Site icon Vistara News

NZ vs SA: ಕಿವೀಸ್​ ಸೋಲಿನಿಂದ ಅಂಕಪಟ್ಟಿಯಲ್ಲಿ ಭಾರಿ ಬದಲಾವಣೆ; ಭಾರತಕ್ಕೂ ನಷ್ಟ

Temba Bavuma, Keshav Maharaj and Marco Jansen watch the replay of James Neesham's wicket

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲ್ಯಾಂಡ್(NZ vs SA)​ ತಂಡ ಸೋಲು ಕಾಣುವ ಮೂಲಕ ವಿಶ್ವಕಪ್​ನ ಅಂಕಪಟ್ಟಿಯಲ್ಲಿ(World Cup 2023 Points Table) ಭಾರಿ ಬದಲಾವಣೆ ಸಂಭವಿಸಿದೆ. ಅಗ್ರಸ್ಥಾನದಲ್ಲಿದ್ದ ಭಾರತ ದ್ವಿತೀಯ ಸ್ಥಾನಕ್ಕೆ ಕುಸಿದಿದೆ. ಅಲ್ಲದೆ 4ನೇ ಸ್ಥಾನದಲ್ಲಿದ ಆಸ್ಟ್ರೇಲಿಯಾ ಒಂದು ಸ್ಥಾನಗಳ ಏರಿಕೆ ಕಂಡಿದ್ದು ಸದ್ಯ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ದಕ್ಷಿಣ ಆಫ್ರಿಕಾ ತಂಡ ಟೀಮ್ ಇಂಡಿಯಾಕ್ಕಿಂತ ಒಂದು ಪಂದ್ಯ ಜಾಸ್ತಿ ಆಡಿ ಸಮಾನ 12 ಅಂಕ ಪಡೆದಿದ್ದರೂ, ರನ್​ರೇಟ್​ನಲ್ಲಿ ಮುಂದಿರುವ ಕಾರಣ ಅಗ್ರಸ್ಥಾನ ಪಡೆಯಿತು. ಸದ್ಯ ಹರಿಣಗಳ ಪಡೆ +2.290 ರನ್​ ರೇಟ್​ ಹೊಂದಿದೆ. ಇನ್ನು 2 ಪಂದ್ಯ ಬಾಕಿ ಉಳಿದಿದೆ. ಇದರಲ್ಲಿ ಒಂದು ಪಂದ್ಯ ಗೆದ್ದರೂ ಸೆಮಿ ಟಿಕೆಟ್​ ಅಧಿಕೃತಗೊಳ್ಳಲಿದೆ. ಒಂದೊಮ್ಮೆ ಭಾರತ ಗುರುವಾರ ನಡೆಯುವ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದರೆ 14 ಅಂಕದೊಂದಿಗೆ ಅಗ್ರಸ್ಥಾನ ಮಾತ್ರವಲ್ಲದೆ ಸೆಮಿಫೈನಲ್​ಗೂ ನೇರವಾಗಿ ಎಂಟ್ರಿಕೊಡಲಿದೆ.

ಇದನ್ನೂ ಓದಿ IND vs SL: ಇಂಡೋ-ಲಂಕಾ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡಗಳು ಹೀಗಿದೆ

ಆಸೀಸ್​ಗೆ ಲಾಭ

ನ್ಯೂಜಿಲ್ಯಾಂಡ್​ಗೆ ಈ ಸೋಲಿನಿಂದ ರನ್​ರೇಟ್​ನಲ್ಲಿ ಕುಸಿತವಾಗಿದೆ. ಇದರ ಲಾಭ ಆಸ್ಟ್ರೇಲಿಯಾ ತಂಡಕ್ಕೆ ಲಭಿಸಿದೆ. ಈ ಪಂದ್ಯಕ್ಕೂ ಮುನ್ನ 4ನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಈಗ ಮೂರಕ್ಕೆ ಬಂದು ನಿಂತಿದೆ. ಉಳಿದಂತೆ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಕಿವೀಸ್​ ಸೋಲಿನಿಂದಾಗಿ ಕ್ರಮವಾಗಿ 5ನೇ ಮತ್ತು 6ನೇ ಸ್ಥಾನದಲ್ಲಿರುವ ಪಾಕಿಸ್ತಾನ ಮತ್ತು ಅಫಘಾನಿಸ್ತಾನ ತಂಡಗಳ ಸೆಮಿ ಆಸೆ ಇನ್ನಷ್ಟು ಗಟ್ಟಿಗೊಂಡಿದೆ.

ಇದನ್ನೂ ಓದಿ NZ vs SA: ಕಿವೀಸ್​ ಕಿವಿ ಹಿಂಡಿದ ಹರಿಣ ಪಡೆ; 190 ರನ್​ ಗೆಲುವಿನೊಂದಿಗೆ ಅಗ್ರಸ್ಥಾನಕ್ಕೆ ಜಿಗಿತ

ನೂತನ ಅಂಕಪಟ್ಟಿ ಹೀಗಿದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ದಕ್ಷಿಣ ಆಫ್ರಿಕಾ76112+2.290
ಭಾರತ66012+1.405
ಆಸ್ಟ್ರೇಲಿಯಾ​6428+0.970
ನ್ಯೂಜಿಲ್ಯಾಂಡ್7438+0.484
ಪಾಕಿಸ್ತಾನ7346-0.024
ಅಫಘಾನಿಸ್ತಾನ6336-0.718
ಶ್ರೀಲಂಕಾ 6244-0.275
ನೆದರ್ಲ್ಯಾಂಡ್ಸ್6244-1.277
ಬಾಂಗ್ಲಾದೇಶ​ 7162-1.446
ಇಂಗ್ಲೆಂಡ್​​​ 6152-1.652

190 ರನ್​ ಗೆಲುವು

ಇಲ್ಲಿನ ಮಹಾರಾಷ್ಟ ಕ್ರಿಕೆಟ್ ಅಸೋಸಿಯೇಶನ್​ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್​ನ 32ನೇ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ​​ ದಕ್ಷಿಣ ಆಫ್ರಿಕಾ ಡಿ ಕಾಕ್(114)​ ಮತ್ತು ಡುಸ್ಸೆನ್​(133) ಅವರ ಶತಕದ ನೆರವಿನಿಂದ, ನಿಗದಿತ 50 ಓವರ್​ಗಳಲ್ಲಿ 4 ವಿಕೆಟ್​ಗೆ 357 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 35.3​ ಓವರ್​ಗಳಲ್ಲಿ 167 ರನ್​ಗೆ ಸರ್ವಪತನ ಕಂಡು ಶರಣಾಯಿತು. 

ಇದನ್ನೂ ಓದಿ IND vs SL: ‘ಲಂಕಾ ದಹನ’ ಮಾಡಿ ಸೆಮಿಫೈನಲ್​ ಪ್ರವೇಶಿಸಲಿ ಟೀಮ್​ ಇಂಡಿಯಾ

ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ಜಾನ್ಸೆನ್​ ಮತ್ತು ಸ್ಪಿನ್ನರ್​ ಕೇಶವ್​ ಮಹರಾಜ್​ ಅವರ ಮಾರಕ ಬೌಲಿಂಗ್​ ದಾಳಿಗೆ ನಲುಗಿದ ಕಿವೀಸ್​ ಆಟಗಾರರು ರನ್ ಗಳಿಸಲು ಪರದಾಡಿದರು. ಮಹರಾಜ್ 46 ರನ್​ ವೆಚ್ಚದಲ್ಲಿ 4 ವಿಕೆಟ್​ ಕಿತ್ತರೆ, ಜಾನ್ಸೆನ್ 31 ರನ್​ ನೀಡಿ 3 ವಿಕೆಟ್​ ಕೆಡವಿದರು.

Exit mobile version