ಚೆನ್ನೈ: ಆಸ್ಟ್ರೇಲಿಯಾ(IND VS AUS) ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯವನ್ನಾಡಲು ಭಾರತ ತಂಡ ಈಗಾಗಲೇ ಚೆನ್ನೈಗೆ ಬಂದಿಳಿದಿದೆ. ದ್ವಿತೀಯ ಪಂದ್ಯವನ್ನು ಸೋತಿರುವ ಭಾರತಕ್ಕೆ ಸರಣಿ ವಶಪಡಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಇದರ ಜತೆಗೆ ಏಕದಿನ ಶ್ರೇಯಾಂಕದಲ್ಲಿ(ODI Team Rankings) ಅಗ್ರ ಸ್ಥಾನ ಉಳಿಸಿಕೊಳ್ಳುವ ಸವಾಲು ಕೂಡ ಭಾರತದ ಮುಂದಿದೆ.
ವಿಶಾಖಪಟ್ಟಣದಲ್ಲಿ ಹೀನಾಯ 10 ವಿಕೆಟ್ಗಳ ಅಂತರದಿಂದ ಸೋಲು ಕಂಡ ಕಾರಣ ಭಾರತ ಐಸಿಸಿ(ICC) ಶ್ರೇಯಾಂಕ ಪಟ್ಟಿಯಲ್ಲಿ ಹಲವು ಅಂಕಗಳನ್ನು ಕಳೆದುಕೊಂಡಿದೆ. ಸದ್ಯ ಭಾರತ 114 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ 112 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ.
ಒಂದೊಮ್ಮೆ ಭಾರತ ಈ ಪಂದ್ಯದಲ್ಲಿ ಸೋತರೆ ಅಗ್ರ ಸ್ಥಾನದಿಂದ ಕೆಳ ಜಾರಿ ದ್ವಿತೀಯ ಸ್ಥಾನ ಪಡೆಯಲಿದೆ. ಆಸೀಸ್ ಮೊದಲ ಸ್ಥಾನ ಅಲಂಕರಿಸಲಿದೆ. ಹೀಗಾಗಿ ಚೆನ್ನೈನಲ್ಲಿ ನಡೆಯುವ ಪಂದ್ಯ ಟೀಮ್ ಇಂಡಿಯಾಕ್ಕೆ ಪ್ರತಿಷ್ಠೆಯ ಪಂದ್ಯವಾಗಿದೆ. ಇಲ್ಲಿ ಗೆಲ್ಲಲೇ ಬೇಕಾದ ಒತ್ತಡಕ್ಕೆ ರೋಹಿತ್ ಶರ್ಮಾ ಸಿಲುಕಿದೆ.
ಇದನ್ನೂ ಓದಿ IND VS AUS: ಅಭಿಮಾನಿಗೆ ಸುಂದರ ಗುಲಾಬಿ ನೀಡಿ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ; ವಿಡಿಯೊ ವೈರಲ್
ಭಾರತ ಈ ಪಂದ್ಯದಲ್ಲಿ ಗೆದ್ದರೆ ಅಗ್ರಸ್ಥಾನಕ್ಕೇನೂ ಧಕ್ಕೆ ಆಗದು. ಅಗ್ರ ಸ್ಥಾನ ಭಾರತದದ ಬಳಿಯೇ ಉಳಿದುಕೊಳ್ಳಲಿದೆ. ಸೋತರೆ ಉಭಯ ತಂಡಗಳೂ ಸಮಾನ 113 ಅಂಕಗಳನ್ನು ಹೊಂದಲಿವೆ. ದಶಮಾಂಶ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯ ಮುನ್ನಡೆ ಗಳಿ ಅಗ್ರಸ್ಥಾನ ಅಲಂಕರಿಸುವ ಸಾಧ್ಯತೆ ಇದೆ.