Site icon Vistara News

ind vs aus : ಮೊಹಾಲಿ ಸ್ಟೇಡಿಯಮ್​ನಲ್ಲಿ​ ಭಾರತ ತಂಡದ ಗರಿಷ್ಠ ಮತ್ತು ಕನಿಷ್ಠ ಸ್ಕೋರ್​ ಎಷ್ಟು?

Mohali cricket Stadium

ಮೊಹಾಲಿ: ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 22ರಂದು ಭಾರತ ಮತ್ತು ಆಸ್ಟ್ರೇಲಿಯಾ (ind vs aus) ನಡುವೆ ಪಂದ್ಯ ನಡೆಯಲಿದೆ. ಇದು ಸರಣಿಯ ಮೊದಲ ಪಂದ್ಯವಾಗಿದ್ದ ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಈ ಹಿಂದಿನ ಸರಣಿಯಲ್ಲಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ 21 ರನ್​ಗಳಿಂದ ಗೆಲುವು ಸಾಧಿಸಿತ್ತು.

2023ರ ಏಷ್ಯಾಕಪ್ ಗೆದ್ದ ಬಳಿಕ ಭಾರತ ಕಣಕ್ಕಿಳಿಯುತ್ತಿದೆ. ರೋಹಿತ್ ಶರ್ಮಾಗೆ ಮೊದಲ ಎರಡು ಏಕದಿನ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದ್ದು, ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ.

ಆಸ್ಟ್ರೇಲಿಯಾ ತಂಡ ತನ್ನ ಇತ್ತೀಚಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3-2 ಅಂತರದ ಸೋಲು ಕಂಡಿತ್ತು. ಸರಣಿಯ ಆರಂಭದಲ್ಲಿ 2-0 ಮುನ್ನಡೆ ಸಾಧಿಸಿದ್ದ ಹೊರತಾಗಿಯೂ ನಂತರದ ಮೂರು ಪಂದ್ಯಗಳನ್ನು ಸತತವಾಗಿ ಸೋತಿತ್ತು. ಆದರೆ ಈ ಸರಣಿಯಲ್ಲಿ ಪ್ರಮುಖ ಆಟಗಾರರು ಇರಲಿಲ್ಲ. ಕಾಯಂ ನಾಯಕ ಪ್ಯಾಟ್ ಕಮಿನ್ಸ್, ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್​ ಭಾರತ ವಿರುದ್ಧದ ಏಕದಿನ ಸರಣಿಗೆ ತಂಡಕ್ಕೆ ಮರಳಿದ್ದಾರೆ.

ಈ ಪಂದ್ಯವು ಸಮನಾಗಿ ಹೊಂದಿಕೆಯಾಗುವ ಎರಡು ತಂಡಗಳ ನಡುವೆ ನಿಕಟ ಸ್ಪರ್ಧೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಪರಿಸ್ಥಿತಿಗಳಿಗೆ ಉತ್ತಮವಾಗಿ ಹೊಂದಿಕೊಳ್ಳುವ ಮತ್ತು ತಮ್ಮ ಅತ್ಯುತ್ತಮ ಕ್ರಿಕೆಟ್ ಆಡುವ ತಂಡವು ಗೆಲುವು ಸಾಧಿಸುತ್ತದೆ ಎಂದು ಹೇಳಲಾಗಿದೆ.

ಭಾರತ- ಆಸ್ಟ್ರೇಲಿಯಾ ಏಕ ದಿನ ದಾಖಲೆಗಳು

ಭಾರತ ವಿರುದ್ಧ ಆಸ್ಟ್ರೇಲಿಯಾ 82 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ 54 ಪಂದ್ಯಗಳನ್ನು ಗೆದ್ದಿದೆ. ಭಾರತದಲ್ಲಿ ಆಡಿದ 67 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ 32 ಪಂದ್ಯಗಳನ್ನು ಗೆದ್ದಿದೆ, ಭಾರತ 30 ಪಂದ್ಯಗಳನ್ನು ಗೆದ್ದಿದೆ ಮತ್ತು 5 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಏಕದಿನ ದಾಖಲೆಗಳು ಮತ್ತು ಅಂಕಿಅಂಶಗಳು

ಐಎಸ್​ ಬಿಂದ್ರಾ ಮೈದಾನದಲ್ಲಿ ಆಡಿದ 25 ಪಂದ್ಯಗಳಲ್ಲಿ ವೇಗಿಗಳು 239 ವಿಕೆಟ್​​ಗಳನ್ನು ಪಡೆದಿದ್ದಾರೆ ಮತ್ತು ಸ್ಪಿನ್ನರ್​ಗಳು ಆಡಿದ 25 ಪಂದ್ಯಗಳಲ್ಲಿ 101 ವಿಕೆಟ್​​ಗಳನ್ನು ಪಡೆದಿದ್ದಾರೆ. ಈ ಮೈದಾನದಲ್ಲಿ ಆಡಿದ 25 ಪಂದ್ಯಗಳಲ್ಲಿ, 15 ಪಂದ್ಯಗಳು ಮೊದಲು ಬ್ಯಾಟಿಂಗ್ ಮಾಡಿ ಗೆದ್ದಿದ್ದರೆ, 10 ಪಂದ್ಯಗಳು ಎರಡನೇ ಬ್ಯಾಟಿಂಗ್ ನಲ್ಲಿ ಗೆದ್ದಿವೆ. ಟಾಸ್ ಗೆಲ್ಲುವ ತಂಡಗಳಿಗೆ ಮೊದಲು ಬ್ಯಾಟಿಂಗ್ ಮಾಡುವುದು ಸೂಕ್ತ. ಈ ಮೈದಾನದಲ್ಲಿ ಭಾರತ 16 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 10 ಪಂದ್ಯಗಳನ್ನು ಗೆದ್ದಿದೆ ಮತ್ತು 6 ಪಂದ್ಯಗಳನ್ನು ಸೋತಿದೆ. ಈ ಮೈದಾನದಲ್ಲಿ ಆಸ್ಟ್ರೇಲಿಯಾ ಏಳು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಆರು ಪಂದ್ಯಗಳನ್ನು ಗೆದ್ದಿದೆ ಮತ್ತು ಒಂದು ಪಂದ್ಯವನ್ನು ಸೋತಿದೆ.

ಆಡಿದ ಪಂದ್ಯಗಳು- 25

ಮೊದಲು ಬ್ಯಾಟಿಂಗ್ ಮಾಡಿದ ತಂಡಗಳಿಗೆ ಗೆಲವು- 15

ಚೇಸಿಂಗ್ ನಲ್ಲಿ ಗೆದ್ದ ತಂಡಗಳು- 10

ಯಾವುದೇ ಫಲಿತಾಂಶಗಳಿಲ್ಲ- 0

ಸರಾಸರಿ ಬ್ಯಾಟಿಂಗ್ ಮೊದಲ ಸ್ಕೋರ್- 272

ತಂಡವೊಂದರ ಗರಿಷ್ಠ ಮೊತ್ತ- 392/4 (ಭಾರತ)

ತಂಡವೊಂದರ ಕನಿಷ್ಠ ಮೊತ್ತ- 89 (ಪಾಕಿಸ್ತಾನ)

ಅತ್ಯಧಿಕ ಯಶಸ್ವಿ ಚೇಸಿಂಗ್- 359/6 (ಆಸ್ಟ್ರೇಲಿಯಾ)

ಗಮನ ಸೆಳೆಯುವ ಪ್ರಮುಖ ಆಟಗಾರರು: ಭಾರತ: ಶುಭ್ಮನ್ ಗಿಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಪ್ಯಾಟ್ ಕಮಿನ್ಸ್

ಸಂಭಾವ್ಯ ತಂಡಗಳು

ಭಾರತ: ರಾಹುಲ್ (ನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್.

ಆಸ್ಟ್ರೇಲಿಯಾ : ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಕ್ಯಾಮರೂನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ (ವಿಕೆಟ್​ ಕೀಪರ್​), ಪ್ಯಾಟ್ ಕಮಿನ್ಸ್ (ನಾಯಕ), ಸೀನ್ ಅಬಾಟ್, ಜೋಶ್ ಹೇಜಲ್ವುಡ್, ಆಡಮ್ ಜಂಪಾ.

Exit mobile version