Site icon Vistara News

ICC World Cup 2023 : ವಿಶ್ವ ಕಪ್​ ವೀಕ್ಷಕರ ಸಂಖ್ಯೆಯಲ್ಲಿ ಹೊಸ ದಾಖಲೆ

World Cup Crowd

ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕ ದಿನ ಕ್ರಿಕೆಟ್​ ವಿಶ್ವ ಕಪ್ ಪಂದ್ಯಗಳನ್ನು (ICC World Cup 2023) ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಮಂದಿ ಸ್ಟೇಡಿಯಮ್​ಗೆ ಹೋಗಿ ವೀಕ್ಷಿಸಿದ್ದಾರೆ. ಇದು ಏಕ ದಿನ ಕ್ರಿಕೆಟ್​ ವಿಶ್ವ ಕಪ್ ಇತಿಹಾಸದಲ್ಲಿ ದಾಖಲೆಯಾಗಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ವೇಳೆಯೂ ದೊಡ್ಡ ಪ್ರಮಾಣದಲ್ಲಿ ಪ್ರೇಕ್ಷಕರು ಸೇರಿದ್ದರು. ಈ ಮೂಲಕ ಏಕ ದಿನ ಕ್ರಿಕೆಟ್ ಇನ್ನೂ ಜನಪ್ರಿಯತೆ ಕಳೆದುಕೊಂಡಿಲ್ಲ ಎಂಬುದು ಸಾಬೀತಾಗಿದೆ. .

ನವೆಂಬರ್ 15 ಮತ್ತು 16 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಗಳು ಮತ್ತು ನವೆಂಬರ್ 19 ರಂದು ಫೈನಲ್ ಪಂದ್ಯಗಳು ಇನ್ನೂ ಬಾಕಿ ಇವೆ. ಅದಕ್ಕಿಂತ ಮೊದಲೇ ಇದುವರೆಗಿನ ಗರಿಷ್ಠ ಪ್ರಮಾಣದ ಪ್ರೇಕ್ಷಕರನ್ನು ವಿಶ್ವ ಕಪ್​ ಕಂಡಿದೆ. ಇದೇ ವೇಳೆ ಡಿಜಿಟಲ್ ವೀಕ್ಷಣೆಗಯ ದಾಖಲೆಗಳೂ ಮುರಿದಿವೆ. ಈ ಮೂಲಕ ಟೂರ್ನಿಗೆ ಕಳೆ ಬಂದಿದೆ. ಏಕದಿನ ಸ್ವರೂಪದ ಕ್ರಿಕೆಟ್​​ ನಿರಂತರ ಆಕರ್ಷಣೆ ಸ್ಪರ್ಧೆಯಾಗಿದೆ ಎಂಬುದು ಈ ಮೂಲಕ ಸ್ಪಷ್ಟವಾಗಿದೆ. ಅಂದ ಹಾಗೆ ಸ್ಪರ್ಧೆಯುದ್ದಕ್ಕೂ ಆಟಗಾರರು ಪ್ರದರ್ಶಿಸಿದ ಉತ್ಸಾಹ ಮತ್ತು ಕೌಶಲಗಳೂ ಪ್ರೇಕ್ಷಕರನ್ನು ಮೈದಾನದ ಕಡೆಗೆ ಸೆಳೆದಿದೆ.

ಈ ಮೈಲಿಗಲ್ಲಿನ ಬಗ್ಗೆ ಮಾತನಾಡಿದ ಐಸಿಸಿ ಈವೆಂಟ್ಸ್ ಮುಖ್ಯಸ್ಥ ಕ್ರಿಸ್ ಟೆಟ್ಲಿ, ” 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಕ್ರಿಕೆಟ್​ ಜಾತ್ರೆಯಲ್ಲಿ ಭಾವಹಿಸುವ ಮೂಲಕ ದಾಖಲೆ ಮುರಿಯಲಾಗಿದೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಇರುವ ಏಕದಿನ ಸ್ವರೂಪದ ಮೇಲಿನ ಬೆಂಬಲ ಮತ್ತು ಆಸಕ್ತಿಯನ್ನು ಸಾಬೀತುಪಡಿಸಿದೆ. ಇದು ವಿಶ್ವಕಪ್ ಕ್ರಿಕೆಟ್​ಗೆ ಎಷ್ಟು ಮೌಲ್ಯವಿದೆ ಎಂಬುದನ್ನು ಎತ್ತಿ ತೋರಿಸಿದೆ. ನಾವು ನಾಕೌಟ್ ಹಂತಗಳನ್ನು ಎದುರು ನೋಡುತ್ತಿರುವಾಗ, ಈ ಪಂದ್ಯಾವಳಿಯು ಹೆಚ್ಚಿನ ದಾಖಲೆಗಳನ್ನು ಮುರಿಯಲು ಮತ್ತು ಒಂದೇ ದಿನದಲ್ಲಿ ಕ್ರಿಕೆಟ್ ಬಗ್ಗೆ ಅತ್ಯುತ್ತಮ ಸಾಧನೆಯನ್ನು ಪ್ರದರ್ಶಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.

ದಾಖಲೆಯ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಸಂಬಂಧಪಟ್ಟ ಪಾಲುದಾರರನ್ನು ಅಭಿನಂದಿಸಿದ್ದಾರೆ. ಈ ವಿಶ್ವಕಪ್ ಅನ್ನು ಸಾರ್ವಕಾಲಿಕ ಶ್ರೇಷ್ಠವಾಗಿಸುವುದು ನಮ್ಮ ದೃಷ್ಟಿಕೋನವಾಗಿತ್ತು. ನಾವು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದ್ದೇವೆ ಎಂದು ನನಗೆ ನಿಜವಾಗಿಯೂ ಸಂತೋಷವಾಗುತ್ತಿದೆ. ಈ ಮೆಗಾ ಕಾರ್ಯಕ್ರಮಕ್ಕೆ ಮುನ್ನ ದಣಿವರಿಯದೆ ಕೆಲಸ ಮಾಡಿದ ನಮ್ಮ ನಿಷ್ಠಾವಂತ ಅಭಿಮಾನಿಗಳು, ರಾಜ್ಯ ಸಂಘಗಳು ಮತ್ತು ಪ್ರತಿಯೊಬ್ಬ ಪಾಲುದಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಾವು ಈಗ ನಿರ್ಣಾಯಕ ಹಂತವನ್ನು ಸಮೀಪಿಸುತ್ತಿರುವಾಗ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ನಿಜವಾಗಿಯೂ ಸ್ಮರಣೀಯ ಅನುಭವವನ್ನು ಒದಗಿಸುವಲ್ಲಿ ನಾವು ಐಸಿಸಿ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಅತ್ಯುತ್ತಮವಾದವು ಇನ್ನೂ ಬರಬೇಕಾಗಿದೆ ಎಂದು ಅವರು ಬರೆದಿದ್ದಾರೆ.

Exit mobile version