ಮುಂಬಯಿ: ಏಕ ದಿನ ಕ್ರಿಕೆಟ್ ಅಳಿವಿನಂಚಿನಲ್ಲಿದ್ದು ಇದನ್ನೂ ಹೆಚ್ಚು ಆಕರ್ಷಿಸಲು ಕೆಲ ಬದಲಾವಣೆ ಮಾಡಿಕೊಳ್ಳಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರವಿಶಾಸ್ತ್ರಿ(ravi shastri) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವರ್ಷ ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವ ಕಪ್ (ODI World Cup 2023)ಬಗ್ಗೆ ಮಾತನಾಡಿದ ಅವರು ಏಕ ದಿನ ಕ್ರಿಕೆಟ್ ಉಳಿಯಬೇಕಿದ್ದರೆ, ಭವಿಷ್ಯದಲ್ಲಿ ಅದನ್ನು 40 ಓವರ್‌ಗಳ ಆಟಕ್ಕೆ ಇಳಿಸಬೇಕು ಎಂದು ಹೇಳಿದರು.
“1983ರಲ್ಲಿ ನಾವು ವಿಶ್ವ ಕಪ್ ಗೆದ್ದಾಗ ಅದು 60 ಓವರ್ ಪಂದ್ಯವಾಗಿತ್ತು. ನಂತರ ಪ್ರೇಕ್ಷಕರ ಗಮನ ಕಡಿಮೆಯಾದ ಕಾರಣ ಇದನ್ನೂ 50 ಓವರ್ಗಳಿಗೆ ಇಳಿಸಲಾಯಿತು. ಇದೀಗ ಟಿ20 ಕ್ರಿಕೆಟ್ ಬಂದ ಬಳಿಕ ಏಕದಿನದ ಕ್ರೇಜ್ ಜನರಲ್ಲಿ ಕಡಿಮೆಯಾಗಿದೆ. ಹೀಗಾಗಿ ಸಮಯದೊಂದಿಗೆ ಸ್ವರೂಪದ ಬದಲಾವಣೆಯೂ ಮಾಡುವ ಮೂಲಕ ಏಕ ದಿನ ಕ್ರಿಕೆಟ್ ಹೆಚ್ಚು ಸ್ವಾರಸ್ಯವಾಗಲು ಇದನ್ನೂ 40 ಓವರ್ಗೆ ಇಳಿಸುವ ಅಗತ್ಯ ಇದೆ” ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟರು.
ಇದೇ ವಿಚಾರವಾಗಿ ಮಾತನಾಡಿದ ದಿನೇಶ್ ಕಾರ್ತಿಕ್, “ಟೆಸ್ಟ್ ಕ್ರಿಕೆಟ್ ಎಂಬುದು ಕಲಾತ್ಮಕ ಚಲನಚಿತ್ರಗಳಿದ್ದಂತೆ, ಟಿ20 ವಾಣಿಜ್ಯ ಸಿನಿಮಾದ ರೀತಿ. ಹೀಗಿರುವಾಗ ಏಕ ದಿನ ಕ್ರಿಕೆಟ್ ತನ್ನ ಪ್ರಶಸ್ತ್ಯ ಕಳೆದುಕೊಳ್ಳುತ್ತಿದೆ. ಜತೆಗೆ ಎರಡು ವರ್ಷಗಳಿಗೊಮ್ಮೆ ಟಿ20 ವಿಶ್ವ ಕಪ್ ನಡೆಯುತ್ತಿರುವುದು ಸಹ ಏಕ ದಿನ ದ್ವಿಪಕ್ಷೀಯ ಸರಣಿಗಳು ಕಡಿಮೆಯಾಗಲು ಕಾರಣ ಆಗಿದೆ” ಎಂದು ಅವರು ಹೇಳಿದರು.