Site icon Vistara News

ಬಾಬರ್, ಕೊಹ್ಲಿ ಅಲ್ಲ ಪಾಕಿಸ್ತಾನದ ಟಾಪ್ ಗೂಗಲ್‌ ಸರ್ಚ್​ ಟ್ರೆಂಡಿಂಗ್; ಮತ್ಯಾರು?

babar azam and virat kohli

ಕರಾಚಿ: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿಗೆ(Virat Kohli) ಪಾಕಿಸ್ತಾನದಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪಾಕಿಸ್ತಾನ ವಿರುದ್ಧ ಭಾರತ ಪಂದ್ಯ ಇದ್ದಾಗಲೂ ಪಾಕ್​ನ ಅಭಿಮಾನಿಗಳು ಕೊಹ್ಲಿಗೆ ಬೆಂಬಲಿಸುತ್ತಾರೆ. ಆದರೆ ಪಾಕಿಸ್ತಾನದಲ್ಲಿ ಗೂಗಲ್​ ಸರ್ಚ್​ನಲ್ಲಿ(Google’s Top Trending Search) ಅವರ ಹೆಸರು ಕಾಣದೇ ಇರುವುದು ಅಚ್ಚರಿ ತಂದಿದೆ. ಜತೆಗೆ ಬಾಬರ್​ ಅಜಂ(Babar Azam) ಕೂಡ ಕಾಣಿಸಿಕೊಂಡಿಲ್ಲ. ಆದರೆ, ಶುಭಮನ್​ ಗಿಲ್(Shubman Gill)​ ಸ್ಥಾನ ಪಡೆದಿದ್ದಾರೆ.

ಪಾಕಿಸ್ತಾನದಲ್ಲಿ ಗೂಗಲ್ ಹುಡುಕಾಟ ನಡೆಸಿದವರ ಪಟ್ಟಿಯಲ್ಲಿ ಶುಭಮನ್​ ಗಿಲ್​ ಅವರು 8ನೇ ಸ್ಥಾನದಲ್ಲಿದ್ದಾರೆ ಎಂದು ಜಿಯೋ ನ್ಯೂಸ್ ತಿಳಿಸಿದೆ. ಪಾಕ್​ನ ಉದಯೋನ್ಮುಖ ಪ್ರತಿಭೆ ಹಸೀಬುಲ್ಲಾ ಖಾನ್, ಅಬ್ದುಲ್ಲಾ ಶಫೀಕ್ ಮತ್ತು ಸೌದ್ ಶಕೀಲ್ ಅಗ್ರ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್‌ನ ಸೆನ್ಸೇಶನ್ ಉಸ್ಮಾನ್ ಖಾನ್ ಅವರು ಪಾಕಿಸ್ತಾನದಲ್ಲಿ ಅತಿ ಹೆಚ್ಚು ಗೂಗಗಲ್​ನಲ್ಲಿ ಹುಡುಕಾಡಲ್ಪಟ್ಟ ವ್ಯಕ್ತಿಗಳಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಸ್ಥಾನ ಪಡೆದಿದ್ದಾರೆ. ಆದರೆ, ಕೊಹ್ಲಿ ಮತ್ತು ಬಾಬರ್​ ಹೆಸರು ಕಾಣಿಸಿಕೊಳ್ಳದ್ದು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ Babar Azam: ಸಿಗುವ ಹಣ ಪಡೆದು ಮನೆಗೆ ತೆರಳು ಎಂದು ಬಾಬರ್​ಗೆ ಸಲಹೆ ನೀಡಿದ್ದ ಮಾಜಿ ಆಟಗಾರ

ಸರ್ಚ್ ಇಂಜಿನ್ ದೈತ್ಯ ‘ಗೂಗಲ್’ ತನ್ನ ಸಂಪೂರ್ಣ 25 ವರ್ಷಗಳ ಇತಿಹಾಸದಲ್ಲಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿಯಲ್ಲಿ ಕ್ರಿಕೆಟಿಗ ವಿಷಯಕ್ಕೆ ಬಂದಾಗ ವಿರಾಟ್ ಕೊಹ್ಲಿ ಹೆಸರು ಅಗ್ರಸ್ಥಾನದಲ್ಲಿದೆ. ಆದರೂ ಕೂಡ ಪಾಕ್​ನಲ್ಲಿ ಅವರ ಹೆಸರು ಸರ್ಚ್​ ಮಾಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಗೂಗಲ್​ನಲ್ಲಿ ಕೊಹ್ಲಿಯನ್ನು ಸರ್ಚ್​ ಮಾಡುದಕ್ಕಿಂತ ಅವರನ್ನು ನೇರವಾಗಿ ನೋಡುವುದೇ ಪಾಕ್​ ಅಭಿಮಾನಿಗಳ ಗುರಿಯಾಗಿದ್ದಿರಲೂಬಹುದು. ಇದೇ ಕಾರಣಕ್ಕೆ ಅವರು ಸರ್ಚ್​ ಆಗದಿರಲು ಕಾರಣವಿರಬಹುದು.

ಇತ್ತೀಚೆಗಷ್ಟೇ ಏಕ ದಿನ ಮಾದರಿಯಲ್ಲಿ 50 ಶತಕಗಳನ್ನು ಬಾರಿಸಿ ಸಚಿನ್​ ತೆಂಡೂಲ್ಕರ್​ ಅವರ ದಾಖಲೆ ಮುರಿದಿದ್ದ ಕೊಹ್ಲಿ 25 ವರ್ಷಗಳಲ್ಲಿ ಗೂಗಲ್​ ಸರ್ಚ್​ ಎಂಜಿನ್​ನಲ್ಲಿ ಅತಿ ಹೆಚ್ಚು ಹುಡುಕಿರುವ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

“ಶುಭ್ಮನ್​ ಗಿಲ್ ಮತ್ತು ರಚಿನ್ ರವೀಂದ್ರ ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಅಗ್ರ ಟ್ರೆಂಡಿಂಗ್ ಕ್ರಿಕೆಟಿಗರಾಗಿ ಹೊರಹೊಮ್ಮಿದ್ದಾರೆ” ಎಂದು ಗೂಗಲ್​ ಇಯರ್ ಇನ್ ಸರ್ಚ್ 2023 ಬ್ಲಾಗ್ ಪೋಸ್ಟ್​​ನಲ್ಲಿ ತಿಳಿಸಲಾಗಿದೆ. ಆಟಗಾರರ ವಿಷಯದಲ್ಲಿ 2023 ರಲ್ಲಿ ಟಾಪ್ ಟ್ರೆಂಡಿಂಗ್ ಹುಡುಕಾಟದ ಪಟ್ಟಿಯಲ್ಲಿ ಕಾಣಿಸಿಕೊಂಡವರ ಪಟ್ಟಿ ಇಲ್ಲಿದೆ.

ಶುಭಮನ್​ ಗಿಲ್​, ರಚಿನ್ ರವೀಂದ್ರ, ಮೊಹಮ್ಮದ್ ಶಮಿ, ಗ್ಲೆನ್ ಮ್ಯಾಕ್ಸ್​ವೆಲ್​, ಸೂರ್ಯಕುಮಾರ್ ಯಾದವ್
ಟ್ರಾವಿಸ್ ಹೆಡ್.

ಏತನ್ಮಧ್ಯೆ, ಟೀಮ್ ಇಂಡಿಯಾ ವಿಶ್ವಾದ್ಯಂತ ಅಗ್ರ ಟ್ರೆಂಡಿಂಗ್ ಕ್ರಿಕೆಟ್ ತಂಡವಾಗಿ ಸ್ಥಾನ ಪಡೆದಿದೆ ಮತ್ತು ಜಾಗತಿಕ ಕ್ರೀಡಾ ತಂಡಗಳ ಪಟ್ಟಿಯ ಭಾಗವಾಗಿ ಸ್ಥಾನ ಪಡೆದ ಏಕೈಕ ಕ್ರಿಕೆಟ್ ತಂಡವಾಗಿದೆ. ವಿಶ್ವಕಪ್ 2023 ಮತ್ತು ಭಾರತ-ಆಸ್ಟ್ರೇಲಿಯಾ ಫೈನಲ್​ಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದ್ದವು. ಕ್ರೀಡಾ ಘಟನೆಗಳ ವಿಷಯದಲ್ಲಿ ಟಾಪ್-4 ಟ್ರೆಂಡಿಂಗ್ ಹುಡುಕಾಟಗಳು ಈ ಕೆಳಗಿನಂತಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಕ್ರಿಕೆಟ್ ವಿಶ್ವಕಪ್, ಏಷ್ಯಾ ಕಪ್, ಮಹಿಳಾ ಪ್ರೀಮಿಯರ್ ಲೀಗ್

Exit mobile version