ನವದೆಹಲಿ: ಐಪಿಎಲ್ ಪಂದ್ಯದ ವೇಳೆ ಮೈದಾನದಲ್ಲಿಯೇ ಭಾರಿ ಸಂಘರ್ಷಕ್ಕೆ ಇಳಿದಿದ್ದ, ಅದಾದ ಬಳಿಕ ಎಲ್ಲಿಯೇ ಎದುರಾದರೂ ಮುಖ ತಿರುಗಿಸಿಕೊಂಡು ಹೋಗುತ್ತಿದ್ದ ವಿರಾಟ್ ಕೊಹ್ಲಿ (Virat Kohli) ಹಾಗೂ ಆಫ್ಘನ್ ವೇಗಿ ನವೀನ್ ಉಲ್ ಹಕ್ (Naveen Ul Haq) ಅವರು ಬುಧವಾರ (ಅಕ್ಟೋಬರ್ 11) ನಡೆದಿದ್ದ ಭಾರತ-ಅಫಘಾನಿಸ್ತಾನ (IND vs AFG) ಪಂದ್ಯದ ವೇಳೆ ಮೈದಾನದಲ್ಲಿಯೇ ರಾಜಿ ಮಾಡಿಕೊಂಡಿದ್ದಾರೆ. ಇದೀಗ ವಿರಾಟ್ ಅವರ ಅಭಿಮಾನಿಗಳು ನವೀನ್ ಉಲ್ ಹಕ್ಗೆ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯಾವುದೇ ತೊಂದರೆ ನೀಡದೆ ಅವರಿಗೆ ಚಿಯರ್ ಅಪ್ ಮಾಡಿ ಪ್ರೋತ್ಸಾಹಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಇಂಗ್ಲೆಂಡ್ ವಿರುದ್ಧ ಭಾನುವಾರ ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ನವೀನ್ ಉಲ್ ಹಕ್ ಅವರನ್ನು ವಿರಾಟ್ ಕೊಹ್ಲಿ ಅಭಿಮಾನಿಗಳು ನವೀನ್ ಬಾಯ್…ನವೀನ್ ಬಾಯ್ ಎಂದು ಕೂಗಿದ್ದಾರೆ. ಇದನ್ನು ಕೇಳಿ ಸಂತಸಗೊಂಡ ನವೀನ್ ಥಂಬ್ಸ್ ಅಪ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಕೊಹ್ಲಿ ಜತೆ ರಾಜಿ ಮಾಡುವ ಮೊದಲು ಧರ್ಮಶಾಲದಲ್ಲಿ ನಡೆದಿದ್ದ ಪಂದ್ಯದಲ್ಲಿ ನವೀನ್ಗೆ ಕೊಹ್ಲಿ ಅಭಿಮಾನಿಗಳು ಕೀಟಲೆ ಮಾಡಿದ್ದರು.
Delhi crowd chanting "Naveen Bhai, Naveen Bhai" and he showed a beautiful gesture in return.
— Johns. (@CricCrazyJohns) October 17, 2023
– This is a huge impact of Kohli among cricket fans….!!!!pic.twitter.com/F0Y1yuaa8i
ಭಾರತ-ಆಫ್ಘನ್ ಪಂದ್ಯದ ವೇಳೆ ಕೊಹ್ಲಿ ಮತ್ತು ನವೀನ್ ಇಬ್ಬರೂ ತಬ್ಬಿಕೊಂಡು, ಹ್ಯಾಂಡ್ ಶೇಕ್ ಮಾಡಿ, ಪಂದ್ಯದ ಬಳಿಕವೂ ನಗುನಗುತ್ತ ಮಾತನಾಡಿ ಎಲ್ಲ ಮುನಿಸನ್ನು ಮರೆತಿದ್ದರು. ಇಬ್ಬರ ಕ್ರೀಡಾಸ್ಫೂರ್ತಿಗೆ ಜನರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಾಜಿಯಾದ ಬೆನ್ನಲ್ಲೇ, ನವೀನ್ ಉಲ್ ಹಕ್ ಮಾತನಾಡಿ “ಕೊಹ್ಲಿ ನಿಜವಾಗಿಯೂ ಒಳ್ಳೆಯ ವ್ಯಕ್ತಿ” ಎಂದಿದ್ದರು.
ಇದನ್ನೂ ಓದಿ Virat Kohli : ಸಿಂಗಾಪುರದಲ್ಲಿ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆ; ಎಲ್ಲಿ, ಏನು ಎಂಬ ವಿವರ ಇಲ್ಲಿದೆ
“ಕೊಹ್ಲಿ ನಿಜವಾಗಿಯೂ ತುಂಬ ಒಳ್ಳೆ ವ್ಯಕ್ತಿ ಹಾಗೂ ಅದ್ಭುತ ಆಟಗಾರ. ಮೈದಾನದಲ್ಲಿ ನಾವು ಕೈ ಕುಲುಕಿಸಿದೆವು. ಜಗಳ ಏನಿದ್ದರೂ ಮೈದಾನದಲ್ಲಿ ಮಾತ್ರ, ಮೈದಾನದ ಹೊರಗೆ ಯಾವುದೇ ಸಂಘರ್ಷ ಇರುವುದಿಲ್ಲ. ಆದರೆ, ಜನರೇ ನಮ್ಮ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಅಭಿಮಾನಿಗಳು ವೈರತ್ವ ಸಾಧಿಸುತ್ತಾರೆ. ಆದರೆ, ವಿರಾಟ್ ಕೊಹ್ಲಿ ನನ್ನ ಜತೆ ಮಾತನಾಡುತ್ತ ಇಲ್ಲಿಗೇ ಬಿಡೋಣ ಎಂದರೂ. ನಾನು ಕೂಡ ಬಿಡೋಣ ಎಂದೆ. ಆಗ ಇಬ್ಬರೂ ಕೈ ಕುಲುಕಿ, ತಬ್ಬಿಕೊಂಡೆವು” ಎಂದು ಪಂದ್ಯದ ಬಳಿಕ ನವೀನ್ ಉಲ್ ಹಕ್ ಹೇಳಿದ್ದರು.
Virat & Navin ul HaQ 🤝 #INDvsAFG pic.twitter.com/xC6AXGfd4R
— HARDIK THACKER (@iamHardik42) October 11, 2023
ಐಪಿಎಲ್ ವೇಳೆ ಕೊಹ್ಲಿ ಜತೆ ಕಿರಿಕ್
ಮೇ 1ರಂದು ಲಕ್ನೋದ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ(virat kohli) ಮತ್ತು ನವೀನ್ ಉಲ್-ಹಕ್ ಮಧ್ಯೆ ಮೈದಾನದಲ್ಲಿಯೇ ಕಿರಿಕ್ ಆಗಿತ್ತು. ಬಳಿಕ ಪಂದ್ಯ ಮುಗಿದ ಬಳಿಕ ಗಂಭೀರ್ ಅವರು ಇದೇ ವಿಚಾರವಾಗಿ ಕೊಹ್ಲಿ ಜತೆ ವಾಗ್ವಾದ ನಡೆಸಿದ್ದರು. ಈ ಘಟನೆ ನಡೆದ ಬಳಿಕ ನವೀನ್ ಅವರು ವಿರಾಟ್ ಕೊಹ್ಲಿ ಮತ್ತು ಆರ್ಸಿಬಿ ಸೋತ ಬಳಿಕ ಮಾವಿನ ಹಣ್ಣಿನ ಫೋಟೊ ಹಾಕಿ ಪರೋಕ್ಷವಾಗಿ ಟ್ರೋಲ್ ಮಾಡಿದ್ದರು. ಇಲ್ಲಿಂದ ಆರಂಭಗೊಂಡ ಈ ಸಮರವನ್ನು ಮುಂದೆ ವಿರಾಟ್ ಅಭಿಮಾನಿಗಳು ಮುಂದುವರಿಸಿದ್ದರು. ಈಗ ಉಭಯ ಆಟಗಾರರು ದೋಸ್ತಿಯಾಗಿದ್ದು ಈ ಗಲಾಟೆ ಇಲ್ಲಿಗೆ ಕೊನೆಗೊಂಡಿದೆ.