಿಎಲ್ 2024 ರ ಋತುವಿನಲ್ಲಿ ರೋಹಿತ್ ಶರ್ಮಾ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದರೆ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ನಾಯಕನಾಗಬಹುದು” ಎಂದು ಜಡೇಜಾ ಕ್ರೀಡಾ ವೆಬ್​ಸೈಟ್​ಗೆ ಹೇಳಿದ್ದಾರೆ.

ಐಸಿಸಿ ಟೂರ್ನಮೆಂಟ್​ಗೆ ಫಿಟ್ ಮತ್ತು ಫ್ರೆಶ್​ ಆಗಿರವಲು ಭಾರತೀಯ ತಾರೆಯರು ಐಪಿಎಲ್ ಸಮಯದಲ್ಲಿ ವಿಶ್ರಾಂತಿ ಪಡೆಯಬೇಕು ಎಂದು ಜಡೇಜಾ ಅಭಿಪ್ರಾಯಪಟ್ಟಿದ್ದಾರೆ. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಬೆನ್ ಸ್ಟೋಕ್ಸ್ ಅವರಂತಹ ಸಾಕಷ್ಟು ವಿದೇಶಿ ಆಟಗಾರರು ರಾಷ್ಟ್ರೀಯ ಬದ್ಧತೆಗಳ ಕಾರಣಕ್ಕೆ ಐಪಿಎಲ್ ಋತುಗಳಿಂದ ಹೊರಗುಳಿದಿದ್ದಾರೆ. ಆದಾಗ್ಯೂ, ಭಾರತದಲ್ಲಿ ಐಪಿಎಲ್ ಋತುವಿನಲ್ಲಿ ಯಾವುದೇ ಆಟಗಾರರು ವಿಶ್ರಾಂತಿ ಪಡೆಯುವುದಿಲ್ಲ ಎಂಬುದಾಗಿ ಜಡೇಜಾ ಹೇಳಿದ್ದಾರೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸದ್ಯ ವೈಟ್ ಬಾಲ್ ಕ್ರಿಕೆಟ್​ನಿಂದ ಅನಿರ್ದಿಷ್ಟಾವಧಿ ವಿರಾಮದಲ್ಲಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ 20 ವಿಶ್ವಕಪ್​ನಲ್ಲಿ ಬಲಗೈ ಬ್ಯಾಟ್ಸ್ಮನ್ ಭಾರತವನ್ನು ಮುನ್ನಡೆಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೆ, ಐಪಿಎಲ್ 2024 ಋತುವಿನಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಗಮನ ಸೆಳೆದ ಸೂರ್ಯ

ಸೂರ್ಯಕುಮಾರ್ ಯಾದವ್ ಬಗ್ಗೆ ಹೇಳುವುದಾದರೆ, ಮುಂಬೈ ಇಂಡಿಯನ್ಸ್ ಆಟಗಾರ ಆಸ್ಟ್ರೇಲಿಯಾ ವಿರುದ್ಧದದ ಟಿ20 ಸರಣಿಯಲ್ಲಿ ಭಾರತ ತಮಡದ ನಾಯಕನಾಗಿ ತಮ್ಮ ಚೊಚ್ಚಲ ಟಿ 20 ಸರಣಿಯಲ್ಲೇ ಗಮನ ಸೆಳೆದಿದ್ದಾರೆ. ಸರಣಿಯಲ್ಲಿ ಭಾರತ 4-1 ಅಂತರದ ಗೆಲುವು ಸಾಧಿಸಿದೆ. ಈ ಸರಣಿಯಲ್ಲಿ ರವಿ ಬಿಷ್ಣೋಯ್, ರಿಂಕು ಸಿಂಗ್ ಮತ್ತು ಮುಖೇಶ್ ಕುಮಾರ್ ಅವರಂತಹ ಕೆಲವು ಯುವ ಆಟಗಾರರಿಂದ ಉತ್ತಮ ಪ್ರದರ್ಶನ ನೀಡಿದ್ದಾರೆ.

ಇದನ್ನೂ ಓದಿ : MS Dhoni : ಐಪಿಎಲ್​ಗೆ ಮೊದಲು ಇಷ್ಟ ದೇವತೆಯ ದರ್ಶನ ಪಡೆದ ಎಂ ಎಸ್ ಧೋನಿ

ಪ್ರಸ್ತುತ, ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ಉಪನಾಯಕರಾಗಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ಕಳೆದ ಋತುವಿನಲ್ಲಿ ಕೆಲವು ಪಂದ್ಯಗಳಿಗೆ ಫ್ರಾಂಚೈಸಿಯನ್ನು ಮುನ್ನಡೆಸಿದ್ದರು. ಆದರೆ ಎಂಐ ಅವರಿಗೆ ಪೂರ್ಣಾವಧಿ ನಾಯಕತ್ವವನ್ನು ನೀಡುತ್ತದೆಯೇ ಎಂಬುದು ಪ್ರತಿಯೊಬ್ಬರೂ ತಿಳಿದುಕೊಳ್ಳಲು ಬಯಸುವ ಪ್ರಶ್ನೆಯಾಗಿದೆ.

Exit mobile version