Site icon Vistara News

Sachin Tendulkar: ಅಭಿಮಾನಿಯ ತಲೆಗೆ ಹುಳಬಿಟ್ಟ ಸಚಿನ್​; ಪ್ರಶ್ನೆ ನೋಡಿ ಸುಸ್ತಾದ ನೆಟ್ಟಿಗರು

sachin tendulkar

ಮುಂಬಯಿ: ಭಾರತದ ಲೆಜೆಂಡರಿ ಬ್ಯಾಟರ್ ಸಚಿನ್ ತೆಂಡೂಲ್ಕರ್(Sachin Tendulkar) ಅವರು ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಸಕ್ರಿಯವಾಗಿರುತ್ತಾರೆ. ತಮ್ಮ ಪ್ರವಾಸ, ಕುಟುಂಬ ಸದಸ್ಯರ ಜತೆಗಿನ ಮೋಜು ಮಸ್ತಿ ಸೇರಿ ಅನೇಕ ವೈರಲ್​ ವಿಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ‘ಹಿಂದಿ ದಿವಸ್​'(hindi diwas) ಕಾರ್ಯಕ್ರಮದ ಕುರಿತು ಅವರು ಅಭಿಮಾನಿಗಳಿಗೆ ಕೇಳಿದ 4 ಪ್ರಶ್ನೆಗಳು ವೈರಲ್(viral post)​ ಆಗಿದೆ.

ಸಚಿನ್​ ತೆಂಡೂಲ್ಕರ್​ ಅವರು ‘ಹಿಂದಿ ದಿವಸ್’ ಹಿನ್ನೆಲೆಯಲ್ಲಿ ಕೆಲವು ಕ್ರಿಕೆಟ್ ಪರಿಭಾಷೆಗಳ ಬಗ್ಗೆ ತಮ್ಮ ಪಾಲೋವರ್ಸ್​ಗಳಿಗೆ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಶ್ನೆಗಳೆಂದರೆ ಅಂಪೈರ್, ವಿಕೆಟ್ ಕೀಪರ್, ಫೀಲ್ಡರ್ ಮತ್ತು ಹೆಲ್ಮೆಟ್ ಇದನ್ನು ಹಿಂದಿಯಲ್ಲಿ ಹೆಸರಿಸ ಹೇಳಬಲ್ಲಿರಾ? ಎಂದು ಕೇಳಿದ್ದಾರೆ. ಈ ಪ್ರಶ್ನೆಯನ್ನು ಕಂಡ ಅನೇಕ ನೆಟ್ಟಿಗರು ಇದು ಐಎಎಸ್​ ಪ್ರರೀಕ್ಷೆಯಲ್ಲಿ ಬರುವ ಪ್ರಶ್ನೆಗಿಂತ ಕಷ್ಟವಾಗಿದೆ ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಪ್ರಶ್ನೆಗೆ ಉತ್ತರಿಸಿದ್ದಾರೆ.

ಸಚಿನ್​ ಕೇಳಿದ ಪ್ರಶ್ನೆಗಳು

ಗೋಲ್ಡನ್​ ಟಿಕೆಟ್​ ಪಡೆದ ಸಚಿನ್​

ಭಾರತದ ಆತಿಥ್ಯದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಆತಿಥ್ಯದೊಂದಿಗೆ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಗೆ ಬಿಸಿಸಿಐ ಸಚಿನ್​ ತೆಂಡೂಲ್ಕರ್​ ಅವರಿಗೆ ಕಳೆದ ವಾರ ಗೋಲ್ಡನ್​ ಟಿಕೆಟ್​ ನೀಡಿ ಆಹ್ವಾನಿಸಿತ್ತು. ವಿಶ್ವಕಪ್​ ಟೂರ್ನಿ ಅಕ್ಟೋಬರ್​ 5ರಿಂದ ಆರಂಭಗೊಳ್ಳಲಿದೆ.

ಭಾರತ ರತ್ನ ಪುರಸ್ಕೃತ

24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ ಸಚಿನ್​ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

ಇದನ್ನೂ ಓದಿ Sachin Tendulkar: ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಮನೆ ಎದುರು ಬೃಹತ್ ಪ್ರತಿಭಟನೆ; ಕಾರಣ?

ಚುನಾವಣಾ ಆಯೋಗದ ‘ನ್ಯಾಷನಲ್ ಐಕಾನ್’

ಸಚಿನ್​ ಅವರನ್ನು ಚುನಾವಣಾ ಆಯೋಗದ(Election Commission of India) ‘ರಾಷ್ಟ್ರೀಯ ಐಕಾನ್​’ ಆಗಿ(National Icon) ನೇಮಿಸಲಾಗಿದೆ. ದೇಶದ ಚುನಾವಣ ಪ್ರಕ್ರಿಯೆಯಲ್ಲಿ ಯುವ ಜನರು ಹೆಚ್ಚಿನ ರೀತಿಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಚಿನ್​ ಅವರನ್ನು ಐಕಾನ್ ಆಗಿ ಬುಧವಾರ ಚುನಾವಣಾ ಆಯೋಗ ಆಯ್ಕೆ ಮಾಡಿದೆ.  ಒಪ್ಪಂದದ ಪ್ರಕಾರ ತೆಂಡೂಲ್ಕರ್‌ ಅವರು ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತ ಪ್ರಮಾಣ ಹೆಚ್ಚಿಸುವ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಲಿದ್ದಾರೆ.

Exit mobile version