IPL 2024 : ರೋಹಿತ್​, ಪಾಂಡ್ಯ ಅಲ್ಲ; ಮುಂಬಯಿ ಇಂಡಿಯನ್ಸ್​ ತಂಡಕ್ಕೆ ಈ ಬಾರಿ ಹೊಸ ನಾಯಕ? - Vistara News

ಕ್ರಿಕೆಟ್

IPL 2024 : ರೋಹಿತ್​, ಪಾಂಡ್ಯ ಅಲ್ಲ; ಮುಂಬಯಿ ಇಂಡಿಯನ್ಸ್​ ತಂಡಕ್ಕೆ ಈ ಬಾರಿ ಹೊಸ ನಾಯಕ?

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಭಾರತ 4-1 ಅಂತರದಿಂದ ಗೆದ್ದುಕೊಂಡ ನಂತರ ನಾಯಕ ಸೂರ್ಯಕುಮಾರ್ ಯಾದವ್ ಐಪಿಎಲ್​ನಲ್ಲಿ (IPL 2024 ) ಮುಂಬಯಿ ತಂಡದ ನಾಯಕತ್ವದ ರೇಸ್​ನಲ್ಲಿ ನಿಂತಿದ್ದಾರೆ.

VISTARANEWS.COM


on

Rohit Sharma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಐಪಿಎಲ್ 2024 ರ (IPL 2024) ಮಿನಿ ಹರಾಜಿಗೆ ಮುಂಚಿತವಾಗಿ ನಡೆದ ಹಾರ್ದಿಕ್ ಪಾಂಡ್ಯ ಅವರ ಟ್ರೇಡಿಂಗ್​​ ​ ಪ್ರಕ್ರಿಯೆ ಇಂಡಿಯನ್ಸ್​​ನಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ. ತಂಡಕ್ಕೆ ಯಾರು ನಾಯಕರಾಗುತ್ತಾರೆ ಎಂಬ ಚರ್ಚೆ ಶುರುವಾಗಿದೆ. ಕಾಯಂ ನಾಯಕ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸಿ ಪಾಂಡ್ಯ ಅವರಿಗೆ ಪಟ್ಟ ಕಟ್ಟಲಾಗುತ್ತದೆ ಎಂದು ವರದಿಗಳು ಹೇಳಿವೆ. ಆದರೆ, ಭಾರತದ ಮಾಜಿ ಆಟಗಾರ ಅಜಯ್ ಜಡೇಜಾ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2024 ಋತುವಿನಲ್ಲಿ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಜೂನ್ 04, 2024 ರಿಂದ ಪ್ರಾರಂಭವಾಗುವ ಟಿ 20 ವಿಶ್ವ ಕಪ್​ಗಾಗಿ ರೋಹಿತ್​ ಶರ್ಮಾ ಪೂರ್ಣ ಐಪಿಎಲ್ ಋತುವಿನಲ್ಲಿ ಆಡಬಾರದು. ಅವರು ಫಿಟ್ ಆಗಿರಬೇಕು. ಅದಕ್ಕಾಗಿ ಸೂರ್ಯಕುಮಾರ್ ಅವರಿಗೆ ನಾಯಕತ್ವ ನೀಡಬೇಕು ಎಂದು ಅವರು ಹೇಳಿದ್ದಾರೆ. “ಐಪಿಎಲ್ 2024 ರ ಋತುವಿನಲ್ಲಿ ರೋಹಿತ್ ಶರ್ಮಾ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದರೆ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ನಾಯಕನಾಗಬಹುದು” ಎಂದು ಜಡೇಜಾ ಕ್ರೀಡಾ ವೆಬ್​ಸೈಟ್​ಗೆ ಹೇಳಿದ್ದಾರೆ.

ಐಸಿಸಿ ಟೂರ್ನಮೆಂಟ್​ಗೆ ಫಿಟ್ ಮತ್ತು ಫ್ರೆಶ್​ ಆಗಿರವಲು ಭಾರತೀಯ ತಾರೆಯರು ಐಪಿಎಲ್ ಸಮಯದಲ್ಲಿ ವಿಶ್ರಾಂತಿ ಪಡೆಯಬೇಕು ಎಂದು ಜಡೇಜಾ ಅಭಿಪ್ರಾಯಪಟ್ಟಿದ್ದಾರೆ. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಬೆನ್ ಸ್ಟೋಕ್ಸ್ ಅವರಂತಹ ಸಾಕಷ್ಟು ವಿದೇಶಿ ಆಟಗಾರರು ರಾಷ್ಟ್ರೀಯ ಬದ್ಧತೆಗಳ ಕಾರಣಕ್ಕೆ ಐಪಿಎಲ್ ಋತುಗಳಿಂದ ಹೊರಗುಳಿದಿದ್ದಾರೆ. ಆದಾಗ್ಯೂ, ಭಾರತದಲ್ಲಿ ಐಪಿಎಲ್ ಋತುವಿನಲ್ಲಿ ಯಾವುದೇ ಆಟಗಾರರು ವಿಶ್ರಾಂತಿ ಪಡೆಯುವುದಿಲ್ಲ ಎಂಬುದಾಗಿ ಜಡೇಜಾ ಹೇಳಿದ್ದಾರೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸದ್ಯ ವೈಟ್ ಬಾಲ್ ಕ್ರಿಕೆಟ್​ನಿಂದ ಅನಿರ್ದಿಷ್ಟಾವಧಿ ವಿರಾಮದಲ್ಲಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಟಿ 20 ವಿಶ್ವಕಪ್​ನಲ್ಲಿ ಬಲಗೈ ಬ್ಯಾಟ್ಸ್ಮನ್ ಭಾರತವನ್ನು ಮುನ್ನಡೆಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಲ್ಲದೆ, ಐಪಿಎಲ್ 2024 ಋತುವಿನಲ್ಲಿ ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಗಮನ ಸೆಳೆದ ಸೂರ್ಯ

ಸೂರ್ಯಕುಮಾರ್ ಯಾದವ್ ಬಗ್ಗೆ ಹೇಳುವುದಾದರೆ, ಮುಂಬೈ ಇಂಡಿಯನ್ಸ್ ಆಟಗಾರ ಆಸ್ಟ್ರೇಲಿಯಾ ವಿರುದ್ಧದದ ಟಿ20 ಸರಣಿಯಲ್ಲಿ ಭಾರತ ತಮಡದ ನಾಯಕನಾಗಿ ತಮ್ಮ ಚೊಚ್ಚಲ ಟಿ 20 ಸರಣಿಯಲ್ಲೇ ಗಮನ ಸೆಳೆದಿದ್ದಾರೆ. ಸರಣಿಯಲ್ಲಿ ಭಾರತ 4-1 ಅಂತರದ ಗೆಲುವು ಸಾಧಿಸಿದೆ. ಈ ಸರಣಿಯಲ್ಲಿ ರವಿ ಬಿಷ್ಣೋಯ್, ರಿಂಕು ಸಿಂಗ್ ಮತ್ತು ಮುಖೇಶ್ ಕುಮಾರ್ ಅವರಂತಹ ಕೆಲವು ಯುವ ಆಟಗಾರರಿಂದ ಉತ್ತಮ ಪ್ರದರ್ಶನ ನೀಡಿದ್ದಾರೆ.

ಇದನ್ನೂ ಓದಿ : MS Dhoni : ಐಪಿಎಲ್​ಗೆ ಮೊದಲು ಇಷ್ಟ ದೇವತೆಯ ದರ್ಶನ ಪಡೆದ ಎಂ ಎಸ್ ಧೋನಿ

ಪ್ರಸ್ತುತ, ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ಉಪನಾಯಕರಾಗಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ಕಳೆದ ಋತುವಿನಲ್ಲಿ ಕೆಲವು ಪಂದ್ಯಗಳಿಗೆ ಫ್ರಾಂಚೈಸಿಯನ್ನು ಮುನ್ನಡೆಸಿದ್ದರು. ಆದರೆ ಎಂಐ ಅವರಿಗೆ ಪೂರ್ಣಾವಧಿ ನಾಯಕತ್ವವನ್ನು ನೀಡುತ್ತದೆಯೇ ಎಂಬುದು ಪ್ರತಿಯೊಬ್ಬರೂ ತಿಳಿದುಕೊಳ್ಳಲು ಬಯಸುವ ಪ್ರಶ್ನೆಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

WPL 2024: ಬಲಿಷ್ಠ ಮುಂಬೈಗೆ ಸೋಲುಣಿಸಿ ಗೆಲುವಿನ ಖಾತೆ ತೆರೆದ ಯುಪಿ ವಾರಿಯರ್ಸ್

ಯುಪಿ ವಾರಿಯರ್ಸ್(UP Warriorz)​ ತಂಡ 2ನೇ ಆವೃತ್ತಿಯ ಡಬ್ಲ್ಯೂಪಿಎಲ್ (WPL 2024) ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಕಂಡಿದೆ.

VISTARANEWS.COM


on

Mumbai Indians Women vs UP Warriorz
Koo

ಬೆಂಗಳೂರು: ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಯುಪಿ ವಾರಿಯರ್ಸ್(UP Warriorz)​ ತಂಡ 2ನೇ ಆವೃತ್ತಿಯ ಡಬ್ಲ್ಯೂಪಿಎಲ್ (WPL 2024) ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಕಂಡಿದೆ. ಬುಧವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್(Mumbai Indians)​ ತಂಡವನ್ನು 7 ವಿಕೆಟ್​ಗಳಿಂದ ಮಣಿಸಿ ಈ ಸಾಧನೆಗೈದಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್(Mumbai Indians vs UP Warriorz) ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 161 ರನ್​ ಬಾರಿಸಿತು. ಜವಾಬಿತ್ತ ಯುಪಿ ವಾರಿಯರ್ಸ್16.3​ ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 163 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಇದಕ್ಕೂ ಮುನ್ನ ಆಡಿದ 2 ಪಂದ್ಯಗಳಲ್ಲಿ ಯುಪಿ ಹೀನಾಯ ಸೋಲು ಕಂಡಿತ್ತು.

​ಕಿರಣ್-ಅಲಿಸ್ಸಾ ಉತ್ತಮ ಜತೆಯಾಟ


ಗುರಿ ಬೆನ್ನಟ್ಟಿದ ಯುಪಿ ತಂಡಕ್ಕೆ ನಾಯಕಿ ಅಲಿಸ್ಸಾ ಹೀಲಿ ಮತ್ತು ಹಾರ್ಡ್​ ಹಿಟ್ಟರ್​ ಕಿರಣ್ ನವಗಿರೆ ಉತ್ತಮ ಜತೆಯಾಟದ ಮೂಲಕ ಭರ್ಜರಿ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್​ಗೆ 94 ರನ್​ಗಳನ್ನು ರಾಶಿ ಹಾಕಿತು. 6 ಬೌಂಡರಿ ಮತ್ತು 4 ಸಿಕ್ಸರ್​ ಬಾರಿಸಿದ ಕಿರಣ್ ನವಗಿರೆ 57 ರನ್​ ಗಳಿಸಿ ಅಮೆಲಿಯಾ ಕೆರ್​ಗೆ ವಿಕೆಟ್​ ಒಪ್ಪಿಸಿದರು. ಈ ವಿಕೆಟ್​ ಪತನಗೊಂಡು 3 ರನ್​ ಒಟ್ಟುಗೂಡುವಷ್ಟರಲ್ಲಿ ಅಲಿಸ್ಸಾ ಹೀಲಿ ವಿಕೆಟ್​ ಕೂಡ ಉದುರಿತು. ಅವರ ಗಳಿಕೆ 33. ಉಭಯ ಆಟಗಾರ್ತಿಯರ ವಿಕೆಟ್​ ಕಳೆದುಕೊಂಡ ಬಳಿಕ ಆಡಲಿಳಿದ ಗ್ರೇಸ್ ಹ್ಯಾರಿಸ್ ಮತ್ತು ದೀಪ್ತಿ ಶರ್ಮ(ಅಜೇಯ 27) ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಉಭಯ ಆಟಗಾರ್ತಿಯರು ಕೂಡ ಅಜೇಯರಾಗಿ ಉಳಿದರು. ಅಗ್ರೆಸಿವ್​ ಬ್ಯಾಟಿಂಗ್​ ನಡೆಸಿದ ಗ್ರೇಸ್ ಹ್ಯಾರಿಸ್ ಕೇವಲ 17 ಎಸೆತಗಳಿಂದ 38* ರನ್​ ಚಚ್ಚಿದರು. ಮುಂಬೈ ಪರ ಇಸ್ಸಿ ವಾಂಗ್ 2 ವಿಕೆಟ್​ ಪಡೆದರು.

ಇದನ್ನೂ ಓದಿ WPL 2024 : ಆರ್​ಸಿಬಿ ತಂಡಕ್ಕೆ ಸತತ ಎರಡನೇ ಜಯ, ಗುಜರಾತ್​ಗೆ ಹೀನಾಯ ಸೋಲು

ಮ್ಯಾಥ್ಯೂಸ್ ಅರ್ಧಶತಕ ವ್ಯರ್ಥ


ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಮುಂಬೈ ತಂಡಕ್ಕೆ ವೆಸ್ಟ್​ ಇಂಡೀಸ್​ನ ಆಲ್​ರೌಂಡರ್​ ಹೀಲಿ ಮ್ಯಾಥ್ಯೂಸ್​ ಅರ್ಧಶತಕ ಬಾರಿಸಿ ಆಸರೆಯಾದರು. 47 ಎಸೆತ ಎದುರಿಸಿದ ಅವರು 9 ಬೌಂಡರಿ ಮತ್ತು ಒಂದು ಸಿಕ್ಸರ್​ ನೆರವಿನಿಂದ 55 ರನ್​ ಬಾರಿಸಿದರು. ಇವರ ಜತೆಗಾರ್ತಿ ಯಾಸ್ತಿಕಾ ಭಾಟಿಯಾ 26ರನ್​ ಬಾರಿಸಿದರು.

ಹಂಗಾಮಿ ನಾಯಕಿ ನ್ಯಾಟ್‌ ಸ್ಕಿವರ್‌ ಬ್ರಂಟ್‌ ಅವರು ಈ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಆಟ ಪ್ರದರ್ಶಿಸುವಲ್ಲಿ ವಿಫಲರಾದರು. 2 ಬೌಂಡರಿ ಬಾರಿಸಿ 19ರನ್​ಗೆ ಸೀಮಿತರಾದರು. ಆ ಬಳಿಕ ಬಂದ ಅಮೆಲಿಯಾ ಕೆರ್ 23 ರನ್​ ಗಳಿಸಿದರು. ಉಳಿದಂತೆ ಯಾರು ಹೆಚ್ಚುಹೊತ್ತು ಕ್ರೀಸ್​ ಆಕ್ರಮಿಸಲು ಯಶಸ್ಸು ಕಾಣಲಿಲ್ಲ. ತಂಡದ ಖಾಯಂ ನಾಯಕಿ ಹರ್ಮನ್​ಪ್ರೀತ್​ ಕೌರ್​ ಅವರು ಗಾಯದಿಂದಾಗಿ ಈ ಪಂದ್ಯದಿಂದ ಹೊರಗುಳಿದರು. ಯುಪಿ ವಾರಿಯರ್ಸ್ ಪರ ಬೌಲಿಂಗ್​ ಮಾಡಿದ 5 ಮಂದಿಯೂ ತಲಾ ಒಂದೊಂದು ವಿಕೆಟ್​ ಪಡೆದರು.

Continue Reading

ಕ್ರೀಡೆ

BCCI Annual Contract: ಚಹಲ್​ ಸೇರಿ ಹಲವು ಅನುಭವಿಗಳಿಗೆ ಕೊಕ್​; ರಾಹುಲ್​, ಗಿಲ್​ಗೆ ಬೋನಸ್

2022-23 ಋತುವಿನಲ್ಲಿ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದ ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ, ಉಮೇಶ್ ಯಾದವ್, ಶಿಖರ್ ಧವನ್, ದೀಪಕ್ ಹೂಡಾ, ಯಜುವೇಂದ್ರ ಚಹಲ್ ಮತ್ತು ಅಜಿಂಕ್ಯ ರಹಾನೆ ಈ ಬಾರಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ

VISTARANEWS.COM


on

team india
Koo

ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2023-24ರ ಋತುವಿಗಾಗಿ ಕೇಂದ್ರ ಗುತ್ತಿಗೆ(BCCI Annual Contract) ಪಡೆದ ಆಟಗಾರರ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಪಡೆದ 11 ಆಟಗಾರರು ಅತ್ಯಂತ ದೊಡ್ಡ ಫಲಾನುಭವಿಯಾಗಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಎಡಗೈ ಬ್ಯಾಟರ್​ ಯಶಸ್ವಿ ಜೈಸ್ವಾಲ್ ತಮ್ಮ ಚೊಚ್ಚಲ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಅನುಭವಿ ಆಟಗಾರರನ್ನು ಹಿಂದಿಕ್ಕಿ ‘ಬಿ’ ಪಡೆದಿದ್ದಾರೆ. ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ಮುಖೇಶ್ ಕುಮಾರ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ರಜತ್ ಪಾಟಿದಾರ್ ಈ ಬಾರಿಯ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಚೊಚ್ಚಲ ಸ್ಥಾನ ಪಡೆದ ಆಟಗಾರರಾಗಿದ್ದಾರೆ.

ಹಿರಿಯ ಆಟಗಾರರಿಗೆ ಕೊಕ್​


2022-23 ಋತುವಿನಲ್ಲಿ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಸ್ಥಾನ ಪಡೆದಿದ್ದ ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ, ಉಮೇಶ್ ಯಾದವ್, ಶಿಖರ್ ಧವನ್, ದೀಪಕ್ ಹೂಡಾ, ಯಜುವೇಂದ್ರ ಚಹಲ್ ಮತ್ತು ಅಜಿಂಕ್ಯ ರಹಾನೆ ಈ ಬಾರಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇವರನ್ನು ಪ್ರಸಕ್ತ ಸಾಲಿನ ಆಟಗಾರರ ಒಪ್ಪಂದ ಪಟ್ಟಿಯಿಂದ ಬಿಸಿಸಿಐ ಕೈಬಿಟ್ಟಿದೆ. ಆಯ್ಕೆ ಸಮಿತಿಯು ವೇಗದ ಬೌಲಿಂಗ್ ಒಪ್ಪಂದಗಳಿಗಾಗಿ ಚೊಚ್ಚಲ ಟೆಸ್ಟ್​ ಆಡಿದ ಆಕಾಶ್ ದೀಪ್, ವಿಜಯ್ ಕುಮಾರ್ ವೈಶಾಕ್, ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ವಿದ್ವತ್ ಕಾವೇರಪ್ಪ ಅವರ ಹೆಸರನ್ನು ಶಿಫಾರಸು ಮಾಡಿದೆ.

ಗಿಲ್​, ರಾಹುಲ್​ಗೆ ಭಡ್ತಿ


ಕಳೆದ ಬಾರಿಯಂತೆ ಈ ಬಾರಿಯೂ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ರವಿಂದ್ರ ಜಡೇಜಾ ಅವರನ್ನು ಎ+ ಗುತ್ತಿಗೆಯ ಪಟ್ಟಿಯಲ್ಲಿ ಪರಿಗಣಿಸಲಾಗಿದೆ. ಈ ಪಟ್ಟಿಗೆ ಯಾವುದೇ ಹೊಸ ಆಟಗಾರನ ಸೇರ್ಪಡೆಯಾಗಿಲ್ಲ. ಎ ಗ್ರೇಡ್​ನಲ್ಲಿ ಕೆಲ ಬದಲಾವಣೆಗಳು ಸಂಭವಿಸಿದೆ. ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಶುಭಮನ್ ಗಿಲ್ ಅವರಿಗೆ ‘ಎ’ ಗ್ರೇಡ್‌ ಪಟ್ಟಿಗೆ ಭಡ್ತಿ ನೀಡಲಾಗಿದೆ. ಕಳೆದ ವರ್ಷ ಉಭಯ ಆಟಗಾರರು ‘ಬಿ’ ಗ್ರೇಡ್​ನಲ್ಲಿದ್ದರು.

ಇದನ್ನೂ ಓದಿ ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಕಿಕ್​ ಔಟ್​

ಇಶಾನ್​-ಅಯ್ಯರ್​ಗೆ ತಕ್ಕ ಪಾಠ ಕಲಿಸಿದ ಬಿಸಿಸಿಐ


ಹಲವು ಬಾರಿ ದೇಶಿಯ ಕ್ರಿಕೆಟ್​ನಲ್ಲಿ ಭಾಗಿಯಾಗುವಂತೆ ಬಿಸಿಸಿಐ ನೀಡಿದ ಸೂಚನೆಯ ಮೇರೆಗೂ ಇದನ್ನು ಗಂಭೀರವಾಗಿ ಪರಿಗಣಿಸಿದ ಇಶಾನ್‌ ಹಾಗೂ ಶ್ರೇಯಸ್‌ ಅವರನ್ನು ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟಿದೆ. ಈ ಮೂಲಕ ಆಟಗಾರರ ತಪ್ಪಿಗೆ ತಕ್ಕ ಪಾಠ ಕಲಿಸಿದೆ.

ಬಿಸಿಸಿಐ ಕೇಂದ್ರ ಒಪ್ಪಂದಗಳ ಪಟ್ಟಿ

ಗ್ರೇಡ್ A+ (4 ಕ್ರಿಕೆಟಿಗರು): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಮತ್ತು ರವೀಂದ್ರ ಜಡೇಜಾ.

ಗ್ರೇಡ್ ಎ (6 ಕ್ರಿಕೆಟಿಗರು): ಆರ್ ಅಶ್ವಿನ್, ಮೊಹಮ್ಮದ್​ ಶಮಿ, ಮೊಹಮ್ಮದ್ ಸಿರಾಜ್, ಕೆ.ಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.

ಗ್ರೇಡ್ ಬಿ (5 ಕ್ರಿಕೆಟಿಗರು) ಸೂರ್ಯಕುಮಾರ್ ಯಾದವ್, ರಿಷಭ್​ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.

ಗ್ರೇಡ್ ಸಿ (15 ಕ್ರಿಕೆಟಿಗರು) ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ.ಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.

Continue Reading

ಕ್ರೀಡೆ

Hanuma Vihari: ಎಸಿಎ ಆರೋಪಕ್ಕೆ ತಿರುಗೇಟು ನೀಡಿದ ಹನುಮ ವಿಹಾರಿ

ಆಂಧ್ರ ಕ್ರಿಕೆಟ್ ಸಂಸ್ಥೆ ಮಾಡಿದ ಆರೋಪಕ್ಕೆ ಇದೀಗ ಮತ್ತೆ ಪ್ರತಿಕ್ರಿಯೆ ನೀಡಿರುವ ವಿಹಾರಿ, “ತಂಡದಲ್ಲಿ ನಾನು ನಾಯಕ ಹಾಗೂ ಆಟಗಾರನಾಗಿ ಮುಂದುವರಿಯಬೇಕೆಂದು ಎಲ್ಲ 15 ಆಟಗಾರರ ಒಪ್ಪಿಗೆ ಪಡೆಯುವ ಮೂಲಕವೇ ಪತ್ರವನ್ನು ಬರೆದಿದ್ದೇನೆ ಎಂದು ಹೇಳಿದ್ದಾರೆ.

VISTARANEWS.COM


on

Hanuma Vihari
Koo

ಹೈದರಾಬಾದ್: ಟೀಮ್​ ಇಂಡಿಯಾದ ಆಟಗಾರ ಹನುಮ ವಿಹಾರಿ(Hanuma Vihari) ಮತ್ತು ಆಂಧ್ರಪ್ರದೇಶ ಕ್ರಿಕೆಟ್ ಅಸೋಸಿಯೇಶನ್(Andhra Cricket Association) ನಡುವಣ ಸಮರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸಹ ಆಟಗಾರರನ್ನು ಬೆದರಿಸಿ ಸಹಿ ಮಾಡಿಸಿದ್ದಾರೆಂದು ಆಂಧ್ರ ಕ್ರಿಕೆಟ್‌ ಮಂಡಳಿ(ACA) ಮಾಡಿದ ಆರೋಪವನ್ನು ವಿಹಾರಿ ತಳ್ಳಿ ಹಾಕಿದ್ದಾರೆ.

2 ದಿನಗಳ ಹಿಂದೆ ಹನುಮ ವಿಹಾರಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡಿ, ಬಂಗಾಳ ವಿರುದ್ಧದ ಮೊದಲ ಪಂದ್ಯದಲ್ಲಿ ನಾನು ತಂಡದ ನಾಯಕನಾಗಿದ್ದೆ. ಆ ಆಟದ ಸಮಯದಲ್ಲಿ ನಾನು 17 ನೇ ಆಟಗಾರನ ಮೇಲೆ ಕೂಗಾಡಿದ್ದೆ. ಅವನು ತನ್ನ ತಂದೆಗೆ (ರಾಜಕಾರಣಿಯಾಗಿದ್ದ) ದೂರು ನೀಡಿದ್ದ, ಪ್ರತಿಯಾಗಿ ಅವರ ತಂದೆ ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಸೋಸಿಯೇಷನ್​ಗೆ ಕೇಳಿದರು. ಬಂಗಾಳ ವಿರುದ್ದದ ಪಂದ್ಯದಲ್ಲಿ ನಾವು ಗೆದ್ದರೂ, ನನ್ನ ಯಾವುದೇ ತಪ್ಪು ಇಲ್ಲದ ಹೊರತಾಗಿಯೂ ರಾಜೀನಾಮೆ ಕೊಡಲು ನನ್ನಲ್ಲಿ ಅಸೋಸಿಯೇಶನ್​ ಕೇಳಿಕೊಂಡಿತು. ನಾನು ವೈಯಕ್ತಿಕವಾಗಿ ಆ ಆಟಗಾರನಿಗೆ ಏನೂ ಹೇಳಿರಲಿಲ್ಲ. ಆದರೆ ಕಳೆದ ಏಳು ವರ್ಷಗಳಲ್ಲಿ ಐದು ಬಾರಿ ತಂಡವನ್ನು ನಾಕೌಟ್​ಗೆ ತಲುಪಿಸಿದ, ತಂಡಕ್ಕೆ ಎಲ್ಲವನ್ನೂ ಕೊಟ್ಟ ಆಟಗಾರನಿಗಿಂತ ಆ ಆಟಗಾರನೇ ಮಂಡಳಿಗೆ ಪ್ರಿಯವಾದ. ನಾನು ಮುಜುಗರ ಅನುಭವಿಸಿದೆ, ಆದರೆ ನಾನು ಆಟ ಮತ್ತು ನನ್ನ ತಂಡವನ್ನು ಗೌರವಿಸುವ ಏಕೈಕ ಕಾರಣದಿಂದ ಈ ಋತುವಿನಲ್ಲಿ ಆಟವಾಡುವುದನ್ನು ಮುಂದುವರೆಸಿದೆ ಎಂದು ವಿಹಾರಿ ಬರೆದುಕೊಂಡಿದ್ದರು.

ವಿಹಾರಿ ಮಾಡಿದ ಆರೋಪಗಳ ಬಗ್ಗೆ ಎಸಿಎ ತನಿಖೆ ನಡೆಸುವುದಾಗಿ ತಿಳಿಸಿತ್ತು. ವಿಹಾರಿ ನಾಯಕತ್ವದ ನಿರ್ಗಮನವು ವೃತ್ತಿಪರ ಪರಿಗಣನೆಯ ಪರಿಣಾಮವಾಗಿದೆಯೇ ಹೊರತು ರಾಜಕೀಯ ಹಸ್ತಕ್ಷೇಪವಲ್ಲ ಎಂದು ಹೇಳಿತ್ತು. ಜತೆಗೆ ಹನುಮ ವಿಹಾರಿಯ ದುರ್ವತನೆಯ ನಡೆಯನ್ನು ಉಲ್ಲೇಖಿಸಿ ವಿವಿಧ ವಲಯಗಳಿಂದ ದೂರುಗಳನ್ನು ಸ್ವೀಕರಿಸಿದ್ದೇವೆ. ಹೀಗಾಗಿ ನಾಯಕತ್ವದಿಂದ ಅವರನ್ನು ಕೆಳಗಿಳಿಸಲಾಗಿದೆ. ವಿಹಾರಿ ಆಟಗಾರರನ್ನು ಬೆದರಿಸಿ ಸಹಿ ಮಾಡಿಸಿದ್ದಾರೆ ಎಂದು ಆಂಧ್ರ ಕ್ರಿಕೆಟ್ ಸಂಸ್ಥೆ ಆರೋಪ ಮಾಡಿತ್ತು.

ಇದನ್ನೂ ಓದಿ BCCI: ದೇಶಿ ಕ್ರಿಕೆಟ್​ ಕಡೆಗಣಿಸುತ್ತಿರುವ ಆಟಗಾರರಿಗೆ ಲಾಸ್ಟ್​ ವಾರ್ನಿಂಗ್​ ನೀಡಿದ ಬಿಸಿಸಿಐ!

ಆಂಧ್ರ ಕ್ರಿಕೆಟ್ ಸಂಸ್ಥೆ ಮಾಡಿದ ಆರೋಪಕ್ಕೆ ಇದೀಗ ಮತ್ತೆ ಪ್ರತಿಕ್ರಿಯೆ ನೀಡಿರುವ ವಿಹಾರಿ, “ತಂಡದಲ್ಲಿ ನಾನು ನಾಯಕ ಹಾಗೂ ಆಟಗಾರನಾಗಿ ಮುಂದುವರಿಯಬೇಕೆಂದು ಎಲ್ಲ 15 ಆಟಗಾರರ ಒಪ್ಪಿಗೆ ಪಡೆಯುವ ಮೂಲಕವೇ ಪತ್ರವನ್ನು ಬರೆದಿದ್ದೇನೆ. ನಾಯಕನಾಗಿ ನನ್ನನ್ನು ತಂಡದ ಎಲ್ಲಾ ಆಟಗಾರರು ನಂಬಿದ್ದಾರೆ. ಕಳೆದ 24 ಗಂಟೆಗಳನ್ನು ನನಗೆ ಸಿಕ್ಕ ಬೆಂಬಲಕ್ಕೆ ಧನ್ಯವಾದವನ್ನು ಅರ್ಪಿಸಲು ಬಯಸುತ್ತೇನೆ. ಸತ್ಯ ಜಗತ್ತಿಗೆ ತಿಳಿಯ ಬೇಕು ಹೆದರು ಕುಳಿತುಕೊಳ್ಳುವ ಕಾಲ ಇದಲ್ಲ” ಎಂದು ಹನುಮ ವಿಹಾರಿ ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ಗೆ ತಿರುಗೇಟು ನೀಡಿದ್ದಾರೆ.

Continue Reading

ಕ್ರೀಡೆ

ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಕಿಕ್​ ಔಟ್​

ದೇಶೀಯ ಕ್ರಿಕೆಟ್​ ಆಡಲು ಅಸಡ್ಡೆ ತೋರಿದ ಯುವ ಆಟಗಾರರಾದ ಇಶಾನ್​ ಕಿಶನ್(Ishan Kishan)​ ಮತ್ತು ಶ್ರೇಯಸ್​ ಅಯ್ಯರ್(Shreyas Iyer)​ ಅವರನ್ನು ಬಿಸಿಸಿಐ ವಾರ್ಷಿಕ ಆಟಗಾರರ(BCCI Annual Contract) ಒಪ್ಪಂದ ಪಟ್ಟಿಯಿಂದ ಕೈಬಿಟ್ಟಿದೆ.

VISTARANEWS.COM


on

Shreyas Iyer, Ishan Kishan
Koo

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2023-24ರ ಋತುವಿಗೆ (ಅ.1, 2023 ರಿಂದ ಸೆ.30, 2024 ರವರೆಗೆ) ಟೀಮ್ ಇಂಡಿಯಾ (ಹಿರಿಯ ಪುರುಷರ) ವಾರ್ಷಿಕ ಆಟಗಾರರ(BCCI Annual Contract) ಒಪ್ಪಂದ ಪಟ್ಟಿಯನ್ನು ಇಂದು ಪ್ರಕಟಿಸಿದೆ. ದೇಶೀಯ ಕ್ರಿಕೆಟ್​ ಆಡಲು ಅಸಡ್ಡೆ ತೋರಿದ ಯುವ ಆಟಗಾರರಾದ ಇಶಾನ್​ ಕಿಶನ್(Ishan Kishan)​ ಮತ್ತು ಶ್ರೇಯಸ್​ ಅಯ್ಯರ್(Shreyas Iyer)​ ಅವರನ್ನು ಈ ಒಪ್ಪಂದ ಪಟ್ಟಿಯಿಂದ ಬಿಸಿಸಿಐ ಕೈಬಿಟ್ಟಿದೆ.

“ಈ ಸುತ್ತಿನ ಶಿಫಾರಸುಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ವಾರ್ಷಿಕ ಒಪ್ಪಂದಗಳಿಗೆ ಪರಿಗಣಿಸಲಾಗಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ” ಎಂದು ಬಿಸಿಸಿಐ ತನ್ನ ಹೇಳಿಯಲ್ಲಿ ತಿಳಿಸಿದೆ. ಈ ಮೂಲಕ ಆಯ್ಕೆ ಸಮಿತಿ ಮತ್ತು ಕೋಚ್​ ಅವರ ಮಾತುಗಳಿಗೆ ಕ್ಯಾರೆ ಎನ್ನದೆ ದೇಶೀಯ ಕ್ರಿಕೆಟ್​ ಆಡಲು ನಿರಾಕರಿಸಿದ್ದ ಉಭಯ ಆಟಗಾರರಿಗೆ ಬಿಸಿಸಿಐ ತಕ್ಕ ಪಾಠ ಕಲಿಸಿದೆ.

ಉಭಯ ಆಟಗಾರರನ್ನು ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಕೈಬಿಡುವ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿದ್ದವು. ಇಶಾನ್ ಕಿಶನ್ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಮಧ್ಯದಲ್ಲಿ ವಿರಾಮ ತೆಗೆದುಕೊಂಡಿದ್ದರು. ಬಳಿಕ ಅಫ್ಘಾನಿಸ್ತಾನ ವಿರುದ್ಧದ ಟಿ 20 ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರಲಿಲ್ಲ. ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ರಾಷ್ಟ್ರೀಯ ತಂಡಕ್ಕೆ ಮರಳಲು ಇಶಾನ್ ಕಿಶನ್ ದೇಶೀಯ ರಣಜಿ ಟೂರ್ನಿಯ ಕೆಲ ಪಂದ್ಯಗಳನ್ನು ಆಡುವಂತೆ ಸೂಚನೆ ನೀಡಿದ್ದರು. ಆದಾಗ್ಯೂ, ಅವರು ತಮ್ಮ ರಾಜ್ಯ ತಂಡ ಜಾರ್ಖಂಡ್‌ಗಾಗಿ ರಣಜಿ ಟ್ರೋಫಿ ಆಡಿರಲಿಲ್ಲ. ಬದಲಾಗಿ ಐಪಿಎಲ್​ಗಾಗಿ ಹಾರ್ದಿಕ್​ ಪಾಂಡ್ಯ ಜತೆ ಅಭ್ಯಾಸ ನಡೆಸಿದ್ದರು.

ಇಶಾನ್​ ಅವರ ಈ ನಡೆಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಕೂಡ ಎಚ್ಚರಿಕೆ ನೀಡಿದ್ದರು. ಇದಕ್ಕೂ ಕೂಡ ಬಗ್ಗದ ಇಶಾನ್​ ಇದೀಗ ಬಿಸಿಸಿಐ ವಾರ್ಷಿಕ ಆಟಗಾರರ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಕೆಲವು ದಿನಗಳ ಹಿಂದೆ “ಕಿಶನ್ ಮತ್ತು ಅಯ್ಯರ್ ಅವರನ್ನು ಗುತ್ತಿಗೆ ಪಟ್ಟಿಯಿಂದ ಪಟ್ಟಿಯಿಂದ ಹೊರಗಿಡುವ ಸಾಧ್ಯತೆಯಿದೆ. ಏಕೆಂದರೆ ಬಿಸಿಸಿಐನ ಆದೇಶದ ಹೊರತಾಗಿಯೂ ಇಬ್ಬರೂ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿಲ್ಲ” ಎಂದು ವರದಿ ಮಾಡಿತ್ತು. ಇದೀಗ ಈ ವರದಿ ನಿಜವಾಗಿದೆ. ಉಭಯ ಆಟಗಾರರನ್ನು ಕೂಡ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿದೆ.

ಗ್ರೇಡ್ Aನಲ್ಲಿ ನಾಲ್ಕು ಆಟಗಾರರು ಕಾಣಿಸಿಕೊಂಡಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡು ಸರಿ ಸುಮಾರು ಒಂದು ವರ್ಷಗಳಿಗಿಂತಲೂ ಕ್ರಿಕೆಟ್​ನಿಂದ ದೂರ ಉಳಿದಿರುವ ರಿಷಭ್​ ಪಂತ್​ ಅವರು ಗ್ರೇಡ್​ ‘ಬಿ’ಯಲ್ಲಿ ಸ್ಥಾನ ಪಡೆದಿದ್ದಾರೆ.

ಬಿಸಿಸಿಐ ಒಪ್ಪಂದದ ಆಟಗಾರರ ಸಂಪೂರ್ಣ ಪಟ್ಟಿ


ಗ್ರೇಡ್ A+ (4 ಕ್ರಿಕೆಟಿಗರು): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ ಮತ್ತು ರವೀಂದ್ರ ಜಡೇಜಾ.

ಗ್ರೇಡ್ ಎ (6 ಕ್ರಿಕೆಟಿಗರು): ಆರ್ ಅಶ್ವಿನ್, ಮೊ. ಶಮಿ, ಮೊಹಮ್ಮದ್ ಸಿರಾಜ್, ಕೆ.ಎಲ್ ರಾಹುಲ್, ಶುಭಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.

ಗ್ರೇಡ್ ಬಿ (5 ಕ್ರಿಕೆಟಿಗರು) ಸೂರ್ಯಕುಮಾರ್ ಯಾದವ್, ರಿಷಭ್​ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ಯಶಸ್ವಿ ಜೈಸ್ವಾಲ್.

ಗ್ರೇಡ್ ಸಿ (15 ಕ್ರಿಕೆಟಿಗರು) ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ.ಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್ ಮತ್ತು ರಜತ್ ಪಾಟಿದಾರ್.

Continue Reading
Advertisement
graveyard
ಪ್ರಮುಖ ಸುದ್ದಿ2 mins ago

ದಶಮುಖ ಅಂಕಣ: ಮಸಣದಲ್ಲಿ ಕೆಲವು ಕ್ಷಣ

KAS Recruitment 2024 invited for 384 KAS posts Apply from March 4
ಉದ್ಯೋಗ2 mins ago

KAS Recruitment 2024: 384 ಕೆಎಎಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ಮಾರ್ಚ್‌ 4ರಿಂದಲೇ ಅರ್ಜಿ ಸಲ್ಲಿಸಿ

Raja Marga Column depressed
ಸ್ಫೂರ್ತಿ ಕತೆ12 mins ago

Raja Marga Column : ಅಪವಾದ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ; ಗೆಲ್ಲೋದು ಹೇಗೆ?

slim woman good health digestion
ಆರೋಗ್ಯ32 mins ago

Health Tips For Digestion: ಹೊಟ್ಟೆಬಿರಿಯುವಂತೆ ಉಂಡ ಬಳಿಕ ಜೀರ್ಣಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸರಳೋಪಾಯ!

Karnataka Weather Rain for first week of March
ಕರ್ನಾಟಕ1 hour ago

Karnataka Weather : ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸೆಕೆ; ಮಾರ್ಚ್‌ ಮೊದಲ ವಾರಕ್ಕೆ ಮಳೆ?

Electricity Bil
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ವಿದ್ಯುತ್‌ ದರ ಇಳಿಕೆ ಶ್ಲಾಘನೀಯ ಕ್ರಮ

dina bhavishya read your daily horoscope predictions for February 28 2024
ಭವಿಷ್ಯ3 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Jain (Deemed-to-be University)
ಬೆಂಗಳೂರು7 hours ago

ಜೈನ್ ‘ಸ್ಕೂಲ್ ಆಫ್ ಸೈನ್ಸಸ್‌’ನಲ್ಲಿ ಯಶಸ್ವಿಯಾಗಿ ನೆರವೇರಿದ SciCon-2024; 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

Siddaramaiah
ಪ್ರಮುಖ ಸುದ್ದಿ8 hours ago

ಪಶು ಸಂಗೋಪನಾ ಇಲಾಖೆ ಆಸ್ತಿ ಅಲ್ಪಸಂಖ್ಯಾತ ಇಲಾಖೆಗೆ ವರ್ಗಾವಣೆ; ಸಿದ್ದರಾಮಯ್ಯ ಆದೇಶ

Reva University
ಬೆಂಗಳೂರು8 hours ago

ರೇವಾ ವಿವಿಯಲ್ಲಿ ಜಿಯೋಪಾಲಿಟಿಕ್ಸ್, ಇಂಟರ್ ನ್ಯಾಷನಲ್ ಸ್ಟಡೀಸ್ ಉನ್ನತ ಕೇಂದ್ರ ಉದ್ಘಾಟಿಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ3 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ1 day ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ2 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ3 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌