Site icon Vistara News

ODI Ranking: ಗಿಲ್​ ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ ಪಾಕ್​ ಬ್ಯಾಟರ್​ ಬಾಬರ್ ಅಜಂ

babar azam and shubman gill

ದುಬೈ: ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಂ(Babar Azam) ಅವರು ಐಸಿಸಿ ಏಕದಿನ(ODI Ranking) ಬ್ಯಾಟರ್​ಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ನಂ.1 ಸ್ಥಾನವನ್ನು ಪಡೆದುಕೊಂಡಿದ್ದಾರೆ. ನಂ.1 ಸ್ಥಾನದಲ್ಲಿದ್ದ ಭಾರತದ ಯುವ ಬ್ಯಾಟರ್​ ಶುಭಮನ್​ ಗಿಲ್(Shubman Gill)​ ಒಂದು ಸ್ಥಾನ ಕುಸಿತ ಕಂಡು ದ್ವಿತೀಯ ಸ್ಥಾನದಲ್ಲಿದ್ದಾರೆ.

ವಿಶ್ವಕಪ್​ ಟೂರ್ನಿಯ ವೇಳೆ ಶುಭಮನ್​ ಗಿಲ್​ ಅವರು ಅಗ್ರಸ್ಥಾನದಲ್ಲಿದ್ದ ಬಾಬರ್​ ಅವರನ್ನು ಹಿಂದಿಕ್ಕಿದ್ದರು. ಆದರೆ ಈಗ ಅವರ ರೇಟಿಂಗ್​ ಅಂಕದಲ್ಲಿ ಕುಸಿತ ಕಂಡ ಪರಿಣಾಮ ಅವರು ಮತ್ತೆ ದ್ವಿತೀಯ ಸ್ಥಾನಕ್ಕೆ ಜಾರಿದ್ದಾರೆ. 2ನೇ ಸ್ಥಾನದಲ್ಲಿದ್ದ ಬಾಬರ್​ ಅಗ್ರಸ್ಥಾನಕ್ಕೇರಿದ್ದಾರೆ. ಸದ್ಯ ಬಾಬರ್​(824) ರೇಟಿಂಗ್​ ಅಂಕ ಹೊಂದಿದರೆ, ಶುಭಮನ್​ ಗಿಲ್​(810) ರೇಟಿಂಗ್​ ಅಂಕ ಪಡೆದಿದ್ದಾರೆ.

ಗಿಲ್​ ರೇಟಿಂಗ್​ ಅಂಕ ಕುಸಿಯಲು ಕಾರಣವೇನು?

ಬಾಬರ್​ ಮತ್ತು ಗಿಲ್​ ಅವರು ವಿಶ್ವಕಪ್​ ಟೂರ್ನಿಯ ಬಳಿಕ ಯಾವಿದೇ ಏಕದಿನ ಪಂದ್ಯವನ್ನು ಆಡಿಲ್ಲ. ಆದರೂ ಉಭಯ ಆಟಗಾರರ ರೇಡಿಂಗ್​ ಅಂಕದಲ್ಲಿ ಇಷ್ಟು ದೊಡ್ಡ ಬದಲಾವಣೆ ಹೇಗೆ ಸಾಧ್ಯವಾಯಿತು? ಎಂಬುದು ಕ್ರಿಕೆಟ್​ ಅಭಿಮಾನಿಗಳ ಪ್ರಶ್ನೆಯಾಗಿದೆ. ಇದು ಹೇಗೆ ಸಾದ್ಯವೆಂದರೆ, ಯವುದೇ ಶ್ರೇಯಾಂಕ ಹೊಂದಿರುವ ಆಟಗಾರನ ತಂಡ ಏಕದಿನ ಸರಣಿಯನ್ನು ಆಡಿದಾಗ ಆ ಆಟಗಾರ ತಂಡದಲ್ಲಿ ಆಡದಿದ್ದರೆ ಅವನ ರೇಟಿಂಗ್ ಅಂಕ ಸ್ವಯಂಚಾಲಿತವಾಗಿ ಕುಸಿಯುತ್ತದೆ. ಇದೇ ಕಾರಣಕ್ಕೆ ಬಾಬರ್​ಗಿಂತ ಎರಡು ರೇಟಿಂಗ್ ಪಾಯಿಂಟ್​ಗಳಿಂದ ಮುಂದಿದ್ದ ಗಿಲ್ ಕುಸಿತ ಕಾಣಲು ಪ್ರಮುಖ ಕಾರಣ.

ಕೊಹ್ಲಿ-ರೋಹಿತ್​ಗೆ ಎಷ್ಟನೇ ಸ್ಥಾನ?

ಟೀಮ್​ ಇಂಡಿಯಾದ ನಾಯಕ ಸ್ಟಾರ್​ ಆಟಗಾರರಾದ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದಿದ್ದಾರೆ. ಕೊಹ್ಲಿ(775), ರೋಹಿತ್​(754) ರೇಟಿಂಗ್​ ಅಂಕ ಹೊಂದಿದ್ದಾರೆ. ಒಂದು ಅಂಕದಿಂದ ಕೊಹ್ಲಿ ರೋಹಿತ್​ಗಿಂತ ಮುಂದಿದ್ದಾರೆ. ಒಟ್ಟು ಟಾಪ್​ ಟೆನ್​ನಲ್ಲಿ ಮೂವರು ಭಾರತೀಯ ಬ್ಯಾಟರ್​ಗಳು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ Pant And Dhoni: ದುಬೈನಲ್ಲಿ ಟೆನಿಸ್​ ಆಡಿದ ಪಂತ್​-ಧೋನಿ; ವಿಡಿಯೊ ವೈರಲ್​

ಬೌಲರ್​ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಕೇಶವ್​ ಮಹರಾಜ್​ 715 ರೇಟಿಂಗ್​ ಅಂಕದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ಭಾರತದ ವೇಗಿ ಮೊಹಮ್ಮದ್​ ಸಿರಾಜ್​ ಕೂಡ ಈ ಹಿಂದಿನಂತೆ ಮೂರನೇ ಸ್ಥಾನದಲ್ಲಿ ಕಾಣಿಸಿಕೊಡಿದ್ದಾರೆ. ಜಸ್​ಪ್ರೀತ್​ ಬುಮ್ರಾ ಒಂದು ಸ್ಥಾನದ ಕುಸಿತ ಕಂಡು 5ನೇ ಸ್ಥಾನ ಪಡೆದಿದ್ದಾರೆ. ಸ್ಪಿನ್ನರ್​ ಕುಲದೀಪ್​ ಯಾದವ್​ 8ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ. ಈ ಹಿಂದಿನಂತೆ ಬಾಂಗ್ಲಾದ ಹಿರಿಯ ಆಟಗಾರ ಶಬೀಬ್ ಅಲ್​ ಹಸನ್​ ಅಗ್ರಸ್ಥಾನದಲ್ಲೇ ಕಾಣಿಸಿಕೊಂಡಿದ್ದಾರೆ. ಅಫಘಾನಿಸ್ತಾನದ ಮೊಹಮ್ಮದ್​ ನಬಿ, ಜಿಂಬಾಬ್ವೆಯ ಸಿಕಂದರ್‌ ರಾಜಾ ಕ್ರಮವಾಗಿ 2ನೇ ಮತ್ತು ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

Exit mobile version