ಮುಂಬಯಿ: ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮಂಗಳವಾರ ಶ್ರೀಲಂಕಾದಲ್ಲಿ ನಡೆಯುವ ಟಿ20 ವಿಶ್ವ ಕಪ್ಗೆ ಸಜ್ಜಾಗುತ್ತಿದ್ದಾರೆ. ಏತನ್ಮಧ್ಯೆ ಅವರಿಗೆ ಮೈಕ್ರೊ ಬ್ಲಾಗಿಂಗ್ ಸಂಸ್ಥೆ ಟ್ವಿಟರ್ನಿಂದ ವಿಶೇಷ ಕೊಡುಗೆಯೊಂದು ಸಿಕ್ಕಿದೆ. ಇದು ಕಾಯಂ ನಾಯಕ ರೋಹಿತ್ ಶರ್ಮ, ಮಾಜಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಯಾರಿಗೂ ಸಿಗದ ವಿಶೇಷ ಸ್ಥಾನಮಾನವಾಗಿದೆ.
ಟ್ವಿಟರ್ ಮಾಲೀಕತ್ವ ಎಲಾನ್ ಮಸ್ಕ್ ಕೈ ಸೇರಿದ ಬಳಿಕ ಸೆಲೆಬ್ರಿಟಿಗಳಿಗೆ ನೀಡುವ ವಿಶೇಷ ಗುರುತುಗಳ (ಬ್ಲೂಟಿಕ್) ಮಾದರಿಯನ್ನು ಬದಲಿಸಲಾಯಿತು. ಉದ್ಯಮಿಗಳಿಗೆ ಗೋಲ್ಡನ್ ಟಿಕ್, ಸಕಾರಕ್ಕೆ ಗ್ರೇ ಟಿಕ್ ಹಾಗೂ ಉಳಿದ ಸೆಲೆಬ್ರಿಟಿಗಳಿಗೆ ಬ್ಲೂ ಟಿಕ್ ನೀಡಲಾಗುತ್ತಿದೆ. ಈ ಸೇವೆಗೆ ಹೆಚ್ಚುವರಿ ದರವನ್ನೂ ವಿಧಿಸಲಾಗುತ್ತಿದೆ. ಅಂತೆಯೇ ಹಾರ್ದಿಕ್ ಪಾಂಡ್ಯ ಅವರ ಅಕೌಂಟ್ಗೆ ಗೋಲ್ಡನ್ ಟಿಕ್ ನೀಡಲಾಗಿದೆ.
ಉದ್ಯಮಿಗಳಿಗೆ ನೀಡುವ ಗೋಲ್ಡನ್ ಟಿಕ್ ಅನ್ನು ಹಾರ್ದಿಕ್ ಪಾಂಡ್ಯ ಅವರಿಗೆ ಹೇಗೆ ನೀಡಲಾಯಿತು ಎಂಬುದೇ ನೆಟ್ಟಿಗರ ಪ್ರಶ್ನೆ. ರೋಹಿತ್ ಶರ್ಮ ಅವರು ವಿರಾಟ್ ಕೊಹ್ಲಿ ಸೇರಿದಂತೆ ಉಳಿದ ಕ್ರಿಕೆಟಿಗರ ಖಾತೆಯನ್ನು ಬ್ಲೂ ಟಿಕ್ ಮೂಲಕ ವೆರಿಫೈ ಮಾಡಿರುವಾಗ ಪಾಂಡ್ಯಗೆ ವಿಶೇಷ ಗೌರವ ಸಿಕ್ಕಿರುವುದು ವಿಶೇಷ ಎನಿಸಿದೆ.
ಹಾರ್ದಿಕ್ ಪಾಂಡ್ಯ ಅವರು ಉದ್ಯಮ ಹೊಂದಿದ್ದು, ಅದರ ಹೆಸರಲ್ಲಿ ವೆರಿಫೈ ಮಾಡಲು ಮುಂದಾಗಿರುವ ಕಾರಣ ಅವರಿಗೆ ಗೋಲ್ಡ್ ಟಿಕ್ ಸಿಕ್ಕಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Hardik Pandya | ಹಾರ್ದಿಕ್ ಪಾಂಡ್ಯ ಕೊಟ್ಟ ಗಿಫ್ಟ್ ನೋಡಿ ಬಸ್ ಚಾಲಕನ ಸಂಭ್ರಮ; ಏನದು ಉಡುಗೊರೆ?